PLEASE LOGIN TO KANNADANET.COM FOR REGULAR NEWS-UPDATES

  ದಿನಾಂಕ ೨೮ ರಂದು ಕವಲೂರಿನ ಶ್ರೀಮತಿ ಗಿರಿಯಮ್ಮ ಪರಪ್ಪ ಹೆಬ್ಬಾಳ ಸರಕಾರಿ ಪ್ರೌಢ ಶಾಲೆಯಲ್ಲಿ ಬೆಳಗ್ಗೆ ೧೧:೩೦ ಕ್ಕೆ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಹಾಗೂ ಆಪ್ತ ಸಲಹಾ ಕೆಂದ್ರ ದ ಘಟಕದಡಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ನಂತರ ಮುಂದೇನು? ಎಂಬ ವಿಷಯ ಕುರಿತಂತೆ ಮಾಹಿತಿ ಕಾರ್‍ಯಾಗಾರವನ್ನು ಆಯೋಜಿಸಲಾಗಿತ್ತು. ಇದರಲ್ಲಿ ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಕೊರ್ಸಗಳು ಹಾಗೂ ಸ್ವಂತ ಉದ್ಯೋಗಗಳನ್ನು ಮಾಡಲು ಇರುವ ವಿಪುಲ ಅವಕಾಶಗಳ ಬಗ್ಗೆ ವಿವರವಾಗಿ ಎಲ್ಲ ಶಿಕ್ಷಕರು ಹಾಗೂ ಮುಖ್ಯೋಪಾದ್ಯಾಯರು ಮಾಹಿತಿ ನೀಡಿದರು. 
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾದ್ಯಾಯರಾದ ವೀರಬದ್ರಪ್ಪ ಗೊಂಡಬಾಳ ವಹಿಸಿದ್ದರು. ಶರಣಮ್ಮ ಎಸ್.ಜಿ ಸ.ಶಿ. ಸ್ವಾಗತಿಸಿದರು, ಎಂ.ಬಿ. ಜುಮ್ಮಣ್ಣವರ, ಅಡಿವೆಪ್ಪ ಗುಣಾರಿ ಹಾಗೂ ಮುಖ್ಯೋಪಾದ್ಯಾಯರು ಕರ್ಯಕ್ರಮ ಕುರಿತು ಮಾತನಾಡಿದರು.  ಅಶೋಕ ವೃತ್ತಿ ಶಿಕ್ಷಣ ಶಿಕ್ಷಕರು ವಂದನಾರ್ಪಣೆಯನ್ನು ಮಾಡಿದರು. ಸಂಚಾಲಕರಾದ ಟಿ.ಎನ್. ಮಟ್ಟಿ ಕಾರ್‍ಯಕ್ರಮ ನಿರೂಪಿಸಿದರು. 

28 Jun 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top