PLEASE LOGIN TO KANNADANET.COM FOR REGULAR NEWS-UPDATES

ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ೬೮ ನೇ ಹೈದ್ರಬಾದ- ಕರ್ನಾಟಕ  ವಿಮೋಚನಾ ದಿನಾಚರಣೆ ಆಚರಿಸಲಾಯಿತು ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿ ಮಾತನಾಡಿದ ಸಂಸ್ಥೆಯ ಉಪನ್ಯಾಸಕರಾದ ಶ್ರೀಜಿ.ಎಸ್.ಸೊಪ್ಪಿಮಠ ಮಾತನಾಡಿ ಹೈದ್ರಬಾದ- ಕರ್ನಾಟಕದ ಜನಗಳಾದ ನಮಗೆ ಇನ್ನೂ ಹಿಂದುಳಿದವರೆಂಬ ಮನೋಭಾವನೆ ಇದೆ ಆ ಮನೋಭಾವನೆಯನ್ನು ಒಡೆದು ಹಾಕಿ ಇತರ ಪ್ರದೇಶಗಳಂತೆ ನಮ್ಮ ಪ್ರದೇಶವು ಅಭಿವೃದ್ದಿಯಾಗಲಿ ಎಂದು ಹೇಳ್ಳುತ್ತಾ ಪ್ರಶಿಕ್ಷಣಾರ್ಥಿಗಳಾದ ನೀವು ೩೭೧ ಕಲಂನ್ನು ನೈಜ ಅರ್ಥದಲ್ಲಿ ಬಳಕೆ ಮಾಡಿಕೊಂಡು ಉದ್ಯೋಗದಲ್ಲಿ ಹೆಚ್ಚೇಚ್ಚು ನೇಮಕವಾಗಿರೆಂದು ಕರೆನೀಡಿದರು ಸಮಾರಂಭದ ಅದ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಪ್ರಕಾಶ.ಕೆ.ಬಡಿಗೇರ ಮಾತನಾಡಿ  ಈ ಭಾಗದ ಜನರಲ್ಲಿ ಸಂಘಟನೆ ಪ್ರ

ವೃತ್ತಿಯಿಂದ ಹೋರಾಟಮಾಡಿ ತಮಗೆ ಇರುವ ಅವಕಾಶಗಳನ್ನು ಪಡೆದು ಕೊಳ್ಳುವಂತಹ ಅವಶ್ಯಕತೆ ಇದೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಾದ ಕರಿಯಪ್ಪ. ಪಕೀರಪ್ಪ.ಸ್ವಾತಿ. ಮರೇಗೌಡ. ಗೀತಾ.ಹೇಮಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯಉಪನ್ಯಾಸಕರುಗಳಾದ ಆನಂದರಾವ್‌ದೇಸಾಯಿ. ಎಲ್.ಎಸ್.ಹೊಸಮನಿ. ವಿ.ಆರ್.ಪಾಟೀಲ್.ಎ.ಎನ್.ತಳಕಲ್. ಎಸ್.ಎಸ್.ವಿರನಗೌಡ್ರ. ಎಸ್.ಎಸ್.ಅರಳಲೇಮಠ. ಸುಭಾಷಚಂದ್ರ. ಡಿ.ಎಮ್.ಬಡಿಗೇರ. ಎಮ್.ವಿ.ಕಾತರಕಿ. ಎಸ್.ಜಿ.ಬೆಣ್ಣಿ.ಡಿ. ಹೊಸಮನಿ. ಹಾಗೂ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮವನ್ನು ರಮೇಶ ನಿರೂಪಿಸಿದರು ಶಂಕರ ಸ್ವಾಗತಿಸಿದರು.ಶಿಲ್ಪಾ ಹಿರೇಮಠ ವಂದಿಸಿದರು

Advertisement

0 comments:

Post a Comment

 
Top