PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ -16 - ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನಿಂದ ನಾಡಿನ ಚೈತನ್ಯಶೀಲ ಸಂಶೋಧಕರು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ಪ್ರಸಿದ್ದ ವಿದ್ವಾಂಸರಾಗಿದ್ದ ಡಾ. ಎಂ.ಎಂ ಕಲಬುರ್ಗಿ ಅವರನ್ನು ಕುರಿತು ಸಂಸ್ಮರಣ ಗ್ರಂಥವನ್ನು ಹೊರತರಲು ನಿರ್ಧರಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೇವಾಡದಲ್ಲಿ ಜನಿಸಿದ ಡಾ. ಎಂ.ಎಂ ಕಲಬುರ್ಗಿ ಅವರು ನಾಡೇ ನಿಬ್ಬೆರಗಾಗುವಂತಹ ಸಾಹಿತಿಯಾದರು. ಪ್ರಸಿದ್ದ ವಿದ್ವಾಂಸರಲ್ಲಿ ಒಬ್ಬರಾಗಿದ್ದ ಇವರು ಶಾಸನಶಾಸ್ತ್ರ, ಸಾಹಿತ್ಯ, ಚರಿತ್ರೆ, ಛಂದಸ್ಸು, ವಾಸ್ತುಶಿಲ್ಪ, ಗ್ರಂಥ ಸಂಪಾದsನೆ, ಹಸ್ತಪ್ರತಿಶಾಸ್ತ್ರ, ಜಾನಪದ ಸ್ಥಳನಾಮಗಳ ಅಧ್ಯಯನ, ವಚನ ಸಾಹಿತ್ಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕೃಷಿಗೈದು ಅಪಾರ ಶಿಷ್ಯಬಳಗವನ್ನು ಹೊಂದಿದ್ದರು.
    ಡಾ. ಎಂ.ಎಂ ಕಲಬುರ್ಗಿಯವರ ಒಡನಾಡಿಗಳು, ಅವರ ಶಿಷ್ಯರು ಹಾಗೂ ನಾಡಿನ ಸಾಹಿತಿಗಳು ಡಾ. ಎಂ.ಎಂ ಕಲಬುರ್ಗಿಯವರನ್ನು ಕುರಿತು ಲೇಖನ, ಕವನಗಳನ್ನು ಅಕ್ಟೋಬರ ೧೦ ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. ಲೇಖನ ಕಳುಹಿಸುವ ವಿಳಾಸ: ಹನುಮಂತಪ್ಪ ಅಂಡಗಿ ಚಿಲವಾಡಗಿ, ಅಧ್ಯಕ್ಷರು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಅಂಚೆ ಪೆಟ್ಟಿಗೆ ಸಂಖ್ಯೆ- ೩೦ ಕೊಪ್ಪಳ-೫೮೩೨೩೧ ಸನಿಹವಾಣಿ: ೯೦೦೮೯೪೪೨೯೦, ೯೦೦೮೭೬೦೪೦೧


Advertisement

0 comments:

Post a Comment

 
Top