PLEASE LOGIN TO KANNADANET.COM FOR REGULAR NEWS-UPDATES


ನಗರದ ೧೯ನೇ ವಾರ್ಡ್‌ನ ವ್ಯಾಪ್ತಿಯಲ್ಲಿ ಬರುವ ಪದಕಿ ಲೇಔಟ್ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ಅಲ್ಲಿನ ಸಾರ್ವಜನಿಕರು ಪರದಾಡುವಂತಹ ಪರಸ್ಥಿತಿ ನಿರ್ಮಾಣವಾಗಿದ್ದು, ಈ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಸಾರ್ವಜನಿಕರು ಶುಕ್ರವಾರ ಬೆಳಿಗ್ಗೆ ನಗರಸಭೆ ಎದುರು ಬೃಹತ್ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಜರುಗಿದೆ.
ಪದಕಿ ಲೇಔಟ್ ಬಡಾವಣೆಯಲ್ಲಿ ರಸ್ತೆ, ಉಪರಸ್ತೆಗಳ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದೆ, ಕಾಮಗಾರಿಗಳು ವಿಳಂಭಗೊಳ್ಳುತ್ತಿದೆ, ಎರಡು ಬದಿ ಚರಂಡಿ ಕಾಮಗಾರಿ ಅಪೂರ್ಣಗೊಂಡು ರಸ್ತೆ ಮಧ್ಯೆದಲ್ಲಿ ತೆಗ್ಗು-ದಿನ್ನಿ ಆರಂಭಗೊಂಡಿದ್ದು, ಇದರಿಂದ ಸಾರ್ವಜನಿಕರಿಗೆ ಓಡಾಡಲು ತೀವ್ರ ತೊಂದರೆಯಾಗುತ್ತದೆ, ಸಮರ್ಪಕ ಕುಡಿಯುವ ನೀರಿನ ಪೂರೈಕೆಯಾಗುತ್ತಿಲ್ಲ, ಅಸ್ವಚ್ಚತೆ ಹೆಚ್ಚಾಗಿರುವುದರಿಂದ ಇಲ್ಲಿನ ಜನರು ಆತಂಕ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ, ಕೂಡಲೇ ಅವ್ಯವಸ್ಥೆ ಸರಿಪಡಿಸಿ ಈ ಬಡಾವಣೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಪದಕಿ ಲೇಔಟ್ ಬಡಾವಣೆಯ ನಿವಾಸಿಗಳು ಹಾಗೂ ಹೋರಾಟ ಸಮಿತಿ ಅಧ್ಯಕ್ಷ ವಿಜಯಕುಮಾರ ಪದಕಿ, ಕಾರ್ಯದರ್ಶಿ ಹಾಗೂ ಜಿಲ್ಲಾ ವಾರ್ತಾ ಪತ್ರಿಕೆಯ ಸಂಪಾದಕ ಜಿ.ಎಸ್.ಗೋನಾಳ ಸೇರಿದಂತೆ ಗೌರವಾಧ್ಯಕ್ಷ ಜಗನ್ನಾಥ ಶೆಟ್ಟಿ, ಸಿದ್ದಪ್ಪ ಮೇಟಿ, ಎ.ಕಾಶಿ, ಹೆಚ್.ಮಂಜುಳಾ, ಹಿಂದು, ಗಾಯತ್ರಿ, ಕಮಲ, ವೀಣಾ ಕೆ., ಪ್ರತಿಭಾ.ಕೆ, ನಿರ್ಮಲಾ, ನಿರಜಾಕ್ಷಿ, ಗೀತಾ.ಪಿ, ಗಾಯತ್ರಿ ಎಂ., ಕೆ.ರಾಘವೇಂದ್ರರಾವ್, ಎಂ.ಹುಡೇಜಾಲಿ, ಹೋರಾಟಗಾರ ಶಿವಾನಂದ ಹೊದ್ಲೂರು, ಪ್ರಶಾಂತ ಕುಲಕರ್ಣಿ, ವಾದಿರಾಜ ಪಾಟೀಲ್, ಎಸ್.ಜಿ.ಕಬಾಡಿ, ಡಾ.ಹನುಮಂತರಾವ್ ಜೋಶಿ, ಎ.ಗಲಗಲಿ, ಪ್ರಕಾಶ ಪಠವಾರಿ ಮತ್ತಿತರರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ನಗರಸಭೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು. 

25 Apr 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top