PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-13-  ನನ್ನನ್ನು ಹೈದ್ರಾಬಾದ್ ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ನಾನು ಚಿರಋಣಿಯಾಗಿದ್ದೇನೆ. ಇದನ್ನು ಜಿಲ್ಲೆಯ ಎಲ್ಲಾ ಯುವ ಸಾಹಿತಿಗಳಿಗೆ ಅರ್ಪಿಸುತ್ತೇನೆ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ನಾನು ಇನ್ನಷ್ಟು ಸಾಹಿತ್ಯ ಸೇವೆ ಸಲ್ಲಿಸಲು ಅನುಕೂಲವಾಗಿದೆ. ಕೊಪ್ಪಳ ಜಿಲ್ಲೆಯ ಯುವಕರು ಸಾಹಿತ್ಯ ಕ್ಷೇತ್ರದತ್ತ ಒಲವು ಬೆಳಸಿಕೊಳ್ಳಲಿ ಎಂದು ಹೈದ್ರಾಬಾದ್ ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಿ.ಎಸ್. ಗೋನಾಳ ಹೇಳಿದರು.
    ಅವರು ಕೊಪ್ಪಳದ ಪದಕಿ ಲೇಔಟಿನ ತಮ್ಮ ನಿವಾಸದಲ್ಲಿ ಹೈದ್ರಾಬಾದ್ ಕರ್ನಾಟಕ ನಾಗರಿಕರ ವೇದಿಕೆ, ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆ ಸಮ್ಮೇಳನಕ್ಕೆ ನೀಡಿದ ಅಧಿಕೃತ ಆಹ್ವಾನವನ್ನು ಸ್ವೀಕರಿಸಿ ಮಾತನಾಡಿದರು.
    ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆ ರಾಜ್ಯಾಧ್ಯಕ್ಷರಾದ ಮಹೇಶಬಾಬು ಸುರ್ವೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಹೈದ್ರಾಬಾದ್ ಕರ್ನಾಟಕ ಭಾಗದ ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಈ ರೀತಿಯಾಗಿ ಯುವ ಸಾಹಿತ್ಯ ಸಮ್ಮೇಳನವನ್ನು ಪ್ರಥಮವಾಗಿ ಹಮ್ಮಿಕೊಳ್ಳಲಾಗಿದೆ. ಈ ಭಾಗದ ಪ್ರತಿಭೆಗಳಿಗೆ ರಾಜ್ಯದ ಮಾನ್ಯತೆ ಸಿಗುವಂತೆ ಮಾಡುವ ಪ್ರಯತ್ನವಾಗಿಯೇ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.
    ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತಾ, ಜಿ.ಎಸ್. ಗೋನಾಳರು ಗ್ರಾಮೀಣ ಪ್ರದೇಶದ ಹಿನ್ನೆಲೆಯಿಂದ ಬಂದು ವಿಶಾಲ ಪ್ರಕಾಶನದ ಅಡಿಯಲ್ಲಿ ೧೮ ಕೃತಿಗಳನ್ನು ಹೊರತರುವುದರ ಮೂಲಕ ಹಲವಾರು ಯುವ ಪ್ರತಿಭೆಗಳನ್ನು ಗುರುತಿಸಿ ಅವರ ಗ್ರಂಥಗಳನ್ನು ಪ್ರಕಟಿಸುವ ಮೂಲಕ ಅತ್ಯುತ್ತಮ ಸಾಹಿತ್ಯ ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯ. ಇವರಿಂದ ನಿರಂತರವಾಗಿ ಹೀಗೆಯೇ ಕನ್ನಡಮ್ಮನ ಸೇವೆ ಮುಂದುವರಿಯಲಿ ಎಂದು ಶುಭ ಹಾರೈಸಿದರು.
    ಹಿರಿಯ ಪತ್ರಕರ್ತರಾದ ಹೆಚ್.ಎಸ್. ಹರೀಶ, ರುದ್ರಗೌಡ ಬಿ. ಪಾಟೀಲ್, ವೀರಕನ್ನಡಿಗ ಯುವಕ ಸಂಘದ ಅಧ್ಯಕ್ಷರಾದ ಶಿವಾನಂದ ಹೊದ್ಲೂರ, ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಬಸಪ್ಪ
    ಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಂ. ಸಾಧಿಕಲಿ ಅವರು ಸ್ವಾಗತಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾದ ಎನ್.ಎಮ್ ದೊಡ್ಡಮನಿ ನಿರೂಪಿಸಿದರು. ಪತ್ರಕರ್ತರಾದ ಹನುಮಂತಪ್ಪ ಹಳ್ಳಿಕೇರಿ ವಂದಿಸಿದರು.
ಬಾರಕೇರ, ಮಕ್ಕಳ ಸಾಹಿತಿಗಳಾದ ಶ್ರೀನಿವಾಸ ಚಿತ್ರಗಾರ, ಗವಿಸಿದ್ದಪ್ಪ ಬಾರಕೇರ, ವಿಕಲ ಚೇತನರ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿವಾಡಗಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿಗಳಾದ ಶಿವಪ್ಪ ಜೋಗಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಗೊಂಡಬಾಳ, ಶಿಕ್ಷಕರಾದ ರಾಮಚಂದ್ರಗೌಡ ಗೊಂಡಬಾಳ, ಮಂಜುನಾಥ ಚಿತ್ರಗಾರ, ಮಾರುತಿ ಆರೇರ, ಮಂಜುನಾಥ ಗದಗಿನ, ಜೋಡಪ್ಪ ಯತ್ನಟ್ಟಿ, ಪಾಂಡುರಂಗ ಚಿತ್ರಗಾರ, ಹಿರಿಯರಾದ ಫಕೀರಪ್ಪ ಗೋಟೂರ, ವೀರಣ್ಣ ಕಳ್ಳಿಮನಿ, ಉಮೇಶ ಪೂಜಾರ, ಖಾಜಾಸಾಬ್ ಮುದಗಲ್, ಕೆ. ರಾಘವೇಂದ್ರರಾವ್, ರತ್ನಾ ಜಿ. ಗೋನಾಳ, ವಿದ್ಯಾವತಿ ಚಿತ್ರಗಾರ, ಪ್ರಕಾಶಗೌಡ ಪಾಟೀಲ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
13 Oct 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top