ಕೊಪ್ಪಳ- ೦೪, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳರವರು ಶಿವಮೂಗ್ಗ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಬಿ.ಜೆ.ಪಿ. ಮುಖಂಡ ಎಸ್.ಎನ್.ಚನ್ನಬಸಪ್ಪ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಅವಹೇಳನಾಕಾರಿ ಮಾತನ್ನು ಹೇಳಿ ಬಿ.ಜೆ.ಪಿ. ಪಕ್ಷದ ಹೇಯ ಸಂಸ್ಕೃತಿಯನ್ನು ಬಿಂಬಿಸಿದ್ದಾನೆ. ಮುಖ್ಯಮಂತ್ರಿಗಳು ತಾಕತ್ತು ಇದ್ದರೆ ಶಿವಮೊಗ್ಗದ ಗೋಪಿ ವೃತ್ತದಲ್ಲಿ ಗೋಮಾಂಸ ಸೇವಿಸಲಿ ಅವರ ರುಂಡ ಚಂಡಾಡುತ್ತೇನೆ ಎಂದು ಹೇಳಿರುವುದು ಅವಮಾನೀಯ ಹೇಳಿಕೆ ನಾಡಿನ ಪ್ರತಿಯೊಬ್ಬರು ಇಂತಹ ಹೇಳಿಕೆಯನ್ನು ಖಂಡಿಸಿ ಇಂತವರಿಗೆ ಉಗ್ರ ಶಿಕ್ಷೆಕೊಡಿಸಬೇಕು ಆಹಾರದ ಹಕ್ಕಿನ ದೃಷ್ಟಿಯಿಂದ ಯಾರೂ ಬೇರೂಬ್ಬರಿಗೆ ಒತ್ತಾಯಮಾಡುವಂತಿಲ್ಲ. ಆಹಾರದ ದೃಷ್ಟಿಯಿಂದ ಬಿ.ಜೆ.ಪಿ.ಯು ಸಮಾಜ ಒಡೆಯುವ ಕಾರ್ಯಮಾಡುತ್ತಿದೆ. ಇಂತಹ ಕಾರ್ಯಚಟುವಟಿಕೆಗಳಿಗೆ ಕಾಂಗ್ರೆಸ್ ಪಕ್ಷವು ತೀರ್ವ ಖಂಡನೆ ಮಾಡುತ್ತದೆ. ಇಂತಹ ಗುಂಡಾ ಪ್ರವೃತ್ತಿಯನ್ನು ಬಿ.ಜೆ.ಪಿ. ನಾಯಕರು ಮುಂದಿನ ದಿನಗಳಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ನಾಡಿನ ಜನತೆ ಇವರಿಗೆ ತಕ್ಕ ಪಾಠ ಕಲಿಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳರವರು ತೀರ್ವವಾಗಿ ಖಂಡಿಸಿದರು.
Subscribe to:
Post Comments (Atom)
0 comments:
Post a Comment