ರಾಷ್ಟ್ರೀಯ ಸ್ವಯಂ-ಸೇವಕ ಸಂಘ ಎಂದು ಹೆಸರಿಟ್ಟುಕೊಂಡ ಆರೆಸ್ಸೆಸ್ ತನ್ನ 90 ವರ್ಷಗಳ ಇತಿಹಾಸದಲ್ಲಿ ಹಿಂದೆಂದೂ ಎದುರಿಸಿದ ಪ್ರತಿರೋಧವನ್ನು ಈಗ ಎದುರಿಸುತ್ತಿದೆ. ತೀವ್ರ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ. ನರೇಂದ್ರ ಮೋದಿ ಸರಕಾರದ ುೂಲಕ ಅದು ಜಾರಿಗೆ ತರುತ್ತಿರುವ ಫ್ಯಾಶಿಸ್ಟ್ಟ್ ಕಾರ್ಯಸೂಚಿಯ ವಿರುದ್ಧ ಸಾಹಿತಿಗಳು, ಕಲಾವಿದರು, ಸಿನೆಮಾ ನಿರ್ದೇಶಕರು ಮಾತ್ರವಲ್ಲ, ರಿಸರ್ವ್ ಬ್ಯಾಂಕ್‌ನ ಗವರ್ನರ್ ರಘುರಾಮ ರಾಜನ್ ಮತ್ತು ಇನ್ಫೊಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ಭಾವನೆ ಮೂಡಲಿಯೆಂದು ನಾರಾಯಣಮೂರ್ತಿ ಹೇಳಿದ್ದಾರೆ. ಭಾರತದ ನಾಗರಿಕತೆಯ ಪ್ರತೀಕವಾದ ಬಹುಮುಖಿ ಸಂಸ್ಕೃತಿ ಕಾಪಾಡಿಕೊಳ್ಳಬೇಕೆಂದು ರಾಷ್ಟ್ರಪತಿ ಪ್ರಣವ್ ಮ
ುಖರ್ಜಿ ಪುನರುಚ್ಛಿಸಿದ್ದಾರೆ. ಇದರಿಂದ ದಿಕ್ಕು ತಪ್ಪಿದ ಸಂಘ ಪರಿವಾರದ ನಾಯಕರು ಮನ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. 1948ರಲ್ಲಿ ಮಹಾತ್ಮಾ ಗಾಂಧೀಜಿ ಹತ್ಯೆಯಾದಾಗ, ಸರಕಾರದ ತೀವ್ರ ನಿರ್ಬಂಧ ಮತ್ತು ಜನತೆಯ ಆಕ್ರೋಶ ಎದುರಿಸಿದರೂ ಕೂಡ ಸಂಘದ ಅಂದಿನ ಸರಸಂಘ ಚಾಲಕ ಮಾಧವ ಸದಾಶಿವ ಗೋಳ್ವಲ್ಕರ್ ಅಂದಿನ ಗೃಹಸಚಿವ ವಲ್ಲಭಭಾಯ್ ಪಟೇಲ್ ಅವರಿಗೆ ಮುಚ್ಚಳಿಕೆ ಬರೆದ ಪತ್ರ ಕೊಟ್ಟು, ಇನ್ಮುಂದೆ ರಾಜಕೀಯದಲ್ಲಿ ಭಾಗವಹಿಸುವುದಿಲ್ಲ ಎಂದರು. ಆನಂತರ ಜನರಿಂದ ತಿರಸ್ಕರಿಸಲ್ಪಟ್ಟ ಈ ಸಂಘಟನೆ 70ರ ದಶಕದ ಜೆಪಿ ಚಳವಳಿಯಲ್ಲಿ ಮರುಜನ್ಮ ಪಡೆಯಿತು. ಅಡ್ವಾಣಿಯವರ ಪಾದಯಾತ್ರೆ ನಂತರ ಲೋಕಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಹೆಚ್ಚಾಯಿತು.
ಈಗ ಕೇಂದ್ರದಲ್ಲಿರುವ ಮೋದಿ ಸರಕಾರವನ್ನು ಆರೆಸ್ಸೆಸ್ ನಿಯಂತ್ರಿಸುತ್ತಿದೆ. ಇದು ಬರೀ ನಿಯಂತ್ರಣವಲ್ಲ, ನಾಡಿನ ಚಿಂತಕರ ಕೊರಳಿಗೆ ಅದು ಯಮಪಾಶ ಬಿಗಿಯುತ್ತಿದೆ. ದಾಭೋಲ್ಕರ್, ಪನ್ಸ್ಸಾರೆ ಮತ್ತು ಕಲಬುರ್ಗಿಯವರ ಹತ್ಯೆ, ದಾದ್ರಿಯ ಕೊಲೆ ಹೀಗೆ ಕಾನೂನನ್ನು ಕೈಗೆತ್ತಿಕೊಂಡು ಅದು ನಡೆಸುತ್ತಿರುವ ಪುಂಡಾಟಿಕೆ ವಿರುದ್ಧ ದೇಶದ ಸಾಂಸ್ಕೃತಿಕ ಲೋಕದ ಚಿಂತಕರು ದನಿಯೆತ್ತಿದ್ದಾರೆ. ಒಬ್ಬರಾದ ಮೇಲೊಬ್ಬರು ಪ್ರಶಸ್ತಿ ಹಿಂದಿರುಗಿಸುತ್ತಿದ್ದಾರೆ. ಸಾಂಸ್ಕೃತಿಕ ಲೋಕದ ದಿಗ್ಗಜರ ಮರ್ಮಾಘಾತದಿಂದ ದಿಕ್ಕು ತಪ್ಪಿರುವ ಸಂಘ ಪರಿವಾರ ತನ್ನ ಆಸ್ಥಾನದಲ್ಲಿ ಇರುವ ಸಾಹಿತಿಗಳ ಮೂಲಕ ಪ್ರಗತಿಪರ ಸಾಹಿತಿಗಳ ವಿರುದ್ಧ ದಾಳಿ ಆರಂಭಿಸಿದೆ.
ಆರೆಸ್ಸೆಸ್‌ನಿಂದ ಅಂತರ ಕಾಯ್ದುಕೊಳ್ಳಲು ಈಗ ಪ್ರಯಾಸಪಡುತ್ತಿರುವ ಪೇಜಾವರ ಸ್ವಾಮಿಗಳು ಗೊಂದಲದಲ್ಲಿದ್ದಾರೆ. ತಾನು ಗೋಮಾಂಸ ಭಕ್ಷಿಸುವುದಾಗಿ ಮುಖ್ಯಮಂತ್ರಿ ಹೇಳಿಕೆ ನೀಡಿದ ನಂತರ ಅಸಮಾಧಾನ ವ್ಯಕ್ತಪಡಿಸಿದ ಪೇಜಾವರಶ್ರೀಗಳು ಹಾಗೆ ಹೇಳಬಾರದಿತ್ತು ಎಂದಿದ್ದಾರೆ. ಆದರೆ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟನೆಗೆ ಕರೆ ನೀಡಿದ್ದಾರೆ. ಆದರೆ ಸಂಘ ಪರಿವಾರದ ಕೇರಳ ಘಟಕ ನಾಯಕ ಕುಮಾರ್, ಗೋಮಾಂಸ ಭಕ್ಷಣೆಗೆ ನಮ್ಮ ಆಕ್ಷೇಪವಿಲ್ಲ ಎಂದು ನೀಡಿದ ಹೇಳಿಕೆಗೆ ಇವರಿಂದ ಉತ್ತರವಿಲ್ಲ. ಗೋವಾದಲ್ಲಿ ಬಿಜೆಪಿ ಸರಕಾರವಿದ್ದರೂ ಕೂಡ ಗೋಹತ್ಯೆ ನಿಷೇಧಿಸಿಲ್ಲ. ಅಲ್ಲಿನ ಮುಖ್ಯಮಂತ್ರಿ ಗೋಮಾಂಸ ಭಕ್ಷಣೆಯನ್ನು ಸವುರ್ಥಿಸುತ್ತಾರೆ. ಹೀಗೆ ಸಂಘ ಪರಿವಾರ ಒಂದೊಂದು ರಾಜ್ಯದಲ್ಲಿ ಒಂದೊಂದು ನಿಲುವನ್ನು ತಾಳುತ್ತ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ.
ಈ ದೇಶದಲ್ಲಿ ಈ ಹಿಂದೆ ಕಾಂಗ್ರೆಸ್, ಜನತಾ ಪರಿವಾರ ಮತ್ತು ಕಮ್ಯುನಿಸ್ಟ್ ಪಕ್ಷಗಳು ಕೇಂದ್ರದಲ್ಲಿ ಮತ್ತು ಉಳಿದ ರಾಜ್ಯಗಳಲ್ಲಿ ಸರಕಾರ ನಡೆಸಿವೆ. ಆವಾಗ ಇಂತಹ ಸಮಸ್ಯೆ ಉಂಟಾಗಿರಲಿಲ್ಲ. ಕೆಲ ಭ್ರಷ್ಟಾಚಾರದ ಹಗರಣಗಳು ಬಿಟ್ಟರೆ, ಜನತಾದಳ, ಆರ್‌ಜೆಡಿಯವರು ಸಂವಿಧಾನದ ಜೊತೆ ಎಂದಿಗೂ ಸಂಘರ್ಷಕ್ಕೆ ಇಳಿದಿಲ್ಲ. ಆದರೆ ಆರೆಸ್ಸೆಸ್ ಸಿದ್ಧಾಂತವೇ ಸಂವಿಧಾನ ವಿರೋಧಿ ಆಗಿರುವುದರಿಂದ ಆ ಸಿದ್ಧಾಂತವನ್ನು ನಂಬಿದ ಬಿಜೆಪಿ ಸರಕಾರ ನಿರ್ವಹಣೆಯಲ್ಲಿ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ಒಂದೆಡೆ ಸಂವಿಧಾನಕ್ಕೆ ನಿಷ್ಠೆ ವ್ಯಕ್ತಪಡಿಸುತ್ತಲೇ, ಇನ್ನೊಂದೆಡೆ ಸಂವಿಧಾನ ವಿರೋಧಿಯಾದ ಸಂಘ ಪರಿವಾರದ ಕಾರ್ಯಸೂಚಿಯನ್ನು ಜಾರಿಗೆ ತರುತ್ತಿದೆ.
ಜಾತಿ, ಮತ, ಭಾಷೆ ಮತ್ತು ಪ್ರದೇಶದ ಭೇದವೆನಿಸದೇ ಸಕಲರಿಗೂ ಸಮಾನ ಅವಕಾಶವನ್ನು ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ ನೀಡುತ್ತದೆ. ಭಾರತ ಜಾತ್ಯತೀತ ಜನತಂತ್ರವೆಂದು ಸ್ಪಷ್ಟವಾಗಿ ಘೋಷಿಸಿದೆ. ಜಾತ್ಯತೀತ ಸಿದ್ಧಾಂತಕ್ಕೆ ವಿರೋಧವಾಗಿರುವ ಆರೆಸ್ಸೆಸ್ ಭಾರತವನ್ನು ಶ್ರೇಣೀಕೃತ ಜಾತಿ ವ್ಯವಸ್ಥೆಯಿಂದ ಕೂಡಿದ ಹಿಂದೂರಾಷ್ಟ್ರವನ್ನಾಗಿ ಮಾರ್ಪಡಿಸಲು ಕಾರ್ಯತಂತ್ರ ರೂಪಿಸಿದೆ. ಹಿಂದೂ ರಾಷ್ಟ್ರದಲ್ಲಿ ಅಲ್ಪಸಂಖ್ಯಾತರಿಗೆ ಮತದಾನದ ಹಕ್ಕು ಸೇರಿದಂತೆ ಯಾವುದೇ ಹಕ್ಕು ಇರಬಾರದು. ಅವರು ಎರಡನೆ ದರ್ಜೆ ನಾಗರಿಕರಾಗಿ ಇರಬೇಕೆಂದು ಗೋಳ್ವಲ್ಕರ್ ಹೇಳಿದ್ದಾರೆ. ತಮ್ಮ ಗುರುಗಳ ಈ ಕಾರ್ಯಸೂಚಿಯನ್ನು ಜಾರಿಗೆ ತರಲು ಹೊರಟಿರುವ ಪ್ರಧಾನಿ ಮೋದಿ ರಾಷ್ಟ್ರಪತಿ ಮತ್ತು ರಿಸರ್ವ್ ಬ್ಯಾಂಕ್ ಗವರ್ನರ್‌ನಿಂದ ಛೀಮಾರಿ ಹಾಕಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.
ಈಗ ದೇಶದಲ್ಲಿ ನಡೆದಿರುವುದು ಕಾಂಗ್ರೆಸ್, ಬಿಜೆಪಿ ಮತ್ತು ಜನತಾದಳ ಜಗಳವಲ್ಲ. ಹಿಂದೂ ಮತ್ತು ಮುಸ್ಲಿಂ ಸಂಘರ್ಷವೂ ಅಲ್ಲ. ಸಮಾನತೆಯ ಸಂದೇಶ ನೀಡಿದ ಅಂಬೇಡ್ಕರ್ ಸಿದ್ಧಾಂತಕ್ಕೂ ಮತ್ತು ವರ್ಣಾಶ್ರಮ ವ್ಯವಸ್ಥೆ ಸ್ಥಾಪಿಸಲು ಹೊರಟ ಸಾವರ್‌ಕರ್ ಮತ್ತು ಗೋಳ್ವಲ್ಕರ್ ಸಿದ್ಧಾಂತಗಳಿಗೆ ಸಂಘರ್ಷ ನಡೆದಿದೆ. ಸ್ವಾಮಿ ವಿವೇಕಾನಂದ ಮತ್ತು ಭಗತ್‌ಸಿಂಗ್‌ರನ್ನು ಹೈಝಾಕ್ ಮಾಡಿದಂತೆ ಅಂಬೇಡ್ಕರ್ ಅವರನ್ನು ಹೈಝಾಕ್ ಮಾಡಲು ಹೋಗಿ ಸಂಘ ಪರಿವಾರ ಇಕ್ಕಟ್ಟಿಗೆ ಸಿಲುಕಿದೆ. ಅಂಬೇಡ್ಕರ್ ಬೆಂಕಿ ಇದ್ದಂತೆ. ಬೆಂಕಿಯನ್ನು ನುಂಗಲು ಹೊರಟ ಕೋಮುವಾದಿ ಪರಿವಾರವು ಸುಟ್ಟು ಬೂದಿಯಾಗುತ್ತದೆ. ಈ ದೇಶದ ಜನ ನಾರಾಯಣ ಮೂರ್ತಿಯಾಗಿರಲಿ, ರಘುರಾಮ ರಾಜನ್ ಆಗಿರಲಿ ಅವರು ಅಂಬೇಡ್ಕರ್, ಗಾಂಧಿ, ನೆಹರೂ ಮತ್ತು ಭಗತ್‌ಸಿಂಗ್ ಸಿದ್ಧಾಂತದ ಪರವಾಗಿ ನಿಲ್ಲುತ್ತಾರೆ ಹೊರತು ಸಾವರಕರ್,
ಗೋಳ್ವಲ್ಕರ್ ಮತ್ತು ಗೋಡ್ಸೆಯ ವಿದ್ವಂಸಕಾರಿ ಚಟುವಟಿಕೆಗಳಿಗೆ ಬೆಂಬಲ ಕೊಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಭಾರತದ ಬಹುಮುಖಿ ಸಮಾಜ ಈಗ ತೀವ್ರ ಬಿಕ್ಕಟ್ಟು ಎದುರಿಸುತ್ತಿದ್ದರೂ ಕೂಡ ಅದರ ಅಂತರಾಳದಲ್ಲಿ ಇರುವ ಸಹಬಾಳ್ವೆಯ ಸಮಾನತೆಯ ಆಶಯಗಳಿಂದ ಮತ್ತು ಈ ಬಿಕ್ಕಟ್ಟಿನಿಂದ ಹೊರಬಂದು ಸಮಾನತೆಯ ಬೆಳಕಿನತ್ತ ಮುನ್ನಡೆಯುವುದು ಹಗಲಿನಷ್ಟೇ ನಿಚ್ಚಳವಾಗಿದೆ.

0 comments:
Post a Comment
Click to see the code!
To insert emoticon you must added at least one space before the code.