ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಿ ಅಂಬಾನಿ, ಅದಾನಿಗಳು ತನ್ನನ್ನು ಪ್ರಧಾನಿಯನ್ನಾಗಿ ಮಾಡಿದ ಋಣ ತೀರಿಸಲು ರೈತರ ಭೂಮಿಯನ್ನು ಬಲವಂತವಾಗಿ ಕಿತ್ತುಕೊಂಡು ದೊಡ್ಡ ಕಾರ್ಪೊರೇಟ್ ಕಂಪೆನಿಗಳಿಗೆ ಧಾರೆ ಎರೆದುಕೊಡಲು ಪ್ರಧಾನಿ ನರೇಂದ್ರ ಮೋದಿ ಹುನ್ನಾರ ನಡೆಸುತ್ತಿರುವ ಈ ದಿನಗಳಲ್ಲಿ ಗಾಂಧಿ, ಅಂಬೇಡ್ಕರ್, ಮಾರ್ಕ್ಸ್ ನಮಗೆ ಪ್ರಸ್ತುತರಾಗುತ್ತಾರೆ. ಇದೊಂದು ಐತಿಹಾಸಿಕ ಕಾಲಘಟ್ಟ. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಎಲ್ಲರನ್ನು ‘ಗಾಂಧಿ ಒಂದು ಮಾಡಿದಂತೆ ಈಗಲೂ ಗಾಂಧಿವಾದಿಗಳು, ಮಾರ್ಕ್ಸ್‌ವಾದಿಗಳು, ಅಂಬೇಡ್ಕರ್‌ವಾದಿಗಳು, ಲೋಹಿಯಾ ವಾದಿಗಳು ಒಂದೇ ವೇದಿಕೆಗೆ ಬರಬೇಕಾಗಿದೆ. ಆಗ ಈ ಅಂಬಾನಿ, ಅದಾನಿ, ಚಡ್ಡಿಪಡೆ ಪಲಾಯನ ಮಾಡುತ್ತದೆ.

ಡಿಸೆಂಬರ್ 6 ಬಾಬಾ ಸಾಹೇಬ ಅಂಬೇಡ್ಕರ್ ಅವರ ಪರಿನಿರ್ವಾಣದಿನ. ಇದೇ ದಿನವನ್ನು ತಮ್ಮ ವಿಧ್ವಂಸ ಕಾರ್ಯಾಚರಣೆಗೆ ಆರಿಸಿಕೊಂಡ ಕೋಮುವಾದಿಗಳು ಬಾಬರಿ ಮಸೀದಿಯನ್ನು ನೆಲಸಮಗೊಳಿಸಿದರು. ಈ ಮಸೀದಿ ನೆಲಸಮಗೊಂಡು 23 ವರ್ಷ ಗತಿಸಿವೆ. ಅದೇ ಕಾಲಘಟ್ಟದಲ್ಲಿ ಅಂದರೆ ಅದಕ್ಕಿಂತ ಕೊಂಚ ಮುಂಚೆ ರಶ್ಯದ ಸಮಾಜವಾದಿ ವ್ಯವಸ್ಥೆ ಕುಸಿದು ಬಿತ್ತು. ಸೋವಿಯತ್ ಸಮಾಜವಾದಿ ವ್ಯವಸ್ಥೆ ಕುಸಿದುಬಿದ್ದ ನಂತರ ಇಡೀ ಜಗತ್ತಿನಲ್ಲಿ ಘೋರ ಅಂಧಃಕಾರ ಕವಿದಿದೆ. ಸಮಾನತೆ, ಸಾಮಾಜಿಕ ನ್ಯಾಯದ ಘೋಷಣೆಗಳು ಅರಣ್ಯರೋದನಗಳಾಗಿವೆ. ಎಲ್ಲೆಡೆ ಆಂಗ್ಲೊ ಅಮೆರಿಕನ್ ಸಾಮ್ರಾಜ್ಯಶಾಹಿಯ ಅಟ್ಟಹಾಸ ನಡೆದಿದೆ. ಭಾರತವೂ ಇದಕ್ಕೆ ಹೊರತಲ್ಲ. ದೇಶವನ್ನೇ ಅಂಬಾನಿ, ಅದಾನಿಗಳಿಗೆ ಮಾರಾಟ ಮಾಡಲು ಹೊರಟ ಪರಿವಾರಕ್ಕೆ ಸೇರಿದ ವ್ಯಕ್ತಿ ಈ ದೇಶದ ಪ್ರಧಾನಿಯಾಗಿದ್ದಾರೆ. ತೊಂಬತ್ತರ ದಶಕದಲ್ಲಿ ಸೋವಿಯತ್ ವ್ಯವಸ್ಥೆ ಕುಸಿದು ಬಿದ್ದ ನಂತರ ಲೊಹಿಯಾವಾದಿ ಚಿಂತಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಒಮ್ಮೆ ಸಿಕ್ಕಿದ್ದರು. ಭೇಟಿಯಾದಾಗಲೆಲ್ಲ ಕಮ್ಯೂನಿಸ್ಟರೆಂದು ನಮ್ಮನ್ನೆಲ್ಲ ಛೇಡಿಸುತ್ತಿದ್ದ ಪ್ರೊಫೆಸರ್ ಆ ದಿನ ‘‘ಛೇ ಹೀಗಾಗಬಾರದಿತ್ತು. ರಶ್ಯದ ಸೋಷಲಿಸ್ಟ್ ವ್ಯವಸ್ಥೆ ಒಂದು ಮಾದರಿಯಾಗಿ ಇರಬೇಕಿತ್ತು.’’ ಎಂದು ತುಂಬ ಪೇಚಾಡಿದರು. ಇನ್ನು ಮುಂದೆ ಸಾಮಾಜಿಕ ನ್ಯಾಯದ ಸಮಾನತೆಯ ದನಿಗಳೆಲ್ಲ ಉದುಗಿ ಹೋಗುತ್ತವೆ ಎಂದು ಅವರು ಹೇಳಿದ್ದರು.
ಆಗ ಶಾಸಕರಾಗಿದ್ದ ನಂಜುಂಡಸ್ವಾಮಿ ವಿಧಾನಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪಿಸಿದ್ದರು. ಬಿಜೆಪಿ ಸದಸ್ಯರೊಬ್ಬರು ಸೋವಿಯತ್ ವ್ಯವಸ್ಥೆ ಕುಸಿದು ಬಿದ್ದ ಬಗ್ಗೆ ವ್ಯಂಗ್ಯ ಮಾಡಿದಾಗ ‘‘ಸಮಾಜವಾದ ಸೋತಿಲ್ಲ. ಸೋತಿದ್ದು ಒಂದು ಪ್ರಯೋಗ ಮಾತ್ರ. ಮತ್ತೆ ಪ್ರಯತ್ನ, ಪ್ರಯೋಗಗಳು ನಡೆದೇ ನಡೆಯುತ್ತವೆ’’ ಎಂದು ಉತ್ತರಿಸಿದ ನೆನಪು ನನ್ನ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ.
ಸೋವಿಯತ್ ಪ್ರಯೋಗ ವಿಫಲಗೊಂಡ ನಂತರ ಜಗತ್ತಿನಲ್ಲಿ ಸಮಾನತೆ, ಆರ್ಥಿಕ, ಸಾಮಾಜಿಕ ನ್ಯಾಯದ ಸಿದ್ಧಾಂತಗಳು ಮಾತ್ರ ಮುಸುಕಾಗಲಿಲ್ಲ. ಮಾರುಕಟ್ಟೆ ಆರ್ಥಿಕತೆಯ ಅಬ್ಬರದಲ್ಲಿ ಮನುಷ್ಯ ಸಂಬಂಧಗಳೇ ಅಪವೌಲ್ಯಗೊಂಡವು. ವೈಯಕ್ತಿಕ ಆದರ್ಶ, ಪ್ರಾಮಾಣಿಕತೆ, ಸರಳತೆಗಳೆಲ್ಲ ಅರ್ಥಹೀನವಾಗಿ ಗಾಂಧೀಜಿ, ಮಾರ್ಕ್ಸ್, ಲೋಹಿಯಾರಂಥ ಐಕಾನ್‌ಗಳು ದಿಕ್ಕಿಲ್ಲದಂತಾದರೂ ಒಬ್ಬ ಅಂಬೇಡ್ಕರ್ ಮಾತ್ರ ಈಗಲೂ ನಮ್ಮೆದುರು ಹಸಿರಾಗಿ ಇದ್ದಾರೆ. ಈ ರಿಂಗ್ ಟೋನ್ ಹಾಡಿನಲ್ಲಿ ಅಂಥದೇನಿರಲಿಲ್ಲ. ‘‘ತುಮೆ ಕರಾರೇ ಕಿಲೆ ಹಲ್ಲಾ ಮಜ್‌ಭೂತ್ ಭೀನಾ ಕಿಲ್ಲಾ’’ ಎಂಬುದು ಈ ಹಾಡಿನ ಸಾಲು ‘‘ನೀವೆಷ್ಟೇ ಹಲ್ಲೆ ಮಾಡಿದರೂ ಭೀಮನ ಕೋಟೆ ಭದ್ರವಾಗಿದೆ’’ ಎಂಬುದು ಈ ಹಾಡಿನ ಅರ್ಥ. ಅಂಬೇಡ್ಕರ್ ಪ್ರಭಾವ ಎಷ್ಟಿದೆ ಅಂದರೆ ಗುಪ್ತವಾಗಿ ಮನಸಿನೊಳಗೆ ಬಾಬಾ ಸಾಹೇಬರನ್ನು ದ್ವೇಷಿಸುವ ಸಂಘಪರಿವಾರದ ಗೋಡ್ಸೆವಾದಿಗಳು ಬಹಿರಂಗವಾಗಿ ಕ್ರಾಂತಿಸೂರ್ಯ ಎಂದು ಅಂಬೇಡ್ಕರ್‌ರನ್ನು ಹೊಗಳುತ್ತಾರೆ. ಡಾ. ಅಂಬೇಡ್ಕರ್ ಕೊನೆಯುಸಿರು ಇರುವವರೆಗೂ ಕೋಮುವಾದಿ, ಜಾತಿವಾದಿ ಶಕ್ತಿಗಳ ಜೊತೆ ರಾಜಿ ಮಾಡಿಕೊಳ್ಳಲಿಲ್ಲ. ಅಧಿಕಾರಕ್ಕಾಗಿ ಎಂದೂ ಹಪಹಪಿಸಲಿಲ್ಲ. ತನ್ನ ಮಕ್ಕಳಿಗಾಗಿ ಸಂಪತ್ತನ್ನು ಸಂಗ್ರಹಿಸಲಿಲ್ಲ. ತನ್ನ ಮಗ ಯಶವಂತ್‌ರಾವ್‌ನನ್ನು ರಾಜಕೀಯ ಉತ್ತರಾಧಿಕಾರಿಯನ್ನಾಗಿ ಬೆಳೆಸಲಿಲ್ಲ. ಆದರೆ ಅಂಬೇಡ್ಕರ್ ಅವರಿಗಿದ್ದ ಈ ಆದರ್ಶ ಅವರ ಹೆಸರು ಹೇಳಿಕೊಂಡು ಗೆದ್ದ ಎಷ್ಟು ಜನರಿಗಿದೆ? ಅಯೋಧ್ಯೆಯ ಬಾಬರಿ ಮಸೀದಿ ನೆಲಸಮದ ನಂತರವೂ ಬಿಜೆಪಿ ಜೊತೆ ರಾಜಿ ಮಾಡಿಕೊಂಡು ಕೇಂದ್ರ ಮಂತ್ರಿಯಾಗಿದ್ದ ರಾಮ್‌ವಿಲಾಸ್ ಪಾಸ್ವಾನ್ ಗುಜರಾತ್ ಹತ್ಯಾಕಾಂಡದ ನಂತರ ಮೋದಿ ಕ್ರೌರ್ಯ ಪ್ರತಿಭಟಿಸಿ ರಾಜೀನಾಮೆ ನೀಡಿದ್ದರು. ಈಗ ಮತ್ತೆ ಅದೇ ಮೋದಿಗೆ ಶರಣಾಗಿ ಕೇಂದ್ರ ಮಂತ್ರಿಯಾದರು. ಬಿಹಾರದಲ್ಲಿ ತನ್ನ ಮಗನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಹೋಗಿ ಜನರಿಂದ ತಿರಸ್ಕರಿಸಲ್ಪಟ್ಟರು. ಈ ಪಾಸ್ವಾನ್ ತನ್ನ ರಾಜಕೀಯ ಉತ್ತರಾಧಿಕಾರಿಯನ್ನಾಗಿ ತನ್ನ ಪುತ್ರ ಚಿರಾಗ್ ಪಾಸ್ವಾನ್‌ರನ್ನು ಬೆಳೆಸಿದ್ದಾರೆ. ಆತನನ್ನು ಪಕ್ಕಕ್ಕೆ ಕೂರಿಸಿಕೊಂಡು ಪತ್ರಿಕಾಗೋಷ್ಠಿ ಮಾಡುತ್ತಿರುವ ಫೋಟೊಗಳು ನಿತ್ಯವೂ ಮಾಧ್ಯಮಗಳಲ್ಲಿ ನೋಡಿ ಈ ಮನುಷ್ಯನಿಗೆ ಸಂಕೋಚವೇ ಇಲ್ಲವೇ ಎನಿಸಿತು. ಇಂಥವರು ಅಂಬೇಡ್ಕರ್ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬರುತ್ತಾರೆ. ಆದರೆ ಅಂಬೇಡ್ಕರ್ ಹೆಸರು ಬಳಸಿಕೊಂಡು ಮನುವಾದಿಗಳ ಜೊತೆ ಸೇರಿದರೆ ತಕ್ಕ ಶಾಸ್ತಿ ಅನುಭವಿಸುತ್ತಾರೆ.
ದಲಿತ ಸಮುದಾಯದ ಹಕ್ಕಿಗಾಗಿ ಹೋರಾಡುತ್ತಿದ್ದ ಉದಿತ್‌ರಾಜಾ ಎಂಬ ವ್ಯಕ್ತಿ ಸಂಘಪರಿವಾರಕ್ಕೆ ಶರಣಾಗಿ ಲೋಕಸಭೆಯನ್ನು ಪ್ರವೇಶಿಸಿದಾಗ ವಂಶಾಡಳಿತ ವಿರೋಧಿಸಿದ ಡಾ. ಲೋಹಿಯಾ ಅನುಯಾಯಿ ಮುಲಾಯಂ ಸಿಂಗ್ ಯಾದವ್ ತನ್ನ ಪುತ್ರನನ್ನು ಉತ್ತರಾಧಿಕಾರಿಯನ್ನಾಗಿ ಮಾಡಿಕೊಂಡು ಉತ್ತರಪ್ರದೇಶದ ಮುಖ್ಯಮಂತ್ರಿಯನ್ನಾಗಿ ಮಾಡಿದರು. ಇದು ಈ ದೇಶದ ದುರಂತ. ಹೀಗೆ ಜೀವಂತ ಐಕಾನ್‌ಗಳಿಲ್ಲದ ಇಂದಿನ ಸನ್ನಿವೇಶದಲ್ಲಿ ಆರೆಸ್ಸೆಸ್ ಎಂಬ ಫ್ಯಾಶಿಸ್ಟ್ ವಿಷಸರ್ಪ ಬುಸುಗುಡುತ್ತಿದೆ. ಇದರ ಹುಟ್ಟಡಗಿಸಬೇಕಾದರೆ ಮಿತ್ರ ಶ್ರೀಧರ ಪ್ರಭು ಹಿಂದೊಮ್ಮೆ ಹೇಳಿದಂತೆ ‘‘ಗಾಂಧಿ, ಅಂಬೇಡ್ಕರ್ ಎಂಬ ಐಕಾನ್‌ಗಳನ್ನು ನಾವು ಅವಲಂಬಿಸಲೇ ಬೇಕು. ಪಾಸ್ವಾನ್, ಅಠಾವಳೆ ಅವರನ್ನು ಬುಟ್ಟಿಗೆ ಹಾಕಿಕೊಂಡಂತೆ ಅಂಬೇಡ್ಕರ್ ಸಿದ್ಧಾಂತವನ್ನು ಹಾಕಿಕೊಳ್ಳಲು ಸಾಧ್ಯವಿಲ್ಲ ಎಂದು ಚಡ್ಡಿಗಳಿಗೂ ಗೊತ್ತಿದೆ. ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಿ ಅಂಬಾನಿ, ಅದಾನಿಗಳು ತನ್ನನ್ನು ಪ್ರಧಾನಿಯನ್ನಾಗಿ ಮಾಡಿದ ಋಣ ತೀರಿಸಲು ರೈತರ ಭೂಮಿಯನ್ನು ಬಲವಂತವಾಗಿ ಕಿತ್ತುಕೊಂಡು ದೊಡ್ಡ ಕಾರ್ಪೊರೇಟ್ ಕಂಪೆನಿಗಳಿಗೆ ಧಾರೆ ಎರೆದುಕೊಡಲು ಪ್ರಧಾನಿ ನರೇಂದ್ರ ಮೋದಿ ಹುನ್ನಾರ ನಡೆಸುತ್ತಿರುವ ಈ ದಿನಗಳಲ್ಲಿ ಗಾಂಧಿ, ಅಂಬೇಡ್ಕರ್, ಮಾರ್ಕ್ಸ್ ನಮಗೆ ಪ್ರಸ್ತುತರಾಗುತ್ತಾರೆ.
ಇದೊಂದು ಐತಿಹಾಸಿಕ ಕಾಲಘಟ್ಟ. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಎಲ್ಲರನ್ನು ‘ಗಾಂಧಿ ಒಂದು ಮಾಡಿದಂತೆ ಈಗಲೂ ಗಾಂಧಿವಾದಿಗಳು, ಮಾರ್ಕ್ಸ್‌ವಾದಿಗಳು, ಅಂಬೇಡ್ಕರ್‌ವಾದಿಗಳು, ಲೋಹಿಯಾ ವಾದಿಗಳು ಒಂದೇ ವೇದಿಕೆಗೆ ಬರಬೇಕಾಗಿದೆ. ಆಗ ಈ ಅಂಬಾನಿ, ಅದಾನಿ, ಚಡ್ಡಿಪಡೆ ಪಲಾಯನ ಮಾಡುತ್ತದೆ.
ಎಡಪಕ್ಷಗಳು ಈಗ ಬಿ.ಎಂ.ಎಸ್.ನಂತಹ ಸಂಘಪರಿವಾರದ ಸಂಘಟನೆಗಳನ್ನು ನಂಬಿಕೊಂಡು ಜಂಟಿಹೋರಾಟ ನಡೆಸುವುದರಲ್ಲಿ ಅರ್ಥವಿಲ್ಲ. ಮುಂಚೆ ಭೂಸ್ವಾಧೀನ ಮಸೂದೆ ವಿರೋಧಿಸಿದ್ದ ಆರೆಸ್ಸೆಸ್‌ನ ರೈತ ಸಂಘಟನೆ ಭಾರತೀಯ ಕಿಸಾನ್ ಸಂಘ ಈಗ ಈ ಕರಾಳ ಮಸೂದೆಯನ್ನು ಬೆಂಬಲಿಸಿದೆ. ಮುಂದೊಮ್ಮೆ ಕಾರ್ಮಿಕ ವಿರೋಧಿ ಕಾನೂನು ಜಾರಿಗೆ ಬಿಎಂಎಸ್ ಬೆಂಬಲಿಸಿದರೆ ಅಚ್ಚರಿಪಡಬೇಕಿಲ್ಲ. ಅದು ಆರೆಸ್ಸೆಸ್‌ನ ಕಾರ್ಮಿಕ ವೇದಿಕೆ ಎಂಬುದನ್ನು ಮರೆಯಬಾರದು. ಗಾಂಧಿ-ಅಂಬೇಡ್ಕರ್ ಬದುಕಿದ್ದಾಗ ಅವರ ನಡುವೆ ಕೆಲ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳು ಉಂಟಾಗಿರಬಹುದು. ಆಗಿನ ಸನ್ನಿವೇಶವೇ ಬೇರೆ. ಈಗಿನ ಬದಲಾದ ಸನ್ನಿವೇಶದಲ್ಲಿ ಮನುವಾದಿ ಫ್ಯಾಶಿಸ್ಟ್ ಕತ್ತಲನ್ನು ತೊಲಗಿಸಲು ಗಾಂಧಿ-ಅಂಬೇಡ್ಕರ್ ಎಂಬ ಬೆಳಕಿನ ಜ್ಯೋತಿಗಳು ಸದಾ ನಮ್ಮ ಕೈಯಲ್ಲಿರಬೇಕು ಎಂಬುದನ್ನು ಮರೆಯಬಾರದು.
0 comments:
Post a Comment
Click to see the code!
To insert emoticon you must added at least one space before the code.