PLEASE LOGIN TO KANNADANET.COM FOR REGULAR NEWS-UPDATES


ಲೈಂಗಿಕ ಶಿಕ್ಷಣ ಕಡ್ಡಾಯ ಮಾಡಿದರೆ ಅತ್ಯಾಚಾರ ಅನಾಚಾರಗಳು ಕಡಿಮೆಯಾಗುತ್ತವೆ.ಕೆಲವು ಯಥಾಸ್ಥಿತಿವಾದಿಗಳು ಸಂಪ್ರದಾಯವಾದಿಗಳು ಹೆಚ್ಚಾಗಿ ಹೇಗಿದ್ದರೂ ನಡೆಯುತ್ತೆ ಯಾಕೆ ಹೊಸದನ್ನು ಬಯಸಬೇಕು ಎನ್ನುವ ನೇತ್ಯಾತ್ಮಕ ವಿಚಾರದಿಂದ ಈ ರೀತಿಯಾಗುತ್ತದೆನಮ್ಮ ಹುಡುಗರು ಹಾಳಾಗುತ್ತಾರೆ,ಲೈಂಗಿಕ ವಿಷಯದ ಬಗ್ಗೆ ಈಗಲೇ ಯಾಕೆ ಹೇಳಬೇಕು. ಅಂದರೆ ಅವರಿಗೆ ಲೈಂಗಿಕ ಶಿಕ್ಷಣ ಅಂದರೆ ಸಂಭೋಗದ ಬಗ್ಗೆ ಮಾತನಾಡುತ್ತಾರೆ, ವಿಕೃತ ಕಾಮದ ಬಗ್ಗೆ , ವಿಕೃತ ಮನಸ್ಸುಗಳ ಬಗ್ಗೆ ಹೇಳುತ್ತೇವೆ ಎಂದು ಕಲ್ಪನೆಯಲ್ಲಿರುವುದರಿಂದ ಅವರು ವಿರೋಧಿಸುತ್ತಾರೆ. ನಮ್ಮ ದೇಹದಲ್ಲಾಗುವ ಮನೋ ಲೈಂಗಿಕ ಬದಲಾವಣೆಯ ಬಗ್ಗೆ ಹೇಳುತ್ತೇವೆ. ಈ ವಿರೋಧಗಳು ಅಜ್ಞಾನದಿಂದಲೇ ವಿನಹ ವಿಜ್ಞಾನದಿಂದಲೇ ಅಲ್ಲ. ಹೀಗಾಗಿ ಇದನ್ನು ವಿರೋಧಿಸಿದರು. ಕಳೆದ ವರ್ಷ ಕೆಲವು ಸ್ವಾಮಿಜಿಗಳು ಇದನ್ನು ವಿರೋಧಿಸಿದರು.    ಲೈಂಗಿಕ ಶಿಕ್ಷಣವನ್ನು ಶಾಲಾ ಮಕ್ಕಳಿಗೆ ನೀಡಬೇಕು ಎನ್ನುವ ಪ್ರಸ್ತಾವನೆಯನ್ನು ಮೂವರು ಸ್ವಾಮಿಜಿಗಳು ವಿರೋಧಿಸಿದ್ದರು. ಹೀಗಾಗಿ ಕಳೆದ ಸಾಲಿನಿಂದಲೇ ಶಾಲೆಯಲ್ಲಿ ಆರಂಭವಾಗಬೇಕಿದ್ದ ಶಿಕ್ಷಣ ನಿಂತು ಹೋಯ್ತು. ನಿಜವಾಗಿಯೂ ಸ್ವಾಮಿಜಿಗಳಿಗೆ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆ ಎಂದು ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆಯ ಡಾ.ಕೆ..ಅಶೋಕ ಪೈ ಹೇಳಿದರು.  ನಮ್ಮ ದೇಹದಲ್ಲಾಗುವ ಬದಲಾವಣೆಯ ಬಗ್ಗೆ ವಿವರಣೆ ಬೇಕು. ಎಂತಹ ಪದವಿ ಪಡೆದರೂ ಸಹ ಇಂತಹ ವಿಚಾರಗಳು ಯಾರೂ ಹೇಳಿಕೊಟ್ಟಿಲ್ಲ. ಸ್ವಾಮಿಜಿಗಳೂ ಸಹ ಮನುಷ್ಯರು ತಾನೇ ಹೀಗಾಗಿ ಅವರಿಗೂ ಲೈಂಗಿಕ ಶಿಕ್ಷಣ ಬೇಕು. ಇದರಿಂದ ಅವರ ಜೀವನದ ಗುಣಮಟ್ಟವೂ ಹೆಚ್ಚಾಗುತ್ತೆ. ಮಠಾಧೀಶರಿಗೆ ಸಮಾಜದಲ್ಲಿ ಹೆಚ್ಚಿನ ಪ್ರಭಾವವಿರುತ್ತೆ ಹೀಗಾಗಿ ಅವರಿಂದ ಪ್ರಭಾಯುತ ಗೊಳ್ಳುವ ದೊಡ್ಡ ಭಕ್ತಸಮೂಹದ ಮೇಲೆಯೂ ಸಹ ಪ್ರಭಾವವಾಗುತ್ತೆಯಥಾಸ್ಥಿತಿವಾದಿಗಳು ಇದನ್ನು ವಿರೋಧಿಸುತ್ತಾರೆ. ಮತ್ತು ವೈಶ್ಯವಾಟಿಕೆಯನ್ನು ಕಾನೂನುಬದ್ದಗೊಳಿಸಬೇಕು ಇದರಿಂದ ಸಮಾಜದಲ್ಲಿ ಅತ್ಯಾಚಾರ ಅನಾಚಾರಗಳು ಕಡಿಮೆಯಾಗುತ್ತವೆ.
16 Mar 2016

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top