ಕೊಪ್ಪಳ : ಕೊಪ್ಪಳ ಜಿಲ್ಲೆಯ ಸಮಗ್ರ ಶೈಕ್ಷಣಿಕ,ಸಾಮಾಜಿಕ,ಆರ್ಥಿಕ,ರಾಜಕೀಯ ಹಾಗೂ ಧಾರ್ಮಿಕ ಮಾಹಿತಿಯನ್ನೊಳಗೊಂಡ ಪುಸ್ತಕದ ೨ನೇ ಆವೃತ್ತಿಯನ್ನು ಹೊರತಂದಿರುವುದು ಸಂತಸದ ಸಂಗತಿ. ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಇದು ಬಹಳಷ್ಟು ಉಪಯೋಗಕಾರಿ. ಈ ಮಾಹಿತಿ ಆನ್‌ಲೈನ್ ನಲ್ಲೂ ದೊರಕುವಂತೆ ಮಾಡಿರುವ ಕನ್ನಡನೆಟ್ ಡಾಟ್ ಕಾಂ ಬಳಗದ ಪ್ರಯತ್ನಕ್ಕೆ ಅಭಿನಂದನೆಗಳು ಎಂದು ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಇಂದು ಕನ್ನಡನೆಟ್ ಡಾಟ್ ಕಾಂ ಬಳಗ ಹೊರತಂದಿರುವ ಕೊಪ್ಪಳ ಜಿಲ್ಲಾ ಡೈರೆಕ್ಟರಿ-೨೦೧೫ ನ್ನು ಲೋಕಾರ್ಪಣೆ ಮಾಡಿದರು. ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು ಸೇರಿದಂತೆ ಸಮಗ್ರ ಮಾಹಿತಿಯನ್ನೊಳಗೊಂಡ ಇಂತಹ ಪುಸ್ತಕ ಸಂಗ್ರಹಯೋಗ್ಯ, ಜಿಲ್ಲೆಗೆ ಬೇಕಾಗಿರುವಂತಹ ಮಾಹಿತಿ ಕೋಶ ಇದಾಗಿದೆ. ಅತ್ಯಂತ ಶ್ರಮವಹಿಸಿ, ಆಸಕ್ತಿಯಿಂದ ಈ ಪುಸ್ತಕ ಹೊರತಂದಿರುವ ಕನ್ನಡನೆಟ್ ಡಾಟ್ ಕಾಂ ಬಳಗಕ್ಕೆ ಶುಭವಾಗಲಿ ಎಂದು ಹಾರೈಸಿದರು.
ಕನ್ನಡನೆಟ್ ಡಾಟ್ ಕಾಂ ಸಂಪಾದಕ ಸಿರಾಜ್ ಬಿಸರಳ್ಳಿ ಕೊಪ್ಪಳ ಜಿಲ್ಲಾ ಡೈರೆಕ್ಟರಿ-೨೦೧೫ ಒಳಗೊಂಡಿರುವ ವಿಷಯಗಳ ಕುರಿತು ಶ್ರೀಗಳಿಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ರಾಜಾಬಕ್ಷಿ.ಎಚ್.ವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೊಪ್ಪಳ ಜಿಲ್ಲಾ ಡೈರೆಕ್ಟರಿಯಲ್ಲಿ ಕೊಪ್ಪಳ ಜಿಲ್ಲೆಯ ಬ್ಯಾಂಕ್,ಸ್ಕೂಲ್ ಕಾಲೇಜ್,ಪತ್ರಕರ್ತರ,ಸಾಹಿತಿಗಳ,ವಕೀಲರ, ವೈದ್ಯರ, ಫೋಟೋ ಗ್ರಾಫರ‍್ಸ್, ಗುತ್ತಿಗೆದಾರರ, ರಾಜಕಾರಣಿಗಳ,ಸಂಘಟನೆಗಳ, ರಿಯಲ್ ಎಸ್ಟೇಟ್, ಅಂಗಡಿಗಳು,ಹೋಟೆಲ್,ಬಾರ್ ,ರೆಸ್ಟೋರೆಂಟ್,ಲಾಡ್ಜ್,ಸರಕಾರಿ ಅಧಿಕಾರಿಗಳ,ಎಮರ್ಜನ್ಸಿ ನಂಬರ್ ಗಳು ಸೇರಿದಂತೆ ಇನ್ನೂ ಹತ್ತಾರು ವಿಷಯಗಳ ಮಾಹಿತಿ,ಫೋನ್ ನಂಬರ್ ನೀಡಲಾಗಿದೆ.
0 comments:
Post a Comment
Click to see the code!
To insert emoticon you must added at least one space before the code.