PLEASE LOGIN TO KANNADANET.COM FOR REGULAR NEWS-UPDATES


  ಕೊಪ್ಪಳದ ಸಾಹಿತ್ಯ ಎಂಟರ್‌ಪ್ರೈಸಸ್‌ನ ಶ್ರೀ ಆಂಜನೇಯ ಪಿಕ್ಚರ್‍ಸ್ ವತಿಯಿಂದ ತಯಾರಾಗುತ್ತಿರುವ ಇಂದ್ರವ್ವ ಹಾಕಿದ ಕಲ್ಲು ಸಾಕ್ಷ್ಯ ಚಿತ್ರದ ಚಿತ್ರೀಕರಣ ಕಳೆದ ಮೂರು ದಿನಗಳ ಕಾಲ ಕೊಪ್ಪಳ, ಹಿರೇಸಿಂದೋಗಿಯಲ್ಲಿ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿತು.
ಚಿತ್ರಕಥೆ, ಸಂಭಾಷಣೆ ಮತ್ತು ಪ್ರಧಾನ ನಿರ್ದೇಶನವನ್ನು ಬಿ. ಶ್ರೀನಿವಾಸ ಮಾಡಿದ್ದು, ನಿರ್ಮಾಣ ಮತ್ತು ನಿರ್ದೇಶನವನ್ನು ಬೆಳ್ಳಿ ಮಂಡಲ ಜಿಲ್ಲಾ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾಡಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನವನ್ನು ಶೇಖ್ ಇದಾಯತ್ ಮತ್ತು ದುಬೈ ಬಾಬು, ಸಹಾಯಕ ನಿರ್ದೇಶಕರಾಗಿ ರಾಜೀವ್ ಸಿ.ಎನ್. ಮತ್ತು ವಿಜಯ ಅಮೃತರಾಜ್ ಕಾರ್ಯಮಾಡಿದ್ದು, ವಸ್ತ್ರಾಲಂಕಾರ ಜ್ಯೋತಿ ಮಂಜುನಾಥ ಗೊಂಡಬಾಳ, ಪ್ರೊಡಕ್ಷನ್ ಮ್ಯಾನೇಜರ್ ರಾಗಿ ಶೇಖರಪ್ಪ ಹೆಚ್. ಬೆಟಗೇರಿ ಕಾರ್ಯನಿರ್ವಹಿಸಿದ್ದಾರೆ.
೧೯೭೫ ರಿಂದ ಇಲ್ಲಿಯವರೆಗೂ ಎಸ್ ಇ ಝೆಡ್ ಬಂದು ಕಾರ್ಖಾನೆಗಳಿಂದ ರೈತರು ಹಾಳಾಗಿದ್ದಾರೆ, ಅವರಿಗೆ ಯಾವುದೇ ರೀತಿಯ ಲಾಭಗಳಾಗಿಲ್ಲ, ಭೂಮಿ ಪಡೆದು ನೌಕರಿ ಕೊಡುವ ಭರವಸೆಯೂ ಈಡೇರಿಲ್ಲ, ಪರಿಸರವೂ ಹಾಳಾಗಿದೆ, ಕಾರಣ ಆ ರೈತರು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅನಾಹುತ ತಪ್ಪಿದ್ದಲ್ಲ ಎನ್ನುವ ಕಥಾ ವಸ್ತು ಹೊಂದಿರುವ ಚಿತ್ರದಲ್ಲಿ ಹೇಮರಾಜ್ ವೀರಾಪೂರ ಮತ್ತು ರಮೇಶ ಗಬ್ಬೂರ (ಸಿದ್ದಪ್ಪ ರೈತನ ಪಾತ್ರ), ಮಾಸ್ಟರ್ ಚಂದ್ರಶೇಖರ್ ಬೇಳೂರು ಮತ್ತು ವಿಠ್ಠಲ ಮಾಲಿಪಾಟೀಲ (ರೈತನ ಮಗನ ಪಾತ್ರ), ಕೆ. ಮಂಜುನಾಥ ಹೊಸಪೇಟೆ (ಎಂಎಲ್‌ಎ ಪಾತ್ರ), ಬಿ. ಶ್ರೀಧರ ಹೊಸಪೇಟೆ (ಫ್ಯಾಕ್ಟರಿ ಮಾಲೀಕನ ಪಾತ್ರ), ಮಂಜುನಾಥ ಜಿ. ಗೊಂಡಬಾಳ (ಮೇಷ್ಟ್ರ ಪಾತ್ರ), ರಂಗನಾಥ ಕೋಳೂರು (ಯುವಕನ ಪಾತ್ರ), ಹಿರೇಸಿಂದೋಗಿ ಗ್ರಾಮದ ಅಂದಾನಸ್ವಾಮಿ ಭೂತಣ್ಣವರ, ಕನಕಪ್ಪ, ಬಸನಗೌಡ್ರ, ರಾಜಾವಲಿಸಾಬ್, ಗಾಳೆಪ್ಪ, ಹನುಮಪ್ಪ ಬೇಳೂರು ಇತರರು ಪಾತ್ರ ಮಾಡಿದ್ದಾರೆ.  
ಕಲಂ ೩೭೧ : ಎಪ್ರಿಲ್ ತಿಂಗಳ ಅಂತ್ಯ ಅಥವಾ ಮೇ ಮೊದಲ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳ ಸುಮಾರ ೬೦೦ ಜನರನ್ನು ಬಳಸಿಕೊಂಡು ೩೭೧ ಜಾರಿಗೊಳಿಸಲು ನಡೆಸಿದ ಹೋರಾಟ ಮತ್ತು ಮಾಡಬೇಕಾದ ಹೋರಾಟವನ್ನು ಬಿಂಬಿಸುವ ಒಂದು ಗಂಟೆಯ ಸಾಕ್ಷ್ಯ ಚಿತ್ರವನ್ನು ತಯಾರಿಸಲಾಗುತ್ತಿದೆ. ಇದು ೩೭೧ ಜಾರಿಗೆ ಹೋರಾಟದ ಕಿಚ್ಚನ್ನು ಹಚ್ಚುವ ಉದ್ದೇಶ ಹೊಂದಿದ್ದು, ಸಾಕ್ಷ್ಯ ಚಿತ್ರಕ್ಕೆ ಪ್ರತಿಯೊಬ್ಬರು ಸಹಕಾರ ನೀಡಿ, ಮುಂದಿನ ದಿನಗಳಲ್ಲಿ ಹಕ್ಕನ್ನು ಪಡೆಯಬೇಕಾಗಿದೆ ಎಂದು ಗೊಂಡಬಾಳ ತಿಳಿಸಿದ್ದಾರೆ.

28 Mar 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top