PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಕೊಪ್ಪಳ ನಗರಸಭೆ ಅಧ್ಯಕ್ಷ ಚಂದ್ರು ಕವಲೂರ , ಉಪಾಧ್ಯಕ್ಷೆ ರೋಷನಬಿ ಮನಿಯಾರ ವಿರುದ್ದದ
ಅವಿಶ್ವಾಸ ಪ್ರಕ್ರಿಯೆ ಪ್ರಮುಖ ಘಟಕ್ಕೆ ತಲುಪಿದ್ದು ಮಂಗಳವಾರದಂದು ನಗರಸಭೆಗೆ ಅರ್ಜಿ ಸಲ್ಲಿಸಲಾಗಿದೆ.
ಕಾಂಗ್ರೆಸ್ ನ 11 , ಜೆಡಿ ಎಸ್ ನ 7, ಬಿಜೆಪಿಯ 3, ಓರ್ವ ಪಕ್ಷೇತರ ಸೇರಿದಂತೆ ಒಟ್ಟು
22ಸದಸ್ಯರು ಅರ್ಜಿಗೆ ಸಹಿ ಹಾಕಿದ್ದಾರೆಂದು ತಿಳಿದು ಬಂದಿದ. ಈ ಮೂಲಕ ಕಳೆದ 4 ತಿಂಗಳಿಂದ
ಆಗಾಗ ಕೇಳ ಬರುತ್ತಿದ್ದ ಮೂಲಕ ಆಗಾಗ ಕೇಳಿಬರುತ್ತಿದ್ದ ಅವಿಶ್ವಾಸ ಗೊತ್ತುವಳಿ ಈ ಬಾರಿ ಪ್ರಮುಖ
ಘಟ್ಟಕ್ಕೆ ತಲುಪಿದಂತಾಗಿದೆ. ಕಳೆದ 3 ತಿಂಗಳ ಹಿಂದೆಯೂ ಅಧ್ಯಕ್ಷರ ವಿರುದ್ದ ಅವಿಶ್ವಾಸದ ಪ್ರಕ್ರಿಯೆ ಆರಂಭಗೊಂಡಿತ್ತಾದರೂ ಯಸ್ವಿಯಾಗಿರಲಿಲ್ಲ. ಆದರೆ ಈ ಬಾರಿ ಅಧ್ಯಕ್ಷರ ಜೊತೆ ಉಪಾಧ್ಯಕ್ಷರ ಅವಿಶ್ವಾಸ ಮಂಡನೆಯಾಗಲಿದೆ. 31 ಸದಸ್ಯ ಬಲದ ಕೊಪ್ಪಳ ನಗರಸಭೆಯಲ್ಲಿ 16 ಜೆಡಿ ಎಸ್ , 11 ಕಾಂಗ್ರೆಸ್, 3 ಬಿಜೆಪಿ ಓರ್ವ ಪಕ್ಷೇತರ ಸದಸ್ಯರಿದ್ದಾರೆ.
ಅಧ್ಯಕ್ಷ ಉಪಾಧ್ಯಕ್ಷರ ಅವಿಶ್ವಾಸ ಅರ್ಜಿ ಸಲ್ಲಿಕೆಯ ನಂ ತರನಗರದಲ್ಲಿ ರಾಜಕೀಯ ಚರ್ಚೆಗಳು ಗರಿಗೆದರಿವೆ.

Advertisement

0 comments:

Post a Comment

 
Top