PLEASE LOGIN TO KANNADANET.COM FOR REGULAR NEWS-UPDATES

ಯಲಬುರ್ಗಾ - ಅರಣ್ಯ ನಾಶ ,ಕೈಗಾರಿಕೆ ,ವಾಹನಗಳಿಂದ ಆಗುತ್ತಿರುವ ವಾಯುಮಾಲಿನ್ಯದಿಂದಾಗಿ ಪ್ರಕೃತಿಯಲ್ಲಿ ಅಸಮತೋಲನವಾಗುತ್ತಿದೆ. ಈ ನೆಲ ,ಜಲ ಭೂಮಿ ನಮ್ಮದು ನಾವು ಅದನ್ನು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ಶ್ರೀ ಧರಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮಿಗಳು ಹೇಳಿದರು.
         ಅವರು ತಪಸ್ಸು ಶಿಕ್ಷಣ ಹಾಗೂ ಗ್ರಾಮಿಣಾಭಿವೃದ್ದಿ ಸೇವಾ ಸಂಸ್ಥೆ ವತಿಯಿಂದ ಕರಮುಡಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಲು ಕಾರಣ ಅರಣ್ಯಗಳ  ನಾಶ  .ಪ್ರತಿಯೋಬ್ಬರು ಗಿಡಗಳನ್ನು ಬೆಳೆಸುವುದರಿಂದ ಪರಿಸರವನ್ನು ಕಾಪಾಡಬಹುದು ಈ ದಿಸೆಯಲ್ಲಿ ತಪಸ್ಸು ಶಿಕ್ಷಣ ಹಾಗೂ ಗ್ರಾಮಿಣಾಭಿವೃದ್ದಿ ಸೇವಾ ಸಂಸ್ಥೆಯವರು  ಗಿಡಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು .
         ತಪಸ್ಸು ಶಿಕ್ಷಣ ಹಾಗೂ ಗ್ರಾಮಿಣಾಭಿವೃದ್ದಿ ಸೇವಾ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ .ಎಮ್.ಹಡಪದ ಮಾತನಾಡಿ ಉತ್ತಮ ಆರೋಗ್ಯಕ್ಕೆ ಸಸ್ಯಗಳು ಬಹಳಷ್ಟು ಸಹಕಾರಿಯಾಗಿವೆ .ಆರೋಗ್ಯವ
        ಕಾರ್ಯಕ್ರಮದ ಅದ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷ ಮುತ್ತಣ್ಣ ಮಲ್ಲಿಗವಾಡ ವಹಿಸಿದ್ದರು. ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಶರಣಗೌಡ ಪೋಲಿಸಪಾಟೀಲ, ಪಿ.ಡಿ.ಒ. ಬಸವರಾಜ ಬಡಿಗೇರ ಸ.ಪ್ರೌ.ಶಾಲೆ ಕರಮುಡಿ ಮುಖ್ಯೋಪಾದ್ಯಾಯ ವಿಜಯಕುಮಾರ ರಂಗ್ರೇಜಿ ಎಸ್.ಡಿ.ಎಮ್.ಸಿ ಸದಸ್ಯರಾದ ,ಪರಸಪ್ಪ ಲಮಾಣಿ ,ಯಲ್ಲಪ್ಪ ಮುಗುಳಿ ,ಗ್ರಾ.ಪಂ. ಸದಸ್ಯರಾದ ಶರಣಪ್ಪ ಗಾಣಿಗೇರ,ಮಂಜುನಾಥ ಕುಕನೂರು,ಯಮನೂರಪ್ಪ ಹೊಸಮನಿ , ಉಪಸ್ಥಿತರಿದ್ದರು. ಖಾಜಾವಲಿ ಜರಕುಂಟಿ ಸ್ವಾಗತಿಸಿದರು. ಬಸವರಾಜ ಕೊಂಡಗುರಿ ಶಿಕ್ಷಕರು ಸ.ಪ್ರೌ.ಶಾಲೆ ಕರಮುಡಿ ನಿರೂಪಿಸಿದರು. ವೆಂಕಟೇಶ ಪಾಟೀಲ ಶಿಕ್ಷಕರು ವಂದಿಸಿದರು.

ನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಮನೆಗೊಂದಾದರು ಗಿಡವನ್ನು ನೆಡಬೇಕು ಹಾಗೂ ಪರಿಸರವನ್ನು ಕಾಪಾಡಿಕೊಳ್ಳಬೇಕು ಪರಿಸರವನ್ನು ರಕ್ಷಣೆ ಮಾಡಬೇಕು ಅದು ನಮ್ಮೆಲ್ಲರ ಹೊಣೆ ಎಂದು ಹೇಳಿದರು.

Advertisement

0 comments:

Post a Comment

 
Top