ಕೊಪ್ಪಳ ಸೆ. ೨೯
(ಕ ವಾ)ಕೊಪ್ಪಳ ಜಿಲ್ಲೆಯಲ್ಲಿ ರೈತರು ಕಡಲೆ ಬೆಳೆ ಬಿತ್ತನೆಗೆ
ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದು, ಕಡಲೆ ಬೆಳೆಯಲ್ಲಿ ಬೀಜೋಪಚಾರದ ಮಹತ್ವ ಕುರಿತಂತೆ
ಕೊಪ್ಪಳದ ಕೃಷಿ ವಿಸ್ತರಣಾ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.
ಕಡಲೆ ಬಿತ್ತನೆ ಬೀಜಗಳನ್ನು ಶೇ. ೨ ರ ಸುಣ್ಣದ ತಿಳಿ ನೀರಿನಲ್ಲಿ (ಕ್ಯಾಲ್ಸಿಯಂ ಕ್ಲೋರೈಡ್) ೩೦ ನಿಮಿಷಗಳವರೆಗೆ ನೆನೆಸಿ ನಂತರ ನೆರಳಿನಲ್ಲಿ ಒಣಗಿಸಬೇಕು. ಪ್ರತೀ ಎಕರೆ ಬೀಜಕ್ಕೆ ೫೦೦ ಗ್ರಾಂ ರೈಜೋಬಿಯಂ, ೫೦೦ ಗ್ರಾಂ ರಂಜಕ ಕರಗಿಸುವ ಅಣುಜೀವಿ ಗೊಬ್ಬರ ಮತ್ತು ೮೦-೧೦೦ ಗ್ರಾಂ ಟ್ರೈಕೊಡರ್ಮದಿಂದ ಬೀಜೋಪಚಾರ ಮಾಡಬೇಕು. ಪ್ರತೀ ಕೆ.ಜಿ ಬೀಜಕ್ಕೆ ೨ ಗ್ರಾಂ ಕ್ಯಾಪ್ಟಾನ್ ೮೦ ಡಬ್ಲ್ಯೂ.ಪಿ ಅಥವಾ ೨ ಗ್ರಾಂ ಥೈರಮ್ ೭೫ ಡಬ್ಲ್ಯೂ.ಎಸ್ ಅಥವಾ ಮೆಂಕೋಜೆಬ್ ೭೫ ಡಬ್ಲ್ಯೂ.ಪಿ ಅಥವಾ ನಿಂದ ಬೀಜೋಪಚಾರ ಮಾಡುವುದರಿಂದ ರೋಗಗಳನ್ನು ತಡೆಗಟ್ಟಬಹುದು. ನೆಟೆ ರೋಗ/ಸಿಡಿ ರೋಗ/ಸೊರಗು ರೋಗ ಬಾಧೆ ಇರುವ ಪ್ರದೇಶಗಳಲ್ಲಿ ೮೦೦ ಗ್ರಾಂ ಟ್ರೈಕೊಡರ್ಮವನ್ನು ೧೦೦ ಕಿ.ಗ್ರಾಂ ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರ ಮತ್ತು ೨೦ ಕಿ.ಗ್ರಾಂ ಬೇವಿನ ಬೀಜದ ಪುಡಿಯಲ್ಲಿ ಮಿಶ್ರಣ ಮಾಡಿ ಶೇ. ೫೦ ರಷ್ಟು ತೇವಾಂಶ ಇರುವಂತೆ ತೇವಗೊಳಿಸಿ, ೭ ದಿನಗಳವರೆಗೆ ಪ್ಲಾಸ್ಟಿಕ್ ಹಾಳೆ ಹೊದಿಸಿ ನಂತರ ಬಿತ್ತುವ ಸಮಯದಲ್ಲಿ ಮಣ್ಣಿಗೆ ಸೇರಿಸಬೇಕು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಶಿಲೀಂದ್ರನಾಶಕದ (ರಸಾಯನಿಕ) ಜೊತೆ ಟ್ರೈಕೋಡರ್ಮವನ್ನು ಮಿಶ್ರಣ ಮಾಡಿ ಬಳಸಬಾರದು.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಷಯತಜ್ಞ ರೋಹಿತ್.ಕೆ.ಎ. (೯೮೪೫೧೯೪೩೨೮) ಮತ್ತು ಯುಸುಫ್‌ಅಲಿ ನಿಂಬರಗಿ (೭೮೯೯೬೦೦೧೩೪) ಇವರನ್ನು ಸಂಪರ್ಕಿಸಬೇಕೆಂದು ವಿಸ್ತರಣಾ ಮಂದಾಳು ಡಾ.ಎಂ.ಬಿ. ಪಾಟೀಲ (೯೪೮೦೬೯೬೩೧೯) ತಿಳಿಸಿದ್ದಾರೆ.

0 comments:
Post a Comment
Click to see the code!
To insert emoticon you must added at least one space before the code.