ಕೊಪ್ಪಳ, ಅ.೧೩ (ಕ ವಾ) ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಅ.೧೪ ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ನಾಗರತ್ನ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ||ಶ್ರೀಕಾಂತ ಬಾಸೂರು ಅಧ್ಯಕ್ಷತೆ ವಹಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ದಶರಥ, ಕಿರಿಯ ಸಿವಿಲ್ ನ್ಯಾಯಾಧೀಶೆ ಕವಿತಾ ಶಿವರಾಯ ಉಂಡೋಡಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ||ಬಿ.ಎಸ್.ಲೋಕೇಶ, ಮನೋವೈದ್ಯ ಡಾ||ಎಂ.ಎಂ.ಕಟ್ಟಿಮನಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ||ಎಸ್.ಕೆ.ದೇಸಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಿ.ಪಿ.ವಸಂತಪ್ರೇಮಾ, ತಹಶೀಲ್ದಾರ ಪುಟ್ಟರಾಮಯ್ಯ, ಜಿಲ್ಲಾ ಸರ್ಕಾರಿ ವಕೀಲ ಬಿ.ಶರಣಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ.ಪಾನಘಂಟಿ, ಕಾರ್ಯದರ್ಶಿ ರಾಜಶೇಖರ್ ಮಾಲಿಪಾಟೀಲ್ ಜಿಲ್ಲಾ ವಾರ್ತಾಧಿಕಾರಿ ಬಿ.ವ್ಹಿ. ತುಕಾರಾಂರಾವ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬಳಿಕ ನಡೆಯಲಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾನಸಿಕ ರೋಗದ ವ್ಯಕ್ತಿತ್ವ ವಿಕಾರಗಳು ಹಾಗೂ ಸೋಂಕು ರೋಗ ಹರಡುವ ಮುಂಜಾಗ್ರತೆ ವಹಿಸುವ ಕುರಿತು ಮಾನಸಿಕ ತಜ್ಞ ಡಾ||ಕೃಷ್ಣ ಓಂಕಾರ ಉಪನ್ಯಾಸ ನೀಡಲಿದ್ದಾರೆ.

ವಿವಿಧ ಕ್ರೀಡೆಗಳಲ್ಲಿ ರಾಜ್ಯ ಮತ್ತು ವಿಭಾಗ ಮಟ್ಟಕ್ಕೆ ಆಯ್ಕೆ.
ಕೊಪ್ಪಳ, ಅ.೧೩ (ಕ ವಾ) ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಜರುಗಿದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದ ಕ್ರೀಡಾಶಾಲೆಯ ಕ್ರೀಡಾಪಟುಗಳು ರಾಜ್ಯ ಮತ್ತು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಥ್ಲೆಟಿಕ್ಸ್ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳ ವಿವರ : ೬೦೦ ಮೀ. ವೈಯಕ್ತಿಕ ಓಟದಲ್ಲಿ ಮಂಜುಳಾ ರಂಗಪ್ಪ ರಾಠೋಡ್ ಪ್ರಥಮ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ, ೪೦೦ ಮೀ ಓಟದಲ್ಲಿ ಬಾಲಮ್ಮ ಹನುಮಪ್ಪ ಮೇಟಿ ಪ್ರಥಮ, ೪೦೦ ಮೀಟರ್ ಓಟದಲ್ಲಿ ದೀಪಾ ದುರುಗಪ್ಪ ಮೇಟಿ ಪ್ರಥಮ ಹಾಗೂ ೨೦೦ ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, ೬೦೦ ಮೀ. ಓಟದಲ್ಲಿ ಮಲ್ಲಮ್ಮ ದೇವಪ್ಪ ಲಗಳೂರು ದ್ವಿತೀಯ, ೧೧೦ ಮೀ. ಹರ್ಡಲ್ಸ್‌ನಲ್ಲಿ ರೇಣುಕಾ ಸಂಗಪ್ಪ ಹುಲ್ಯಾಳ ದ್ವಿತೀಯ, ೬೦೦ ಮೀ. ಓಟದಲ್ಲಿ ಮೂರ್ತಿ ಹೊಳೆಯಪ್ಪ ಭಜಂತ್ರಿ ಪ್ರಥಮ, ೪೦೦ ಮೀ. ಓಟದಲ್ಲಿ ನಾಗನಗೌಡ ಪೊಲೀಸ್ ಪಾಟೀಲ್ ದ್ವತೀಯ ಹಾಗೂ ೪*೧೦೦ ರಿಲೇನಲ್ಲಿ ದೀಪಾ, ಮಂಜುಳಾ, ರೇಣುಕಾ ಮತ್ತು ಮಲ್ಲಮ್ಮ ಇವರ ತಂಡ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಾಲಿಬಾಲ್‌ನಲ್ಲಿ ವಿಭಾಗಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳ ವಿವರ : ಬಾಲಕರ ವಿಭಾಗದಲ್ಲಿ ಮೂರ್ತಿ ಹೊಳೆಯಪ್ಪ, ಮುತ್ತಣ್ಣ ನಾಗಪ್ಪ ಮೇಟಿಗೌಡ್ರ, ಸಿದ್ದಪ್ಪ ಹನುಮಪ್ಪ ಕೋರಿ, ಹನುಮಂತ ರಾಮಪ್ಪ, ಪ್ರಭು ಮಲ್ಲಪ್ಪ ದೋಟಿಹಾಳ ಮತ್ತು ಸಂತೋಷ ಹನುಮಪ್ಪ, ಪ್ರದೀಪ ಹನುಮಂತಪ್ಪ ಇವರನ್ನೊಳಗೊಂಡ ತಂಡ ಜಿಲ್ಲಾ ಮಟ್ಟದ ಕ್ರೀಡಾಕೂಟಲದಲ್ಲಿ ಗಂಗಾವತಿ ತಂಡವನ್ನು ಮಣಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅದೇ ರೀತಿ ಬಾಲಕಿಯರ ವಿಭಾಗದಲ್ಲಿ ಭಾಗ್ಯ ಹುಲುಗಪ್ಪ ವಡ್ಡರ್, ಇಂದಿರಾ ರತ್ನಾ ನಾಯ್ಕ, ಸಂಗೀತ ರಾಮಪ್ಪ ದೊಡ್ಡಮನಿ, ಯಮನವ್ವ ಲಕ್ಷ್ಮಪ್ಪ ಗಾಲೇರ್, ನೇತ್ರಾವತಿ ನಿಂಗಪ್ಪ ಯರ್ರಿ, ಐಶ್ವರ್ಯ ಬಸಪ್ಪ ಒಂಟೆಲೆ, ಜ್ಯೋತಿ ಶರಣಪ್ಪ, ರೇಷ್ಮಾ ಬಸವನಗೌಡ ಮರೇಗೌಡ ಮತ್ತು ರಾಜೇಶ್ವರಿ ಶೇಖರಗೌಡ ಇವರನ್ನೊಳಗೊಂಡ ತಂಡ ಯಲಬುರ್ಗಾ ತಂಡವನ್ನು ಮಣಿಸುವ ಮೂಲಕ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.
ಕ್ರೀಡಾಶಾಲೆಯ ಕ್ರೀಡಾಪಟುಗಳು ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿ ವಿಭಾಗ ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ||ಶಾರದಾ ನಿಂಬರಗಿ ಹರ್ಷ ವ್ಯಕ್ತಪಡಿಸಿದ್ದು, ಆಯ್ಕೆಯಾಗಲು ಕಾರಣರಾದ ಅಥ್ಲೆಟಿಕ್ಸ್ ತರಬೇತುದಾರ ತಿಪ್ಪಣ್ಣ ಟಿ.ಮಾಳಿ ಹಾಗೂ ವಾಲಿಬಾಲ್ ತರಬೇತುದಾರ ಸುರೇಶ ಯಾದವ್ ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.