ಕೊಪ್ಪಳ-18- ನಿತ್ಯ ದುಡಿದು ಬರುವ ಜೀವಕ್ಕೆ ಮುಖದಲ್ಲಿ ಸಂತಸ ಕಾಣಲು ನಿತ್ಯ ದೇವರ ಆರಾಧನೆಯಿಂದ ಮಾನಸಿಕ ನೆಮ್ಮದಿ ಸಾಧ್ಯ ಎಂದು ಬಾಗಲಕೋಟೆ-ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಶ್ರೀಸಿದ್ಧರಾಮೇಶ್ವರ ಸ್ವಾಮೀಜಿ ನುಡಿದರು. ಅವರು ಬುಧುವಾರದಂದು ಭಾಗ್ಯನಗರದ ನವನಗರದಲ್ಲಿ ಶ್ರೀಮುದಕಮ್ಮ-ಕೆಂಚಮ್ಮ ದೇವರ ಪ್ರತಿಷ್ಠಾಪನೆಯನ್ನು ನೇರವೇರಿಸಿ ಮಾತನಾಡಿದ ಶ್ರೀಗಳು ಪ್ರತಿಯೊಬ್ಬರು ಇಂದು ಸಂಸ್ಕಾರವಂತರಾಗಬೇಕು ಅಂದಾಗ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ, ಪ್ರತಿಯೊಬ್ಬರು ಕಡ್ಡಾಯವಾಗಿ ಮೊದ
ಲು ಶಿಕ್ಷಣ ಪಡೆಯಬೇಕು ಎಂದ ಅವರು ಇಂದು ನಿತ್ಯ ದೇವಾಲಯಗಳು ಹೆಚ್ಚುತ್ತೀವೆ ಅವುಗಳ ನಿರ್ಮಾಣದ ಜೊತೆ ನಿತ್ಯ ದೇವಾಲಯಗಳನ್ನು ಸ್ವಚ್ಛತೆಗೊಳಿಸುವುದರಿಂದ ಪೂಜೆ-ಪುನಸ್ಕಾರದಿಂದ ನೆಮ್ಮದಿ ಕಂಡುಕೊಳ್ಳಬೇಕು, ಅಂದಾಗ ಕುಟುಂಬದಲ್ಲಿ ಸಂತೋಷ ಕಾಣಬಹುದು, ನಿತ್ಯ ಟಿ.ವ್ಹಿ ಯಲ್ಲಿ ಬರುವ ದೇವಸ್ಥಾನಗಳಿಗೆ ಭಕ್ತಾಧಿಗಳು ನೀಡುವ ಮಹತ್ವವನ್ನು ನಿಮ್ಮ ಸುತ್ತಮುತ್ತ ಇರುವ ದೇವಸ್ಥಾನಗಳಿಗೆ ಮಹತ್ವ ನೀಡಿ ಭಕ್ತಿಯನ್ನು ಕಂಡುಕೊಳ್ಳುವಂತೆ ತಿಳಿಸಿದರು. ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಜಿಲ್ಲಾ ಭೋವಿ ಸಮಾಜದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಭೋವಿ ನೇರವೇರಿಸಿದರು. ವೇದಿಕೆ ಮೇಲೆ ಭೋವಿ ಸಮಾಜದ ಜಿಲ್ಲಾಧ್ಯಕ್ಷ ಸತ್ಯಪ್ಪ ಭೋವಿ ಗೌರಿಪುರ, ಸಮಾಜದ ಮುಖಂಡರಾದ ನಿಂಗಪ್ಪ ಭೋವಿ, ರೇವಣಪ್ಪ ವಜ್ರಬಂಡಿ, ದೇವಸ್ಥಾನ ಕಮೀಟಿಯ ಫಕೀರಪ್ಪ, ದೇವಪ್ಪ, ಸುರೇಶ ಭೋವಿ ಕಿನ್ನಾಳ್,ತಿಮ್ಮಣ್ಣ ಭೋವಿ, ವೆಂಕಟೇಶ್ ಭೋವಿ, ಚಂದ್ರಶೇಖರ ಭೋವಿ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.
Home
»
Koppal News
»
koppal organisations
» ನಿತ್ಯ ದೇವರ ಆರಾಧನೆಯಿಂದ ಮಾನಸಿಕ ನೆಮ್ಮದಿ-ಇಮ್ಮಡಿ ಶ್ರೀಸಿದ್ಧರಾಮೇಶ್ವರ ಶ್ರೀಗಳು.
Subscribe to:
Post Comments (Atom)

0 comments:
Post a Comment