PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ ದಿನಾಂಕ ೧೫-೦೩-೨೦೧೫ ರ ರವಿವಾರದಂದು  ಶ್ರೀ ಮ.ನಿ.ಪ್ರ.ಜ.ಲಿಂ.ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ೧೨ ನೇ ಪುಣ್ಯ ಸ್ಮರಣೋತ್ಸವದ ನಿಮಿತ್ಯವಾಗಿ  ಬೆಳಿಗ್ಗೆ  ೭.೩೦ ಗಂಟೆಗೆ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀಮಳೆಮಲ್ಲೇಶ್ವರ ದೇವಸ್ಥಾದಿಂದ ಶ್ರೀಗವಿಮಠದವರೆಗೆ ಪಾದಯಾತ್ರೆ ನಡೆಯಿತು. ಈ ಪಾದಯಾತ್ರೆಯಲ್ಲಿ ಬಳಗಾನೂರಿನ ಶ್ರೀಶಿವಶಾಂತವೀರ ಶರಣರು, ಶ್ರೀಷ.ಬ್ರ.ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ ಹೆಬ್ಬಾಳ, ಮತ್ತಿತರ ಹರಗುರುಚರ ಮೂರ್ತಿಗಳು ಭಾಗವಹಿಸಿದ್ದರು. ಬಿಸಿಲನ್ನು ಲೆಕ್ಕಿಸದೇ ಪೂಜ್ಯರ ಜೊತೆಯಾಗಿ ಅಸಂಖ್ಯಾತ  ಸದ್ಭಕ್ತರು,  ಕೊಪ್ಪಳ ಹಾಗೂ ಸುತ್ತಮುತ್ತಲಿನ ಪ್ರಮುಖರು, ರಾಜಕೀಯ ಧುರೀಣರು, ಭಾಗವಹಿಸಿದ್ದರು. ಓಂ ಶಿವಶಾಂತವೀರಾಯ ನಮ: ಎಂಬ ಗುರುನಮನದ ಮೊಳಗು ಎಲ್ಲೆಡೆ ಪಸರಿಸುತ್ತಿತ್ತು. ಏಳೆಂಟು ಸಾವಿರ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ರಸ್ತೆಯುದ್ದಕ್ಕೂ ಭಕ್ತಾಧಿಗಳು ನಿಂತುಕೊಂಡು ಪೂಜ್ಯರಿಗೆ ಹೂಮಳೆ ಸುರಿಸುತ್ತಾ ಸ್ವಾಗತಿಸುತ್ತಿದ್ದರು.  ಪಾದಯಾತ್ರಿಗಳಿಗೆ ದಾರಿಯಲ್ಲಿ ಕೆಲವು ಸಂಘಟನೆಯವರು ಶರಬತ್,ಮಜ್ಜಿಗೆ ಹಾಗೂ ನೀರಿನ ವ್ಯವಸ್ಥೆ ಮಾಡಿ ಅವರ ದಣಿವಾರಿಸುವಂತಹ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು. ಓಂ ಶಿವಶಾಂತವೀರಾಯ ನಮ: ಎಂಬ ಗುರುನಮನದ ಮೊಳಗು ಎಲ್ಲೆಡೆ ಪಸರಿಸುತ್ತಿತ್ತು.  ಪಾದಯಾತ್ರೆಯು ಮಳೆಮಲ್ಲೇಶ್ವರ ದೇವಸ್ಥಾನದಿಂದ ಬನ್ನಿಕಟ್ಟಿ ಮಾರ್ಗವಾಗಿ ಬಸ್ಸ ಸ್ಟ್ಯಾಂಡ್, ಅಶೋಕಸರ್ಕಲ್, ಜವಾಹರ ರಸ್ತೆ, ಶಾರದಾ ಟಾಕೀಸ್ ಮಾರ್ಗವಾಗಿ ೧೧ ಗಂಟೆಗೆ ಶ್ರೀಗವಿಮಠ ತಲುಪಿತು. 

15 Mar 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top