ಕೊಪ್ಪಳ ೧೯ : ಸಮಾಜದಲ್ಲಿ ಇಂದಿಗೂ ಕೂಡ ಜನರು ಅನೇಕ ಅಪರಾಧಿಕೃತ್ತಗಳನ್ನು ಮಾಡುತ್ತಾರೆ ಅಂತವರಿಗೆ ಕಾನೂನು ಅರಿವು ನೀಡುವದರ ಮುಖಾಂತರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಶ ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಪ್ಪಳ ಶ್ರೀಕಾಂತ ದಾ. ಬಬಲಾದಿ ಹೇಳಿದರು.
ಅವರು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕಾನೂನು ವಿದ್ಯಾರ್ಥಿಗಳು ಉತ್ತಮ ರೀತಿ ಅಭ್ಯಾಸ ಮಾಡಿ ಸಮಾಜಕ್ಕೆ ನಿಮ್ಮ ಕೊಡುಗೆಯನ್ನು ನೀಡಿದಾಗ ನಿವು ಕಾನೂನು ವೃತ್ತಿ ಅಭ್ಯಾಸ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಹೇಳಿದರು.
ನಂತರ ಮಾತನಾಡಿದ ಹಿರಿಯ ದಿವಾಣಿ ನ್ಯಾಯಾಧೀಶ ಬಿ.ಧಶರಥ ಮಾತನಾಡಿ ಕಾನೂನು ವಿದ್ಯಾರ್ಥಿಗಳು ಅಭ್ಯಾಸ ಮಾಡುವಾಗ ಸರಿಯಾಗ ಮಾಡಬೇಕು ಇಲ್ಲದಿದ್ದರೆ ನೀವು ಮುಂದೆ ನ್ಯಾಯವಾದಿಯಾಗಿ ವೃತ್ತಿ ಮಾಡುವಾಗ ತೊಂದರೆ ಅನುಭವಿಸಬೇಕಾಗುತ್ತದೆ ಆದದರಿಂದ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಬೇಕು ಅಂದಾಗ ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಭಾ.ಹಿಂ.ಪ್ರಚಾರ ಸಭಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಬಿ.ಬ್ಯಾಳಿ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮೋಹನಪ್ರಸಾದ ಟೌನ್ ಸಿ.ಪಿ.ಆಯ್.ಕೊಪ್ಪಳ,ರುದ್ರೇಶ ಉಜ್ಜಯನಿಮಠ ಸಿ.ಪಿ.ಆಯ್.ಕುಷ್ಟಗಿ, ಎ.ವಿ.ಕಣವಿ ಅಧ್ಯಕ್ಷರು, ಜಿಲ್ಲಾ ವಕೀಲರು ಸಂಘ, ಉಪಸ್ಥಿತರಿದ್ದರು.
ಪರಿಚಯ ಭಾಷಣವನ್ನು ಪ್ರಾಚರ್ಯರು ಆದ ಡಾ: ಬಿ,ಎಸ್,ಹನಸಿ ಮಾಡಿದರು , ಸಂಧರ್ಭದಲ್ಲಿ ರಾಷ್ಟೀಯ ಸೇವಾ ಯೋಜನೆಯ ಕಾರ್ಯಕ್ರಮಾದಿಕಾರಿಯಾದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ಬಸವರಾಜ್ ಎಸ್.ಎಂ,ಉಪನ್ಯಾಸಕರಾದ ಶ್ರೀಮತಿ ಉಷಾದೇವಿ ಹಿರೇಮಠ, ಸೇರಿದಂತೆ ಪ್ರಧಾನ ಕಾರ್ಯದರ್ಶಿ, ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
೨೦೧೩ ಮತ್ತು ೧೪ರಲ್ಲಿ ಪಾಸಾದ ಕಾನೂನು ವಿದ್ಯಾರ್ಥಿಗಳಿ ಸನ್ಮಾನ ಕಾರ್ಯಕ್ರಮ ಮಾಡಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಯಾದ ಮೆಹರಾಜ ಮನಿಯಾರ ಹಾಗೂ ಸಾವಿತ್ರಿ ಮರೆಬಾಳ ಮಾಡಿದರು ಉಪನ್ಯಾಸಕರು ಆದ ಬಸವರಾಜ ಅಳ್ಳಳ್ಳಿ ವಂದಿಸಿದರು.
0 comments:
Post a Comment
Click to see the code!
To insert emoticon you must added at least one space before the code.