ಕೊಪ್ಪಳ : ವ್ಯಂಗ್ಯ,ವಿಡಂಭನೆಯನ್ನು ಯುವ ಕವಿಗಳು ತಮ್ಮ ಕವನಗಳಲ್ಲಿ ತರಬೇಕು, ಕೇವಲ ಶಬ್ದಗಳನ್ನು ಜೋಡಿಸುವುದರಿಂದ ಕಾವ್ಯವಾಗಲಾರದು. ಕಾವ್ಯದ ಸ್ಥಾಯಿಭಾವ ಕವನಗಳಲ್ಲಿ ಮೂಡಿಬರಬೇಕು. ಇತ್ತೀಚಿಗೆ ಕವಿಸಮಯದಲ್ಲಿ ವಾಚನ ಮಾಡುತ್ತಿರುವ ಕವನಗಳು ಅತ್ಯುತ್ತಮವಾಗಿ ಮೂಡಿಬರುತ್ತಿವೆ. ನಿರಂತರ ಬರವಣಿಗೆಯ ಪ್ರಕ್ರಿಯೆಯಲ್ಲಿ ತೊಡಗಿರುವ ಯುವ ಬಳಗವನ್ನು ಅಭಿನಂದಿಸುತ್ತೇನೆ ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೮೪ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡಿ ಯುವ ಕವಿಗಳಿಗೆ ಕಿವಿಮಾತು ಹೇಳಿದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಡಾ.ಮಹಾಂತೇಶ ಮಲ್ಲನಗೌಡರ- ಕನ್ನಡಿ, ಡಾ.ವಿ.ಬಿ.ರಡ್ಡೇರ್- ಹೊಸ ಅಲೆಯ ಸಂತತಿ, ರಮೇಶ ಬನ್ನಿಕೊಪ್ಪ- ವಾಸ್ತವ, ಗುರುರಾಜ ದೇಸಾಯಿ- ಕಾಗೇರಿ ಕಾಕ, ಡಾ.ಬಸವರಾಜ ದೋಟಿಹಾಳ-ಪ್ರತಿನಿಧಿಗಳು, ಬಸವರಾಜ ಚೌಡಕಿ-ಹೂವು, ಕುರುವತ್ತಿಗೌಡ್ರ- ಸಮಯ, ಎನ್.ಜಡೆಯಪ್ಪ- ಚುಟುಕುಗಳು, ಶ್ರೀಮತಿ ಪುಷ್ಪಲತಾ ಏಳುಬಾವಿ- ವಾಸ್ತವ ಜೀವನ, ಕುಮಾರಿ ಪುಷ್ಪಾ- ಜಾತಿ, ಶಾಂತಿ ಶಾಂತಿ, ಡಾ.ರೇಣುಕಾ ಕರಿಗಾರ- ಲಿವ್ ಮಿ ಅಲೋನ್, ಜಿ.ಎಸ್.ಸಂಕನಗೌಡ್ರು- ಕನ್ನಡ ಶಾಯಿರಿಗಳು, ಶ್ರೀಮತಿ ಲಲಿತಾ ಭಾವಿಕಟ್ಟಿ- ಕಲಾದರ್ಶನ, ಮಹೆಮೂದಮಿಯಾ- ತಿರುಳ್ಗನ್ನಡ, ಕನಕಪ್ಪ ತಳವಾರ- ಶಾಯಿರಿ, ರಾಗಿ ಮತ್ತು ರಾಘವ, ಅನಸೂಯಾ ಜಾಗೀರದಾರ- ಎದೆಯ ಹಾಡು, ಎಂ.ಡಿ.ಹುಸೇನ್ -ಪಕ್ಷಾಂತರಿ, ಪ್ರಕಾಶ ಗೊಂಡಬಾಳ -ಪ್ರವಾಸಿ ಕವನಗಳನ್ನು ವಾಚನ ಮಾಡಿದರು. ಕಾರ್‍ಯಕ್ರಮದಲ್ಲಿ ಜಿ.ಎಸ್.ಗೋನಾಳ, ಹನುಮಂತಪ್ಪ ಅಂಡಗಿ, ಶ್ರೀನಿವಾಸ ಚಿತ್ರಗಾರ, ಶಿವಾನಂದ ಹೊದ್ಲೂರ, ಸುಬಾನ್ ಸಯ್ಯದ್, ಶಿವಪ್ರಸಾದ ಹಾದಿಮನಿ, ಕೃಷ್ಣಪ್ಪ ಸಂಗಟಿ, ಬಸವರಾಜ ಹಿತ್ತಲಮನಿ ಉಪಸ್ಥಿತರಿದ್ದರು. ಸ್ವಾಗತ- ರಮೇಶ ಬನ್ನಿಕೊಪ್ಪ, ವಂದನಾರ್ಪಣೆ- ಶಿವಪ್ರಸಾದ ಹಾದಿಮನಿ ಹಾಗೂ ಕಾರ್‍ಯಕ್ರಮವನ್ನು ಎನ್.ಜಡೆಯಪ್ಪ ನಡೆಸಿಕೊಟ್ಟರು.
0 comments:
Post a Comment