ನಗರದ ಕಿನ್ನಾಳ ರಸ್ತೆಯ ಪ್ರಗತಿ ನಗರದ ನಿವಾಸಿಗಳು ರವಿವಾರ ಸಂಜೆ ಸಭೆ ಸೇರಿ ದೇವಸ್ಥಾನ,ಉದ್ಯಾನವನ ನಿರ್ಮಾಣ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗಾಗಿ ವಿನಾಯಕ ಸೇವಾ ಸಮಿತಿ ರಚಿಸಿದರು.ಅಧ್ಯಕ್ಷರಾಗಿ ಗಿರೀಶ ಕಣವಿ,ಉಪಾಧ್ಯಕ್ಷರಾಗಿ ಮಹೇಶ ಹಳ್ಳಿ,ಶಿವಪುತ್ರಪ್ಪ ದಿವಟರ,ಶೇಖರಪ್ಪ ಬಡಿಗೇರ, ಪ್ರಧಾನ ಕಾರ್ಯದರ್ಶಿಯಾಗಿ ವಿಶ್ವನಾಥ ಸಿದ್ಧಾಂತಿ, ಜಂಟಿ ಕಾರ್ಯದರ್ಶಿಯಾಗಿ ಗೋಪಾಲರಾವ್, ಖಜಾಂಚಿಯಾಗಿ ಎನ್.ಕೆ.ಮಂಜುನಾಥ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ದೇವೆಂದ್ರಪ್ಪ ಎನ್.ಡೊಳ್ಳಿನ,ಅಡವಿರಾವ್ ಕಸಬೆ,ಶಾಂತಪ್ಪ ಮೂಲಿಮನಿ,ಮುರಳೀಧರ ಹಳ್ಳಿಕೇರಿ ಶಿವಾನಂದಯ್ಯ ಹಿರೇಮಠ,ಗವಿಸಿದ್ಧಪ್ಪ ದಿವಟರ,ಮಂಜುನಾಥ ಸಾಲಿಮಠ ,ರಮೇಶ ಅಡವಿಭಾವಿ ಮೊದಲಾದವರನ್ನು ಸಭೆಯಲ್ಲಿ ಒಕ್ಕೊರಲಿನಿಂದ ಆರಿಸಲಾಯಿತು.
ಹೊಸ ಬಡಾವಣೆಯಾಗಿರುವ ಪ್ರಗತಿ ನಗರದಲ್ಲಿ ದೇವಸ್ಥಾನ,ಉದ್ಯಾನವನ,ರಸ್ತೆ,ಚರಂಡಿ,ವಿದ್ಯುದ್ದೀಪ,ಕುಡುಯುವ ನೀರು ಮೊದಲಾದ ಮೂಲ ಸೌಕರ್ಯಗಳನ್ನು ಪಡೆದುಕೊಳ್ಳಲೂ ಕೂಡ ಸಂಘ ಶ್ರಮಿಸುತ್ತದೆ ಎಂದು ನೂತನ ಅಧ್ಯಕ್ಷ ಗಿರೀಶ ಕಣವಿ ಹೇಳಿದರು.
0 comments:
Post a Comment
Click to see the code!
To insert emoticon you must added at least one space before the code.