PLEASE LOGIN TO KANNADANET.COM FOR REGULAR NEWS-UPDATES

 ೨೦೧೧೩-೧೪ ರ ರಾಷ್ರ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ                 
      ನಗರದ ಶ್ರೀ ಗವಿಸಿದ್ದೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ೨೦೧೧೩-೧೪ ರ ಸಾಲಿನ ರಾಷ್ರ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ದಿ ೨೪-೦೪-೨೦೧೪ ರಂದು ನಡೆದ ವಿಶೇಷ ಉಪನ್ಯಾಸ ಕಾರ‍್ಯಕ್ರಮದಲ್ಲಿ ಜಿಲ್ಲಾ ಏಡ್ಸ ತಡೆಗಟ್ಟುವಿಕೆ  ಮತ್ತು ನಿಯಂತ್ರಣ ವಿಭಾಗ ಶ್ರೀ ಕೃಷ್ಣರವರು ’ಏಡ್ಸ ಜಾಗೃತಿ’ ಕುರಿತು ಉಪನ್ಯಾಸ ನಿಡಿದರು.
        ತಮ್ಮ ಉಪನ್ಯಾಸದಲ್ಲಿ ಅಸುರಕ್ಷೀತ ಲೈಂಗಿಕ ಕ್ರಿಯೆ,ಮಾದಕ ವ್ಯಸನಿಗಳ ಸೂಜಿ ಸಿರಂಜಗಳ ಬಳಕೆ,ರಕ್ತ ಪಡೆಯುವ ಸಂದರ್ಭದಲ್ಲಿನ ಅಜಾಗರೂಕತೆಗಳಂತಹ ಪ್ರಮುಖ ಕಾರಣಗಳಿಂದ ಎಚ್,ಐ.ವಿಸೋಂಕು ಪರಸ್ಪರ ಪಸರಿಸುತ್ತದೆ,ಸೋಂಕು ತಗುಲಿದ ತಕ್ಷಣವೇ ರೋಗಿಯ ಗಮನಕ್ಕೆ ಬರದೇ ಇರುವದರಿಂದ ರೋಗಿಗೆ ಏಡ್ಸನ್ನು ಪ್ರಾಂಭದಲ್ಲಿ ಗುರುತಿಸಲಾಗುವುದಿಲ್ಲ. ಈ ಕಾರಣದಿಂದ ಸೋಂಕು ಕೈಮೀರಿz ನಂತರ ಚಿಕತ್ಸೆ ರಿಣಾಮಕಾರಿಯಾಗಿರುವದಿಲ್ಲ ಎಂದರು, ಏಡ್ಸ ಸೋಂಕು ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಲ್ಲೂ ಹೆಚ್ಚಾಗಿ ಪಸರಿಸುತ್ತಿರುವದರಿಂದ ಹದಿಹರೆಯದವರು ಆರೋಗ್ಯಕರ ಜೀವನ ಶೈಲಿ ಹಾಗೂ ಸದೃಡ ದೈಹಿಕ ಸಾಮರ್ಥ್ಯ ಹೊಂದುವತ್ತ ಗಮನಹರಿಸಬೇಕೆಂದರು ಇದೇ ಸಂದರ್ಭದಲ್ಲಿ ಸರ್ಕಾರದಿಂದ ಏಡ್ಸ ಪೀಡಿತರಿಗೆ ಇರುವ ಚಿಕತ್ಸೆ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.
    ಕಾರ‍್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಯುತ್ ರೆಡ್ ಕ್ರಾಸ ಘಟಕದ ಸಂಯೋಜನಾಧಿಕಾರಿ ಪ್ರೋ.ಎಮ್.ಎಸ್.ದಾದ್ಮಿ ಯವರು ಏಡ್ಸ ತಡೆಗಟ್ಟಬೇಕೇಂದರೆ ಆರೋಗ್ಯಕರವಾದ ಧನಾತ್ಮಕ ಜೀವನಶೈಲಿಯನ್ನು ಹದಿಹರೆಯದಲ್ಲಿಯೇ ರೂಡಿಸಿ ಕೊಳ್ಳಬೇಕು ಏಡ್ಸ ಚಿಕಿತ್ಸೆಗಳ ಕುರಿತು ಸಂಶೋಧನೆಗಳು ಪ್ರಾರಂಭದ ಹಂತದಲ್ಲಿದ್ದು ಮುಂಬರುವ ದಿನಗಳಲ್ಲಿ ಏಡ್ಸ ಸೋಂಕಿಗೆ ಪರಿಣಾಮ ಕಾರಿಯಾದ ಔಷಧಿ ಲಬ್ಯವಾಗಬಹುದೆಂದರು ಕಾರ‍್ಯಕ್ರಮದ ಶಿಬಿರಾಧಿಕಾರಿ ಡಾ.ಜೆ.ಎಸ್ ಪಾಟೀಲ ಉಪಸ್ಥಿತರಿದ್ದರು
        ಕಾರ‍್ಯಕ್ರಮದ ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಶಿಬಿರಾಧಿಕಾರಿ ಪ್ರೋ.ಶರಣಬಸಪ್ಪ ಮಾತನಾಡಿದರೆ ಕುಮಾರಿ ವಿಜಯಲಕ್ಷ್ಮಿ ಕಾರ‍್ಯಕ್ರಮ ನಿರೂಪಿಸಿದರು ವಿದ್ಯಾರ್ಥಿಯಾದ ವಿರೂಪಾಕ್ಷಪ್ಪ ವಂದಿಸಿದರು.

25 Apr 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top