PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ ಜಿಲ್ಲೆಯಾಗಿ ಎರಡು ದಶಕ ಪೂರೈಸುತ್ತಿದ್ದು, ಜಿಲ್ಲೆಯಲ್ಲಿ ಸುಸಜ್ಜಿತವಾದ ಆಸ್ಪತ್ರೆಗಳಿಲ್ಲದ್ದರಿಂದ ಸಾರ್ವಜನಿಕರು ತುಂಬಾ ತೊಂದರೆಗೊಳಗಾಗಿದ್ದಾರೆ. ಆರೋಗ್ಯ ಇಲಾಖೆಗೆ ಅನೇಕ ಬಾರಿ ಪ್ರತಿಭಟನೆ, ಹೋರಾಟ, ನಿಯೋಗಗಳ ಮೂಲಕ ಮನವಿ ಪತ್ರಗಳು ಸಲ್ಲಿಸುತ್ತಾ ಬಂದಿದ್ದರು ಇನ್ನೂವರಗೂ ಪರಿಣಾಮಕಾರಿ ಪ್ರಯೋಜನವಾಗಿಲ್ಲ. ತೀವ್ರ ಅಪಘಾತಗಳ ಸಂಭವಿಸಿದರೂ, ಹೆರಿಗೆ, ಡೆಂಗ್ಯೊ, ಮೆದುಳು, ಹೃದಯದ  ಸಂಭದಿಸಿದ ರೋಗಗಳಿಗೆ ದೂರದ ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಳ್ಳಾರಿ ಮುಂತಾದ ನಗರಗಳಿಗೆ ಕಳಿಸುತ್ತಾರೆ. ಬೇರೆ ನಗರಕ್ಕೆ ಹೋಗುವಾಗ ರಸ್ತೆಗಳಲ್ಲಿ ಜೀವ ಹೋದ ಸಾಕಷ್ಟು ಉದಾಹರಣೆಗಳಿವೆ.
ತಾವು ಆರೋಗ್ಯ ಇಲಾಖೆಯಲ್ಲಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದರಿಂದ ಈಗಲಾದರೂ ನಮ್ಮ ಜಿಲ್ಲಾ ಕೇಂದ್ರವಾದ ಕೊಪ್ಪಳಕ್ಕೆ ಸ್ತ್ರೀ-ರೋಗ ಮತ್ತು ಅತ್ಯಾಧುನಿಕ ಹೆರಿಗೆ ಆಸ್ಪತ್ರೆ ಹಾಗೂ ನವಜಾತ ಶಿಶು ತೀವ್ರ ಆರೈಕೆ ಘಟಕ ಮುಂತಾದವುಗಳನ್ನು ತಕ್ಷಣ ಪ್ರಾರಂಭಿ
ಸ್ತ್ರೀ-ರೋಗ ಚಿಕಿತ್ಸೆಗಾಗಿ ಮಹಿಳೆಯರು ಸರಿಯಾದ ತಜ್ಞ ವೈದ್ಯರಿಲ್ಲದ ಕಾರಣ ಪರದಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ದುಬಾರಿ ವೆಚ್ಚ ಭರಸಿಲುಯಾಗುತ್ತಿಲ್ಲ. ಪ್ರತ್ಯೇಕವಾದ ಸರ್ಕಾರಿ ಅತ್ಯಾಧುನಿಕ ಹೆರಿಗೆ ಆಸ್ಪತ್ರೆಯಿಲ್ಲದ್ದರಿಂದ ಬಡವರು ಪಕ್ಕದ ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ನಮ್ಮ ಜಿಲ್ಲೆಯಲ್ಲಿ ತುಂಬಾ ಅಗತ್ಯವಾದ ಅತ್ಯಾಧುನಿಕ ಹೆರಿಗೆ ಆಸ್ಪತ್ರೆ ಮತ್ತು ಎಲ್ಲಾ ತರಹದ ಸ್ಕ್ಯಾನಿಂಗ್ ಸೌಲಭ್ಯಗಳ ವ್ಯವಸ್ಥೆ ಮಾಡಬೇಕು.
ಈಗಾಗಲೇ ನವಜಾತ ಶಿಶು ತೀವ್ರ ಆರೈಕೆ ಘಟಕ ಮಂಜೂರಾಗಿದ್ದು, ಅದು ಪ್ರಾರಂಭಗೊಳ್ಳದೇ ಸುಮಾರು ವರ್ಷಗಳಿಂದ ಕೋಮಾವಸ್ಥೆಯಲ್ಲಿದೆ.  ಅದಕ್ಕೆ ಸಂಬಂಧಪಟ್ಟ ತಜ್ಞ ವೈದ್ಯರು ಮತ್ತು ಸಿಬ್ಬಂದಿ ವರ್ಗ, ಮೂಲ ಸೌಲಭ್ಯಗಳನ್ನು ಒದಗಿಸಿ ತಕ್ಷಣ ಪ್ರಾರಂಭಿಸಿ ಹೆಚ್ಚಾಗಿರುವ ಶಿಶು ಮರಣಗಳನ್ನು ತಪ್ಪಿಸಬೇಕು.
ಜಿಲ್ಲಾ ಕೇಂದ್ರವಾದ ಕೊಪ್ಪಳದಲ್ಲಿ ಜಿಲ್ಲಾ ಆಸ್ಪತ್ರೆಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು,  ಹಳೆ ಜಿಲ್ಲಾ ಆಸ್ಪತ್ರೆ ಕಟ್ಟಡದಲ್ಲಿ ಸ್ತ್ರೀ-ರೋಗ ಅತ್ಯಾಧುನಿಕ ಹೆರಿಗೆ ಆಸ್ಪತ್ರೆ ಮತ್ತು ನವಜಾತ ಶಿಶು ತೀವ್ರ ಆರೈಕೆ ಘಟಕ ಮತ್ತು ಎರಡನೇ ನಗರ ಆರೋಗ್ಯ ಕೇಂದ್ರಕ್ಕೆ ತಜ್ಷ ವೈದ್ಯರು, ಸಿಬ್ಬಂದಿ ವರ್ಗ, ಮೂಲಭೂತ ಸೌಲಭ್ಯಗಳು ಮುಂತಾದವುಗಳನ್ನು ತಕ್ಷಣ ಪ್ರಾರಂಭಿಸಬೇಕು. ಸುತ್ತ-ಮುತ್ತಲಿನ ಗ್ರಾಮಸ್ಥರಿಗೆ, ನಗರದ ಜನರಿಗೆ ಅನುಕೂಲವಾಗುತ್ತದೆ. ಕೊಪ್ಪಳ ನಗರದ ಗಡಿಯಾರ ಕಂಬದ ಹತ್ತಿರ ಇರುವ ನಗರ ಆರೋಗ್ಯ ಕೇಂದ್ರ ಪುನಃ ತಕ್ಷಣ  ಮುಂದುವರೆಸಬೇಕು ಎಂದು ಒತ್ತಾಯಿಸುತ್ತೇವೆ.
ನೂತನವಾಗಿ ಆರಂಭವಾಗಿರುವ ಜಿಲ್ಲಾ ಆಸ್ಪತ್ರೆ ಕಟ್ಟಡ ಮಾತ್ರ ತುಂಬಾ ಚೆನ್ನಾಗಿದೆ. ಆದರೆ ಅದರಲ್ಲಿ ತಜ್ಷವೈದ್ಯರ, ಸಿಬ್ಬಂದಿಗಳ ವ್ಯಾಪಕ ಕೊರತೆಯಿದೆ. ಸದರಿ ಆಸ್ಪತ್ರೆಗೆ ಮಂಜೂರಾಗಿರುವ ತಜ್ಷವೈದ್ಯ, ಸಿಬ್ಬಂದಿ ಹುದ್ದೆಗಳು ಅತ್ಯಂತ ಕಡಿಮೆ ಸಂಖ್ಯೆಗಳಿವೆ. ಇನ್ನೂ ಸಾಕಷ್ಟು ತಜ್ಷವೈದ್ಯ, ಸಿಬ್ಬಂದಿಗಳು ಸಂಖ್ಯೆಗಳನ್ನು ಹೆಚ್ಚಿನ ತಕ್ಷಣ ಮಂಜೂರು ಮಾಡಿ ಹುದ್ದೆಗಳನ್ನು ತುಂಬಬೇಕು ಎಂದು  ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟ,ಜಿಲ್ಲಾ ಮಂಡಳಿಯಿಂದ  ದಿ. ೨೬-೧೦-೨೦೧೩ರಂದು ಬೆಳಿಗ್ಗೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

26 Oct 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top