PLEASE LOGIN TO KANNADANET.COM FOR REGULAR NEWS-UPDATES


ಕನಕಗಿರಿ ೧೬ ಶಿವಮೊಗ್ಗ ಕರ್ನಾಟಕ ಸಂಘದ ವಾರ್ಷಿಕ ಸಾಹಿತ್ಯ ಪ್ರಶಸ್ತಿ ಪ್ರಕಟಿಸಲಾಗಿದ್ದು ಅಲ್ಲಾಗಿರಿರಾಜ್‌ಕನಕಗಿರಿ ಇವರ ನೂರ್ ಗಜಲ್  ಸಂಕಲನಕ್ಕೆ ’ಪಿ ಲಂಕೇಶ್’ ಹೆಸರಿನ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ ಲಭಿಸಿದೆ.ಕರ್ನಾಟಕ ಸಂಘವು ತನ್ನ ಗೌರವ ಸದಸ್ಯರ ಹೆಸರಿನಲ್ಲಿ ಸಾಹಿತ್ಯದ ನಾನಾ ಪ್ರಕಾರಗಳಿಗೆ ವಾರ್ಷಿಕ ಪ್ರಶಸ್ತಿ ಗಳನ್ನು ಕೊಡಮಾಡುತ್ತಿದ್ದು ೨೦೧೩ನೇ ಸಾಲಿನ ಕಾವ್ಯ ಪ್ರಶಸ್ತಿಗೆ ನೂರ ಗಜಲ್ ಸಂಕಲನ ಪಡೆದು ಕೊಂಡಿದೆ. ಪ್ರಶಸ್ತಿ ೫,ಸಾವಿರ ರೂಪಾಯಿ ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ ಬಳಗೊಂಡಿದೆ. ಈ ಪ್ರಶಸ್ತಿಯು ಜುಲೈ  ೫ ರಂದು ಶಿವಮೊಗ್ಗ ನಗರದ ಕುವೆಂಪು ರಂಗ ಮಂದಿರದಲ್ಲಿ ಪುಸ್ತಕ ಪ್ರಾಧಿಕಾರ ಆಕಡಮಿ ಅಧ್ಯಕ್ಷ ಬಂಜಗೇರೆ ಜಯಪ್ರಾಕಾಶ ಮತ್ತು ಗಣ್ಯ ಸಾಹಿತಿಗಳ ಸಮ್ಮುಖದಲ್ಲಿ ಅಲ್ಲಾಗಿರಿರಾಜ್ ಕನಕಗಿರಿ ಇವರಿಗೆ  ಪ್ರಶಸಿ ಪ್ರದಾನ ಮಾಡಲಾಗುವುತ್ತದೆಂದು ಸಂಘದ  ಗೌರವ ಕಾರ್ಯದರ್ಶಿ ಡಾ.ಎಚ್.ಎಸ್.ನಾಗಭೂಷಣ ತಿಳಿಸಿದ್ದಾರೆ.
ಸಂಗಮ ಪ್ರಶಸ್ತಿ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲುಕಿನ ಸಂಗಮ ಸಾಹಿತ್ಯ ಪ್ರಶಸ್ತಿಯು ಅಲ್ಲಾಗಿರಿರಾಜ್ ಕನಕಗಿರಿ ಇವರ ನೂರ್ ಗಜಲ್  ಸಂಕಲಕ್ಕೆ ದೊರೆತ್ತಿದೆ ಸಂಗಮ ಸಾಹಿತ್ಯ ಪ್ರತಿಷ್ಠಾನದ ಬೆಳ್ಳಿ ಹಬ್ಬದ ನಿಮಿತ್ಯವಾಗಿ ಜರುಗಿದ ಸಾಹಿತ್ಯ ಸ್ಪರ್ಧೆಯಲ್ಲಿ ಕಾವ್ಯ ಪ್ರಕಾರದಲ್ಲಿ ನೂರ್ ಗಜಲ್  ಪುಸ್ತಕ ಪ್ರಥಮಸ್ಥಾನ
ಪಡೆದು ಕೊಂಡಿದ್ದು ಈ ಪ್ರಶಸ್ತಿಯು ೫ ಸಾವಿರ ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಜುಲೈ ೨೦ ರಂದು ಹುನಗುಂದ ನಗರದಲ್ಲಿ ಸಂಗಮ ಸಾಹಿತ್ಯ ಪ್ರಶಸಿಯನ್ನು ಅಲ್ಲಾಗಿರಿರಾಜ್ ಕನಕಗಿರಿ ಇವರಿಗೆ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಸಂಚಾಲಕರು ಮತ್ತು ನಾಟಕ ಆಕಾಡಮಿ ಸದಸ್ಯರಾದ ಎಸ್ಕೆ ಕೊನಸಾಗರ ತಿಳಿದ್ದಾರೆ

Advertisement

0 comments:

Post a Comment

 
Top