PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ,ಮಾ.೨೭: ನಗರದ ಭಾಗ್ಯನಗರ ರಸ್ತೆಯಲ್ಲಿರುವ ರೈಲ್ವೆ ಗೇಟ್ ಮೇಲ್ಸೆತುವೆ ನಿರ್ಮಾಣಕ್ಕೆ ಪಕ್ಷಾತೀತ ಮತ್ತು ನಿರಂತರ ಹೋರಾಟ ಮಾಡುವುದು ಅನಿವಾರ್ಯ ಮೇಲ್ಸೆತುವೆ ನಿರ್ಮಾಣದ ವಿಷಯದಲ್ಲಿ ಕೇಂದ್ರ ಸರ್ಕಾರವಾU
ಲಿ ಮತ್ತು ರಾಜ್ಯ ಸರ್ಕಾರವಾಗಲಿ ತಾರತಮ್ಯ ಮತ್ತು ನಿರ್ಲಕ್ಷಧೋರಣೆ ತಾಳುತ್ತಿದೆ ಎಂದು ಸಯ್ಯದ್ ಫೌಂಡೇಶನ್‌ನ ಅಧ್ಯಕ್ಷರಾದ ಕೆ.ಎಮ್. ಸಯ್ಯದ್‌ರವರು ಆರೋಪಿಸಿ ನಿರಂತರ ಮತ್ತ ಪಕ್ಷಾತೀತ ಹೋರಾಟಕ್ಕೆ ಭಾಗ್ಯನಗg
ದ ಜನತೆಗೆ ಕರೆ ನೀಡಿದರು.
          ಅವರು ಸೋಮವಾರ ರಾತ್ರಿ ಶ್ರೀ ಮಾರುತೇಶ್ವರ ಜಾತ್ರಾ ಪ್ರಯೂಕ್ತ ಭಾಗ್ಯನಗರ ಗ್ರಾಮದ ಬಯಲು ರಂಗ ಮಂದಿರದಲ್ಲಿ ಏರ್ಪಡಿಸಿದ ರಕ್ತರಾತ್ರಿ ಅರ್ಥಾತ ವೀರ ಅಶ್ವತ್ಥಾಮ ಎಂಬ ಪೌರಾಣಿಕ 
ಟಕ ಉದ್ಘಾಟಣೆ ನೆರೆವೆರಿಸಿ ಮಾತನಾಡಿದಅವರು ನಾಟಕದ ಸನ್ನಿವೇಶದಲ್ಲಿ ಒಳ್ಳೆಪಾತ್ರದ ಅನುಕರಣೆ ಮಾಡಬೇಕು ಒಳ್ಳೆದನ್ನು ಸ್ವೀಕರಿಸಬೇಕು ಕೆಟ್ಟದ್ದನ್ನು ಕೈಬಿಡಬೇಕು ಅಂದಾಗ ಮಾತ್ರ ಜೀವನ ಸಾರ್ಥಕ ಮಾಗುತ್ತದೆ ಎಂದ ಅವರು, 
ಹೈ.ಕ.ಭಾಗದ ಅಭಿವೃದ್ದಿಗಾಗಿ ೩೭೧ನೇ ಕಲಂ ತಿದ್ದುಪಡಿಗಾಗಿ ಮತ್ತು ರೈಲ್ವೇ ಗೇಟ್ ಕೇಳ ಸೇತುವೆ-ಮೇಲ್ಸೇತುವೆಗಳನ್ನು ನಿರ್ಮಾಣಕ್ಕೆ ಹೋರಾಟ ಕೈಗೊಳ್ಳಲು ಮನವಿ ಮಾಡಿಕೊಂಡರು.
          ಮುಂದುವರೆದು ಮಾತನಾದ ಅವರು ಕೊಪ್ಪಳದ ಜಿಲ್ಲೆಯಾಗಿ ೧೪ ವರ್ಷಕಳೆದರು ಜಿಲ್ಲೆಗೆ ಸಿಗುವಂತ ಸ್ತಾನಮಾನ ದೊರೆತಿಲ್ಲ ಇಲ್ಲಿಯ ರೈಲ್ವೆ ಗೇಟ್ ಮೇಲ್ಸೆತುವೆ ಭಾಗ್ಯನಗರ ಕಿನ್ನಾಳ ಮತ್ತು ಕುಷ್ಟಗಿ ರಸ್ತೆಯ 
ಮೂರು ಗೇಟ್ ಗಳನ್ನು ಮೇಲ್ಸೆತುವೆವಾಗಲಿ ಅಥವಾ ಕೆಳ ಸೇತುವೆವಾಗಲಿ ಸಾರ್ಕರ ಮತ್ತು ರೈಲ್ವೆ ಇಲಾಖೆಯಾಗಲಿ ಕೂಡ್ಲೆ ನಿರ್ಮಾಣ ಮಾಡಳು ಮುಂದಾಲಿ ಎಂದ ಅವರು ಪಕ್ಕದ ಗದಗ ನಗರದಲ್ಲಿ ಸುಮಾರು ೬ಕಡೆ ಈ ರಿತಿ ಕೆಳಸೇತುವೆ 
ಮತ್ತು ಮೇಲ್ಸೆತುವೆ ಇದೆ ಆದರೆ ದುರಾದ್ರುಷ್ಟವಾಗಿ ಕೊಪ್ಪಳದಲ್ಲಿ ಒಂದುಯಿಲ್ಲ ಇದರಿಂದ ಈ ಭಾಗದ ನಾಯಕರಲ್ಲಿ ರಾಜಕಿಯ ಇಚ್ಚಾಶಕ್ತಿಯ ಕೊರತೆ ತೋರಿಸುತ್ತದೆ ಎಂದರು. ಭಾಗ್ಯನಗರ ಗ್ರಾಮಸ್ತರು ರೈಲ್ವೆ ಗೇಟ್ ಮೇಲ್ಸೆv
ವೆ ನಿರ್ಮಾಣಕ್ಕೆ ಹೋರಾಟ ಕೈಗೊಂಡರೆ ಅದಕ್ಕೆ ತಮ್ಮ ಸಂಪೂರ್ಣ ಬೆಂಬಲ ನಿಡುವುದಾಗಿ ಕೆ.ಎಮ್.ಸಯ್ಯದ್ ಹೇಳಿದರು.
ವೇದಿಕೆ ಮೇಲೆ ವಾಣಿಜ್ಯಉದ್ಯಮಿ ಶ್ರೀನಿವಾಸ್ ಗುಪ್ತಾ, ಜಿ.ಪಂ. ಉಪಾಧ್ಯಕ್ಷ ಯಮನಪ್ಪ ಕಬ್ಬೇರ್, ತಾ.ಪಂ. ಸದಸ್ಯರಾದ ದಾನಪ್ಪ ಕವಲೂರ್, ಶ್ರೀನಿವಾಸ್ ಹ್ಯಾಟಿ, ಗ್ರಾ.ಪಂ.ಉಪಾಧ್ಯಕ್ಷ ಶ್ರೀಧರ ಹುರಕಡ್ಲಿ, ಸದಸ್ಯ
ರಾದ ರಮಶಹ್ಯಾಟಿ, ಲಕ್ಷ್ಮಣ ಚಳ್ಳಮರದ್, ಭೂಗಪ್ಪ ಡಾಣಿ, ಯಲ್ಲಪ್ಪ ತಂಬ್ರಳ್ಳಿ, ನೀಲಕಂಟಪ್ಪ ಮೈಲಿ, ಕನಕಾಚಲದಲವಂಚನ,ರಾಜೆಸಾಬ ಅಡ್ಡೇದ್, ಮುದೇಗೌಡಾ ಬೇಳೂರು, ಈರಣ್ಣ ಅಕ್ಕಸಾಲಿಗ ಶಂಕ್ರಪ್ಪ ಬೇಟಗೇರಿ, 
ಯಂಕಪ್ಪ ಚಿತ್ರಗಾರ ನಾರಾಣಸಾ ಕಾಟವ, ಬಸವಣ್ಣ ಹ್ಯಾಟಿ, ರಘು ಮಗಜಿ, ಪಂಪಣ್ಣ ಕೆಂಚಗುಂಡಿ, ಹೋನುರುಸಾಬ ಬೈರಾಪೂರ, ಪರುಶುರಾಮ ನಾಯಕ, ನಾಗರಾಜ ಕನಕಗಿರಿ ಚಂದ್ರು ಉಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
28 Mar 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top