PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ನ. ೦೬ (ಕ ವಾ)  ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾದ ಡಾ. ಶೇಖರ್ ಡಿ ಸಜ್ಜನರ್ ಅವರು ನ. ೦೭ ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ.
     ಮುಖ್ಯ ಮಾಹಿತಿ ಆಯುಕ್ತರಾದ ಡಾ. ಶೇಖರ್ ಡಿ ಸಜ್ಜನರ್ ಅವರು ನ. ೦೭ ರಂದು ಹಂಪಿ ಎಕ್ಸ್‌ಪ್ರೆಸ್ ಮೂಲಕ ಬೆಳಿಗ್ಗೆ ೭-೩೦ ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು.  ನಂತರ ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೦೧ ಗಂಟೆಯವರೆಗೆ ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ ಕುರಿತು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಅಧಿಕಾರಿಗಳಿಗೆ ಏರ್ಪಡಿಸಲಾಗಿರುವ ಮಾಹಿತಿ ಹಕ್ಕು ಕಾರ್ಯಗಾರದಲ್ಲಿ ಭಾಗವಹಿಸುವರು.  ನಂತರ ಜಿಲ್ಲಾ ಪಂಚಾಯತಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಹಕ್ಕು ಕಾಯ್ದೆ ಅನುಷ್ಠಾನ ಕುರಿತು ಪರಿಶೀಲನೆ ನಡೆಸುವರು.  ಮಧ್ಯಾಹ್ನ ೦೪ ಗಂಟೆಗೆ ಕೊಪ್ಪಳ ನಗರಸಭೆ ಕಚೇರಿಗೆ ಭೇಟಿ ನೀಡಿ ಮಾಹಿತಿ ಹಕ್ಕು ಕಾಯ್ದೆ ಅನುಷ್ಠಾನ ಕುರಿತು ಪರಿಶೀಲನೆ ನಡೆಸುವರು.  ಮುಖ್ಯ ಮಾಹಿತಿ ಆಯುಕ್ತರು ಅದೇ ದಿನ ಸಂಜೆ ೦೫ ಗಂಟೆಗೆ ಗದಗ ಜಿಲ್ಲೆಗೆ ಪ್ರಯಾಣ ಬೆಳೆಸುವರು.

Advertisement

0 comments:

Post a Comment

 
Top