PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ -05-  ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವು ಒಂದೇ ವರ್ಷದಲ್ಲಿ ತರಾತುರಿಯಲ್ಲಿ ಸಿದ್ಧಪಡಿಸಿ ವರದಿ ಸಲ್ಲಿಸಿದ್ದು ವರದಿ ಹಿಂದೆ ಹಲವಾರು ಪಟ್ಟಭದ್ರಹಿತಾಸಕ್ತಿಗಳ ಕೈವಾಡ ಇದೆ ಎಂಬುದು ಮೇಲ್ನೋಟಕ್ಕೆ ಸಾಬಿತಾಗಿದ್ದು, ವರದಿಯು ಸತ್ಯಕ್ಕೆ ದೂರವಾಗಿದ್ದು ಈ ವರದಿಯನ್ನು ಅಂಗೀಕರಿಸದೆ ಕೂಡಲೇ ಅದನ್ನು ತಿರಸ್ಕರಿಸಬೇಕು ಎಂದು ಗುರುವಾರ ನ್ಯಾ.ಸದಾಶಿವ ಆಯೋಗ ವರದಿ ವಿರೋಧಿ ಹೋರಾಟ ಒಕ್ಕೂಟ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ-ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ಈ ವರದಿ ಪೂರ್ವಾಗ್ರಹ ಪೀಡಿತ, ಅವೈಜ್ಞಾನಿಕ, ಅಸಂವಿಧಾನಿಕ ಹಾಗೂ ರಾಜಕೀಯ ಪ್ರೇರಿತವಾಗಿದೆ ಆಯೋಗದ ಶಿಫಾರಸ್ಸುಗಳು, ಪರಿಶಿಷ್ಟಜಾತಿ, ಉಪಜಾತಿಗಳಲ್ಲಿ ವೈಷಮ್ಯ ಹುಟ್ಟಿಸಿ ದಲಿತ ಸಮುದಾಯವನ್ನು ಒಡೆದಾಳುವ ನೀತಿಯಿಂದ ಕೂಡಿದ್ದು ಈ ವರದಿಯ ಶಿಫಾರಸ್ಸುಗಳಿಗೆ ಯಾವುದೇ ಮಹತ್ವ ನೀಡಬಾರದು, ದೇಶದಲ್ಲಿ ರಾಷ್ಟ್ರಮಟ್ಟದಲ್ಲಿ ಅನೇಕ ರಾಜ್ಯಗಳಲ್ಲಿ ಈ ರೀತಿಯ ಸಮೀಕ್ಷೆಗಾಗಿ ಆಯೋಗಗಳು ರಚನೆಯಾಗಿವೆ, ಆದರೆ ಎಲ್ಲಿಯೂ ಯಾವ ವರದಿಗಳಲ್ಲಿ ಸ್ಪ್ರಶ್ಯ-ಅಸ್ಪ್ರಶ್ಯರೆಂಬ ವಿಂಗಡನೆ ಮಾಡಿರುವುದಿಲ್ಲ, ಸಂವಿಧಾನ ರಚನೆಕಾರರಾಗಿದ್ದ ಭಾರತ ರತ್ನ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಪರಿಶಿಷ್ಟ ಪಟ್ಟಿ ತಯಾರಿಕೆಯಲ್ಲಿ ಸ್ಪ್ರಶ್ಯ-ಅಸ್ಪ್ರಶ್ಯರೆಂಬ ಭೇದ ಮಾಡಿದ್ದು ಕಂಡು ಬರುವುದಿಲ್ಲ,ಹೀಗಿರುವಾಗ ನ್ಯಾ.ಸದಾಶಿವ ಅವರಿಗೆ ಈ ಹಕ್ಕು ನೀಡಿದವರಾರು? ದೋಷ ಪೂರಿತವಾಗಿರುವ ಈ ವರದಿ ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನರಾಮ ಹಾಗೂ ಮಹಾತ್ಮ ಗಾಂಧೀಜಿಯವರ ಆಶಯಗಳಿಗೆ ವಿರುದ್ಧವಾಗಿದೆ.
ಸುಪ್ರಿಂಕೋರ್ಟ, ಹೈಕೋರ್ಟ, ಜಿಲ್ಲಾ ಕೋರ್ಟಗಳಲ್ಲಿ ನ್ಯಾಯಾಧೀಶ ಸ್ಥಾನದಲ್ಲಿ ಐಎಎಸ್,ಐಪಿಎಸ್,ಐಎಫ್‌ಎಸ್ ಸೇವೆಗಳಲ್ಲಿ ಸ್ಪ್ರಶ್ಯರೆಂದು ಪರಿಗಣಿಸಲ್ಪಟ್ಟಿರುವ ವಡ್ಡರ,ಲಂಬಾಣಿ,ಕೊರವಾ,ಕೊರಚ,ಸುಡುಗಾಡು ಸಿದ್ಧ ಜನಾಂಗಕ್ಕೆ ಸೇರಿದವರು ಕಂಡುಬರುವುದಿಲ್ಲ. ರಾಜ್ಯಗಳಲ್ಲಿ ಕ್ಲಾಸ್-೧ ಕ್ಲಾಸ್-೨ ಸೇವೆಗಳಲ್ಲಿ ಬೆರಳೆಣಿಕೆಯಷ್ಟು ಈ ಜನಾಂಗದವರಿಲ್ಲ ಹೀಗಿರುವಾಗ ನ್ಯಾ.ಸದಾಶಿವ ವರದಿಯಲ್ಲಿನ ಹುಸಿತನ ಹೇಗೆ ಒಪ್ಪಲು ಸಾಧ್ಯ ನಂಬಲು ಅಸಾಧ್ಯವಾದ ಸುಳ್ಳಿನ ಕಂತೆಯಂತೆ ಇರುವ ಈ ವರದಿಯನ್ನು ಕಸದ ಬುಟ್ಟಿಗೆ ಹಾಕಲು ಯೋಗ್ಯವಾಗಿದೆ, ಇವರು ಸಮೀಕ್ಷೆ ಮಾಡದೇ ನೀಡಿರುವ ವರದಿಯಾಗಿದೆ ರಾಜ್ಯ ಸರಕಾರ ಈ ವರದಿ ಅಂಗೀಕರಿಸಲು ಮುಂದಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಗಿದೆ.
ನೇತೃತ್ವವನ್ನು ನ್ಯಾ.ಸದಾಶಿವ ಆಯೋಗ ವರದಿ ವಿರೋಧಿ ಹೋರಾಟ ಒಕ್ಕೂಟದ ಹಾಗೂ ಲಂಬಾಣಿ ಸಮಾಜದ ಜಿಲ್ಲಾಧ್ಯಕ್ಷ ಭರತ್ ನಾಯಕ್, ಜಿಲ್ಲಾ ಭೋವಿ ಸಮಾಜದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಭೋವಿ, ಜಿಲ್ಲಾ ಭಜಂತ್ರಿ ಕೊರವ ಸಮಾಜದ ಜಿಲ್ಲಾಧ್ಯಕ್ಷ ಮಹೇಶ ಭಜಂತ್ರಿ, ರೇವಣಪ್ಪ ಭೋವಿ ವಜ್ರಬಂಡಿ, ನಾಗಪ್ಪ ಭೋವಿ ಚಿಕ್ಕೋಪ, ರಾಮಕೃಷ್ಣ ರಾಥೋಡ್, ಸುರೇಶ ಭೋವಿ ಕಿನ್ನಾಳ, ಭೀಮಜ್ಜ ಹಳ್ಳಿ, ದೇವಪ್ಪ ಭೋವಿ ಭಾಗ್ಯನಗರ, ಶೇಖರಪ್ಪ ಲಂಬಾಣಿ, ಹುಲುಗಪ್ಪ ಭಜಂತ್ರಿ, ಹನುಮೇಶ,ಎಲ್.ಶಿವಪ್ಪ, ಸೇರಿದಂತೆ ಮತ್ತೀತರರು ವಹಿಸಿದ್ದರು.

Advertisement

0 comments:

Post a Comment

 
Top