ಕೊಪ್ಪಳ--೧೯,ಕ್ಷೇತ್ರದ ಭಿಸರಳ್ಳಿ ಗ್ರಾಮದಲ್ಲಿ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಸಿಂಗಟಾಲೂರು ಏತನೀರಾವರಿ ಯೋಜನೆಯಡಿಯಲ್ಲಿ ಬೂದಿಹಾಳ -ಭಿಸರಳ್ಳಿ ಗ್ರಾಮದಲ್ಲಿ ರೂ.೪೦ ಲಕ್ಷದ ರಸ್ತೆ ಕಾಮಗಾರಿಗೆ ಹಾಗೂ ರೂ.೨೧ ಲಕ್ಷದ ಸಮುದಾಯ ಭವನದ ಕಾಮಗಾರಿಗೆ ಬೂಮಿಪೂಜೆ ನೆರವೆರಿಸಿ ಮಾತನಾಡಿದ ಅವರು ಕೊಪ್ಪಳ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ರಸ್ತೆ ಚರಂಡಿ,ಶುದ್ದ ಕುಡಿಯುವ ನೀರಿನ ಘಟಕಗಳು ಇನ್ನಿತರ ಮೂಲಭೂತ ಸೌಕರ್ಯಗಳನ್ನು ಗ್ರಾಮ ವಿಕಾಸ ಯೋಜನೆಡಿಯಲ್ಲಿ ಹಂತ ಹಂತವಾಗಿ ಅಭಿವೃದ್ದಿ ಗೊಳಿಸಿ ಕ್ಷೇತ್ರದ ಎಲ್ಲಾ ಗ್ರಾಮಗಳ ಸರ್ವಾಂಗಿಣ ಅಭಿವೃದ್ದಿ ಮಾಡುವೆನು ಜನರು ಈ ಸೌಕರ್ಯಗಳ ಸದುಪಯೋಗ ಮಾಡಿಕೊಳ್ಳಬೇಕು ರಾಜ್ಯದ ಜನಪ್ರೀಯ ಮುಖ್ಯಮಂತ್ರೀಗಳಾದ ಸಿದ್ದರಾಮಯ್ಯನವರು ರಾಜ್ಯದ ಎಲ್ಲಾ ಗ್ರಾಮಗಳ ಸರ್ವತೋಮುಖ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದು ಬರುವ ದಿನಗಳಲ್ಲಿ ಕೊಪ್ಪಳ ಕ್ಷೇತ್ರವನ್ನು ಮಾದರಿಯ ಕ್ಷೇತ್ರವನ್ನಾಗಿ ಮಾಡುವೆ ಎಂದು ಭರವಸೆ ನೀಡಿದರು
ಈ ಸಂದರ್ಭದಲ್ಲಿ ಗವಿಶಿದ್ದಪ್ಪ ಮುದುಗಲ್ ,ಹನುಮರೆಡ್ಡಿ ಹಂಗನಕಟ್ಟಿ,ಪ್ರಸನ್ನ ಗಡಾದ್,ಮಹಂತೇಶ ಮೈನಳ್ಳಿ,ರವಿ ಪಾಟೀಲ್ ವಕೀಲರು,ನಾರಾಯನ್ ರೆಡ್ಡಿ,ಮಹೇಂದ್ರಗೌಡ ಬಿಸರಳ್ಳಿ,ಮಹೇಶ ಶಿವಣ್ಣ ಬುದಿಹಹಾಳ,ನಿಂಗಪ್ಪ ಯತ್ನಟ್ಟಿ,ಪ್ರಭು ಸಿಂದೋಗಿ,ಗ್ರಾಮಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು ಊರಿನ ಗುರು ಹಿರಿಯರು ಉಪಸ್ಥಿತರಿದ್ದರು .
0 comments:
Post a Comment
Click to see the code!
To insert emoticon you must added at least one space before the code.