PLEASE LOGIN TO KANNADANET.COM FOR REGULAR NEWS-UPDATES

ಗದಗ-26- ಸಂವಿಧಾನ ಭಾರತ ದೇಶದ ಆಡಳಿತದ ಬೀಗದ ಕೈವಾಗಿದೆ ಎಂದು ಅಖಿಲ ಕರ್ನಾಟಕ ಜನಶಕ್ತಿ ವೇದಿಕೆಯ ರಾಜ್ಯದ್ಯಕ್ಷ ಸಯ್ಯದಖಾಲೀದ ಕೊಪ್ಪಳ ಹೇಳಿದರು.
ನಗರದ ಮಹಾಲಕ್ಷ್ಮೀ ಸಂಕಿರಣದ ಅಖಿಲ ಕರ್ನಾಟಕ ಜನಶಕ್ತಿ ವೇದಿಕೆಯ ಕಾರ್ಯಾಲಯದಲ್ಲ್ಲಿ ಗುರುವಾರ ಆಯೋಜಿಸಿದ ಭಾರತ ಸಂವಿಧಾನದ ಆಚರಣೆಯ ನಿಮಿತ್ಯ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಆಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ವೇದಿಕೆಯ ಕಾರ್ಯಕರ್ತರಿಗೆ ಸಂವಿಧಾನ ಪೀಠಿಕೆಯ ವಾಚನ ಮಾಡಿಸಿ ಅವರು ಮಾತನಾಡಿದರು.
ಭಾರತ ದೇಶದಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯಿಂದ ಬಾಳಲಿ ಎಂಬ ಸದುದ್ದೇಶದಿಂದಲೇ ಸಂವಿಧಾನ ರಚಿಸಲಾಗಿದೆ. ವಿಶ್ವದಲ್ಲಿಯೇ ನಮ್ಮ ಸಂವಿದಾನ ಲಿಖಿತ ಹಾಗೂ ಬಹಳ ದೊಡ್ಡ ಸಂವಿಧಾನ ಎಂಬ ಖ್ಯಾತಿಯನ್ನು ಪಡೆದಿದೆ. ಸಂವಿಧಾನದಲ್ಲಿ ಬರುವ ಮೂಲಭೂತ ಹಕ್ಕುಗಳು, ರಾಷ್ಟ್ರೀಯ ನಿರ್ದೇಶಕ ತತ್ವಗಳು, ನಾಗರಿಕ
 ಸಂವಿಧಾನ ರಚಿಸಲು ಶ್ರಮಿಸಿದಂತಹ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಆಂಬೇಡ್ಕರ ಸೇರಿದಂತೆ ಹಲವಾರು ದೇಶಪ್ರೇಮಿಗಳನ್ನು ಇಂದು ಸ್ಮರಿಸಿಯೇ ಜೀವನ ಸಾಗಿಸಬೇಕಾಗಿದೆ. ದೇಶದಲ್ಲಿ ಸಂವಿಧಾನ ಅಸಿತ್ವದಲ್ಲಿರುವುದರಿಂಲೇ ಜಾತಿ, ಮತ, ಪಂಥ, ಮೇಲು ಕೀಳು, ಬಡವ ಶ್ರೀಮಂತ ಎನ್ನದೇ ಸರ್ವ ಸಮುದಾಯದವರು ಸಮಾನತೆಯಿಂದ ಬಾಳ್ವೆ ನಡೆಸಲು ಅನುಕೂಲವಾಗಿದೆ ಎಂದು ಅಖಿಲ ಕರ್ನಾಟಕ ಜನಶಕ್ತಿ ವೇದಿಕೆಯ ರಾಜ್ಯದ್ಯಕ್ಷ ಸಯ್ಯದಖಾಲೀದ ಕೊಪ್ಪಳ ಹೇಳಿದರು. ಈ ಸಂದರ್ಭದಲ್ಲಿ ಎನ್ ಕೆ ಕೊರ್ಲಹಳಿ, ಪೂಜಾ ಬೇವೂರ, ಎಮ್ ಆರ್ ನದಾಫ, ಖಾಜಾಹುಸೇನ ಸೈಯದ, ಸಮೀರ ಮುಳಗುಂದ, ದಾವಲಸಾಬ ಕಂಪ್ಲಿ, ರವಿ ವಗ್ಗನವರ, ಮಹಾಂತೇಶ ಲಮಾಣಿ, ಅನಿಲ ಸುಣಗಾರ, ಸುಮಾ ಶಿಂದೆ, ಲಲಿತಾ ಹಡಪದ, ಕಲಾವತಿ ಬಾಡಿಗೆ, ಶಕುಂತಲಾ ಗಂಗಾವತಿ, ರಾಜು ರೊಟ್ಟಿ, ಚಾಂದಸಾ ಜಕ್ಕಣಿ, ಸರೋಜಾ ಕೊಲ್ಲಾಪುರ, ಮಹೇಶ ನಾಯಕ, ಸಂತೋಷ ದೋಣಿ ಸೇರಿದಂತೆ ಹಲವರು ಹಾಜರಿದ್ದರು.
ರ ಕರ್ತವ್ಯಗಳು,ಶಾಸಕಾಂಗ,ಕಾರ್ಯಾಂಗ, ನ್ಯಾಯಾಂಗ ಸೇರಿ ಅನೇಕ ಅಂಶಗಳ ಸೇರ್ಪಡೆಯಾಗಿರುವುದರಿಂದ ಮಾನವ ಇವತ್ತು ಸ್ವತಂತ್ರ ಹಾಗೂ ಸಮಾನತೆಯಿಂದ ಸಹಭಾಳ್ವೆ ನಡೆಸಲು ಅನುಕೂಲವಾಗಿದೆ. ನಮ್ಮ ಸಂವಿಧಾನ ಲಿಖಿತವಾಗಿರುವುದರಿಂದ ಯಾವುದೇ ತಿದ್ದುಪಡಿ ಮಾಡಲು ೨/೩ ಸದಸ್ಯರ ಬಹುಮತದ ಅವಶ್ಯಕತೆ ಇದೆ. ಭಾರತದ ಎಲ್ಲ ನಾಗರಿಕರು ಸಂವಿಧಾನದ ಬಗ್ಗೆ ತಿಳಿದುಕೊಳ್ಳುವ ಅನಿವಾರ್ಯತೆ ಇದೆ ಎಂದರು.
26 Nov 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top