PLEASE LOGIN TO KANNADANET.COM FOR REGULAR NEWS-UPDATES





ಕೊಪ್ಪಳ : ಸಾಹಿತ್ಯ ಮತ್ತು ಸಂಸ್ಕೃತಿಯನ್ನು ದೇಶ-ಕಾಲದೊಂದಿಗೆ ಮುಖಾಮುಖಿಯಾಗಿಸಿ ಎದುರಾಗುವ ಸವಾಲುಗಳಿಗೆ ಪರಿಹಾರದ ಪರ್ಯಾಯವನ್ನು ಕಂಡುಕೊಳ್ಳುವ ಉದ್ದೇಶದ ಜನನುಡಿ ಡಿಸೆಂಬರ್ ೧೯-೨೦ರಂದು ಮಂಗಳೂರಿನಲ್ಲಿ ನಡೆಯಲಿದೆ. ಪ್ರಖ್ಯಾತ ಸಾಹಿತಿ ದೇವನೂರ ಮಹಾದೇವ ಅವರು ಉದ್ಘಾಟಿಸಲಿರುವ ಜನನುಡಿಯಲ್ಲಿ ಎರಡು ದಿನಗಳ ಕಾಲ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರು ಮತ್ತು ಹೋರಾಟಗಾರರು ಭಾಗವಹಿಸಲಿದ್ದಾರೆ.
ಮೂರು ವರ್ಷಗಳ ಹಿಂದೆ ಅಭಿಮತ ಎಂಬ ಕೆಲವೇ ಸಮಾನ ಮನಸ್ಕರ ಸಂಘಟನೆಯ ಮೂಲಕ ಪ್ರಾರಂಭಗೊಂಡ ಜನನುಡಿ ಇಂದು ನಾಡಿನ ಸಾಹಿತ್ತಿಕ, ಸಾಂಸ್ಕೃತಿಕ ,ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದ ನಾಯಕರ ಗಮನಸೆಳೆಯುತ್ತಿರುವ ಪ್ರಮುಖ ಕಾರ್ಯಕ್ರಮವಾಗಿದೆ. ಕಲಬುರಗಿಯಿಂದ ಹಿಡಿದು ಮೈಸೂರು ವರೆಗೆ ಶಿವಮೊಗ್ಗದಿಂದ ಕೋಲಾರದ ವರೆಗೆ ರಾಜ್ಯದ ಬಹುತೇಕ ಭಾಗಗಳಿಂದ ಜನ  ಸ್ವಇಚ್ಚೆಯಿಂದ ಬಂದು ಜನನುಡಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ..
ಈ ಬಾರಿಯ ಜನನುಡಿಯಲ್ಲಿ ನುಡಿಮಾರ್ಗ, ಮುಸ್ಲಿಮರ ತವಕತಲ್ಲಣಗಳು, ಅಭಿವೃದ್ಧಿಯ ಸವಾಲುಗಳು  ಮತ್ತು ಮತೀಯ ಅಸಹಿಷ್ಣುತೆ ಎಂಬ ವಿಷಯದ ಮೇಲೆ ನಾಲ್ಕು ವಿಚಾರಗೋಷ್ಠಿಗಳು ನಡೆಯಲಿದ್ದು, ದಿನಾಂಕ ೧೯ ರಂದು ಸಂಜೆ ಮೈಸೂರಿನ ಗುರುರಾಜ್ ತಂಡ ಮಲೆಮಹದೇಶ್ವರ ಮಂಟೆಸ್ವಾಮಿ ಕಾವ್ಯವನ್ನು ತಂಬೂರಿ ಜನಪದ ಗಾಯನದ ಮೂಲಕ ಪ್ರಸ್ತುತ ಪಡಿಸಲಿದ್ದಾರೆ.
ಕಡಿದಾಳು ಶಾಮಣ್ಣ, ಡಾ.ಸಿ.ಎಸ್. ದ್ವಾರಕನಾಥ್, ಕೋಟಿಗಾನಹಳ್ಳಿ ರಾಮಯ್ಯ, ಬಾನು ಮುಷ್ತಾಕ್, ಪ್ರೊ. ರಹಮತ್ ತರಿಕೆರೆ, ಡಿ.ಉಮಾಪತಿ, ದಿನೇಶ್ ಅಮಿನ್ ಮಟ್ಟು, ಶಶಿಧರ್ ಭಟ್, ಡಾ.ಚಂದ್ರ ಪೂಜಾರಿ,  ಡಾ.ಮುಜಾಪರ್ ಅಸಾದಿ, ಪ್ರೊ.ಬಿ.ಗಂಗಾಧರ ಮೂರ್ತಿ, ಕೆ.ಎಸ್.ವಿಮಲಾ, ಡಾ.ಕೆ.ಷರೀಪಾ, ಡಾ.ಸುನಂದಮ್ಮ, ಡಾ.ಎಚ್.ವಿ.ವಾಸು, ಹುಲಿಕಂಟೆ ಮೂರ್ತಿ, ಪೀರ್ ಬಾಷಾ, ಲಕ್ಷಣ ಹೂಗಾರ್, ಇಂದಿರಾ ಕೃಷ್ಣಪ್ಪ, ನರೇಂದ್ರ ನಾಯಕ್, ಡಾ.ಆರ್.ಸುನಂದಮ್ಮ ಎಚ್.ಎಸ್.ಅನುಪಮ, ಜಾನ್ ಫರ್ನಾಂಡೀಸ್,                   ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಬಿ.ಟಿ.ಜಾಹ್ನವಿ, ಸಂವರ್ಥ ಸಾಹಿಲ್ ಮತ್ತು ೨೪ಕ್ಕೂ ಅಧಿಕ ಕವಿಗಳು ಎರಡು ದಿನಗಳ ಕಾಲವೂ ಜನನುಡಿಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಡಾ.ಕೆ.ವೈ.ನಾರಾಯಣ ಸ್ವಾಮಿ ಅವರು ಅಧ್ಯಕ್ಷತೆಯಲ್ಲಿ ನಡೆಯುವ  ಕವಿಗೋಷ್ಠಿಯ ಆಶಯ ಭಾಷಣವನ್ನು  ಟಿ.ಕೆ.ದಯಾನಂದ ಮಾಡಲಿದ್ದಾರೆ. 
ಮಂಗಳೂರಿನ ನಂತೂರುನಲ್ಲಿರುವ ಶಾಂತಿಕಿರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ಭಾಗವಹಿಸಲು ಬರುವ ಪ್ರತಿನಿಧಿಗಳಿಗೆ ಉಚಿತ ಊಟ-ವಸತಿ ಕಲ್ಪಿಸಲಾಗಿದೆ. ಕೊಪ್ಪಳ ಜಿಲ್ಲೆಯಿಂದ ವಿಠ್ಠಪ್ಪ ಗೋರಂಟ್ಲಿ, ಬಿ.ಪೀರಬಾಷಾ, ಸಿರಾಜ್ ಬಿಸರಳ್ಳಿ, ರಾಜಾಬಕ್ಷಿ ಎಚ್.ವಿ., ಪ್ರಮೋದ ತುರ್ವಿಹಾಳ, ಜೆ.ಬಾರದ್ವಾಜ,ಪಂಪಾರಡ್ಡಿ ಅರಳಿಹಳ್ಳಿ ಸೇರಿದಂತೆ ಇತರ ಪ್ರಗತಿಪರರು ಭಾಗವಹಿಸಲಿದ್ದಾರೆ. ಆಸಕ್ತರು ಭಾಗವಹಿಸಲು ಕೋರಿದ್ದಾರೆ. 






17 Dec 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top