ಪೂಣ್ಯ ಸ್ಮರಣೆ ಅಂಗವಾಗಿ ಇಂದು ಬೆಳಿಗ್ಗೆ ೯.೩೦ ರಿಂದ ಸಾಯಂಕಾಲ ೫.೦೦ ಗಂಟೆಯವರೆಗೆ ಶ್ರೀಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಶ್ರೀಗವಿಮಠದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಜರುಗಿತು.
ನಾಡಿನ ಹೆಸರಾಂತ ನರ ರೋಗ ತಜ್ಞರಾದ ಹುಬ್ಬಳ್ಳಿಯ ಡಾ.ಎಸ್.ಪಿ. ಬಳಿಗಾರ, ನಾರಾಯಣ ಹೃದಯಾಲಯ ಹುಬ್ಬಳ್ಳಿ-ಧಾರವಾಡದ ಹೃದಯ ರೋಗ ತಜ್ಞರಾದ ಡಾ.ಷಣ್ಮುಖ ಹಿರೇಮಠ, ಎಲುಬುಕೀಳು ತಜ್ಞರಾದ ಬೆಂಗಳೂರಿನ ಸಾಗರ ಆಸ್ಪತ್ರೆಯ ತಜ್ಞರಾದ ಡಾ.ಬಸವರಾಜ ಕ್ಯಾವಟರ್, ಉದರ ರೋಗ ತಜ್ಞರಾದ ಹುಬ್ಬಳ್ಳಿಯ ಡಾ. ಶ್ರೀಶೈಲ ಚಿನಿವಾಲರ, ಮೂತ್ರರೋಗ ತಜ್ಞರಾದ ಗದಗ ನಗರದ ಡಾ.ಶರಣಬಸವ ಆಲೂರ, ಸ್ತ್ರೀರೋಗ ತಜ್ಞರಾದ ಗಂಗಾವತಿಯ ಡಾ.ಸುಲೋಚನಾ ಚಿನಿವಾಲರ, ಜನರಲ್ ತಜ್ಞರಾದ ಕೊಪ್ಪಳದ ಡಾ.ಉಮೇಶ ರಾಜೂರ, ನೇತ್ರರೋಗ ತಜ್ಞರಾದ ಹೊಸಪೇಟೆಯ ಡಾ ಶ್ರೀಕಾಂತ ದೇಶಪಾಂಡೆ, ದಂತ ವೈದ್ಯರಾದ ಗಂಗಾವತಿಯ ಡಾ.ಅಕ್ಷತಾ ಚಿನಿವಾಲರ, ಕಿವಿ ಮೂಗು ಗಂಟಲು ತಜ್ಞರಾದ ಕೊಪ್ಪಳದ ಡಾ.ಕೆ ಮಲ್ಲಿಕಾರ್ಜುನ ಇವರಲ್ಲದೇ ಶ್ರೀಗವಿಸಿದ್ಧೇಶ್ವರ ಆಯುರ್ವೇದ ಕಾಲೇಜಿನ ನುರಿತ ತಜ್ಞರು ಸಹ ವಿವಿಧ ರೋಗಗಳಿಗೆ ಸಂಬಂಧಿಸಿದ ವೈದ್ಯರು ಭಾಗವಹಿಸಿದ್ದರು. ಈ ಶಿಬಿರವನ್ನು ಪೂಜ್ಯ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ತಪಾಸಣೆಗೆ ಬಂದಂತಹ ತಂದೆ-ತಾಯಂದಿರ ಕೈಯಿಂದ ದೀಪಬೆಳಗಿಸುವದರ ಮೂಲಕ ಚಾಲನೆಗೊಳಿಸಿದರು. ಡಾ.ಬಸವರಾಜ ಸವಡಿ ಪ್ರಾಚಾರ್ಯರು ಹಾಗೂ ಡೀನ್‌ಗಳಾದ ಡಾ.ಕೆ.ಬಿ.ಹಿರೇಮಠ ಹಾಗೂ ಸಕಲ ಸಿಬ್ಬಂಧಿಗಳ ನೇತೃತ್ವದಲ್ಲಿ ಶಿಬಿರ ಯಶಸ್ವಿಯಾಯಿತು.
0 comments:
Post a Comment
Click to see the code!
To insert emoticon you must added at least one space before the code.