PLEASE LOGIN TO KANNADANET.COM FOR REGULAR NEWS-UPDATES

ಗಂಗಾವತಿಯಲ್ಲಿ ದಿನಾಂಕ ೨೬ ರಂದು ನಡೆದ ಶಿವಾಜಿ ಮಹಾರಾಜರ ಜಯಂತೋತ್ಸವದಲ್ಲಿ ಕೆಲ ಮನುವಾದಿ ಸಂಘಟನೆಗಳು ಶಿವಾಜಿ ಮಹಾರಾಜರ ಘನತೆ ಗೌರವಕ್ಕೆ ಕುಂದು ತರುವಂತೆ ವರ್ತಿಸಿರುವುದು ಖಂಡನೀಯವಾಗಿದೆ ಎಂದು ಪ್ರಗತಿಪರ ಮುಖಂಡರು ಭಾರಧ್ವಾಜ್   ಖಂಡಿಸಿದ್ದಾರೆ. 

ಶಿವಾಜಿ ಮಹಾರಾಜರು ಆಗಿನ ಕಾಲಕ್ಕೆ ದಿಲ್ಲಿ ಸುಲ್ತಾನರ ಕ್ರೌರ್ಯದಿಂದ ಶೂದ್ರರನ್ನು ಮತ್ತು ದಲಿತರನ್ನು ರಕ್ಷಿಸಲು ದಿಲ್ಲಿ ಸುಲ್ತಾನರ ವಿರುದ್ಧ ದೊಡ್ಡ ಕ್ರಾಂತಿಯನ್ನೇ ಮಾಡಿದ್ದರು. ಪ್ರಾರಂಭಿ ಹಂತದಲ್ಲಿ ಇವರನ್ನು ರಾಜರೆಂದೆ ಒಪ್ಪಲಾರದ ಪುರೋಹಿತರು ಅವರ ಸುಧೀರ್ಘ ಹೋರಾಟದ ಯಶಸ್ಸನ್ನು ಗಮನಿಸಿ ಅವರ ಆಶ್ರಯ ಪಡೆದರು. ಶಿವಾಜಿ ಮಹಾರಾಜರು ಮುಸ್ಲಿಂ ನವಾಬರ ವಿರುದ್ಧ ಹೋರಾಟ ಮಾಡಿದರು. ಆದರೆ ಇಸ್ಲಾಂ ವಿರುದ್ಧ ಎಂದೂ ಅವರು ಕೀಳು ಭಾವನೆ ಹೊಂದಿರಲಿಲ್ಲ. ಇದಕ್ಕೆ ಅವರ ಸಾಮ್ರಾಜ್ಯದಲ್ಲಿ ವಾಸಿಸಿರುವ  ಮುಸ್ಲಿಮರ ಸ್ಥಿತಿಗತಿಗಳೇ ಹೇಳುತ್ತವೆ. 

ಶಿವಾಜಿ ಮಹಾರಾಜರ ಹಾಗೂ ಭಗತ್‌ಸಿಂಗರ ವಾರುಸದಾರರೆಂದು ಹೊಸದಾಗಿ ಹೇಳುತ್ತಿರುವ ಮನು ಸಂವಿಧಾನ ಪಾಲಕರು ಶಿವಾಜಿ ಮತ್ತು ಭಗತ್‌ಸಿಂಗ ತಮ್ಮ ವಾದವನ್ನು ಎಂದು ಒಪ್ಪಿಲ್ಲ ಎಂದು ತಿಳಿಯಬೇಕು. ಗಂಗಾವತಿಯಲ್ಲಿ ನಡೆದ ಘಟನೆಯಿಂದ ದೊಡ್ಡ ಕೋಮುಗಲಭೆ ಸಾದ್ಯತೆ ಇತ್ತು. ಅದನ್ನು ಸಮರ್ಥವಾಗಿ ಪೊಲಿಸರು ಮುಂಜಾಗ್ರತೆಯಿಂದ ತಡೆದಿದ್ದಾರೆ. ಡಿ.ಎಸ್.ಪಿ. ಸಂದಿಗೆವಾಡ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಕಾಳಿಕೃಷ್ಣ ಕರ್ತವ್ಯ ನಿರ್ವಹಿಸಿ ಪ್ರಕರಣ ದಾಖಲಿಸಿದಿಂದಾಗಿ ಗಂಗಾವತಿಯಲ್ಲಿ ಕೋಮು ಘರ್ಷಣೆ ತಪ್ಪಿತ್ತು. ಸಾರ್ವಜನಿಕರು ನೆಮ್ಮದಿಯ ನೆಟ್ಟುಸಿರು ಬಿಡುವಂತೆ ಮಾಡಿದ ಪೊಲೀಸ್ ಅಧಿಕಾರಿಗಳು ಅಬಿನಂದನಾರ್ಹರು ಎಂದು ಪ್ರಗತಿಪರ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.



29 Mar 2016

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top