PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ- ೨೭ ಕ್ಷೇತ್ರದ ಗಬ್ಬೂರು, ಗುಡದಳ್ಳಿ, ಲಿಂಗದಹಳ್ಳಿ, ಶಹಪುರ, ಹಾಗೂ ಅಗಳಕೇರಿ ಗ್ರಾಮಗಳಲ್ಲಿ ರೂ.೪೦ ಲಕ್ಷದ ಸಿಸಿ ರಸ್ತೆ ಭೂಮಿ ಪೂಜೆ ಹಾಗೂ ಜಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಗ್ರಾಮಗಳ ಜನತೆ ವ್ಯಯಕ್ತಿಕ ಶೌಚಾಲಯಗಳನ್ನು ಕಡ್ಡಾಯವಾಗಿ ನಿರ್ಮಾಣ ಮಾಡಿಕೊಳ್ಳಬೇಕು. ಸಿಸಿ ರಸ್ತೆಗಳ ಮೇಲೆ ತಿಪ್ಪೆಯನ್ನು ಹಾಕುವುದು, ರಸ್ತೆ ಬದಿಯಲ್ಲಿ ಚರಂಡಿಯ ಕೂಲಷಿತ ನೀರು ಬಿಡುವುದರಿಂದ ಗ್ರಾಮಗಳ ನೈರ್ಮಲ್ಯ ಹಾಳಾಗಿ ಗ್ರಾಮಗಳಲ್ಲಿ ಡೆಂಗು, ಮಲೇರಿಯಾ, ಕಾಲರಾಗಳಂತ ರೋಗಗಳು ಉಲ್ಬಣಗೊಳ್ಳುತ್ತವೆ. ಆದ್ದರಿಂದ ಪ್ರತಿ ಗ್ರಾಮಸ್ಥರು ಊರಿನ ಸ್ವಚ್ಛತೆ ಬಗ್ಗೆ ಕಾಳಜಿವಹಿಸಿದಾಗ ಮಾತ್ರ ಆರೋಗ್ಯಕರ ಗ್ರಾಮಗಳು ನಿರ್ಮಾಣ ವಾಗುತ್ತವೆ. ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ನೀಡುವ ಅನುದಾನ ಉಪಯೋಗಕ್ಕೆ ಬರುತ್ತದೆ. ಪ್ರತಿಯೊಬ್ಬರು ತಮ್ಮ ಆರೋಗ್ಯಕಡೆ ಹೆಚ್ಚಿನ ಮುತುವರ್ಜಿ ವಹಿಸಿ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಬೇಕೆಂದು ಕರೆ ನೀಡಿದರು. ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಮಕ್ಕಳ ಪೌಶ್ಟಿಕತೆಗಾಗಿಯೇ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು ಈ ಭಾಗದ ಮಕ್ಕಳಿಗೆ ಹೆಚ್ಚು ಅನುಕೂಲವಾಗಿದೆ. ಮಳೆ ಅಭಾವದಿಂದ ನಲಗಿರುವ ನಮ್ಮ ಕೊಪ್ಪಳ ಕ್ಷೇತ್ರ ಅನ್ನಭಾಗ್ಯ ಯೋಜನೆಯು ಬಡ ಜನರಿಗೆ ಹೆಚ್ಚು ಸಹಕಾರಿಯಾಗಿದೆ. ಕ್ಷೇತ್ರದಲ್ಲಿ ಎಲ್ಲಿಯೋ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ-ಹಾಲಿ ಸದಸ್ಯ ಟಿ.ಜನಾರ್ಧನ ಹುಲಗಿ, ಕೆ.ರಮೇಶ ಹಿಟ್ನಾಳ, ದೇವಣ್ಣ ಮೇಕಾಳಿ, ಗ್ರಾ.ಪಂ. ಅಧ್ಯಕ್ಷ ಆರ್.ಡಿ.ಮುಲ್ಲಾ, ಹರ್ಲಾಪುರ ಗ್ರಾ.ಪಂ.ಅಧ್ಯಕ್ಷೆ ರೇಣುಕಾ ನಾಯಕ್, ವಿಶ್ವನಾಥ ರಾಜು, ಮರ್ದಾನಪ್ಪ ಅಗಳಕೇರಿ, ಚನ್ನಕೃಷ್ಣ, ವೀರಭದ್ರಯ್ಯ ಸ್ವಾಮಿ, ವೆಂಕಟೇಶ ಬೂವಿ, ಹುಲಗಪ್ಪ ಗಡಾದ, ಮಲ್ಲಿಕಾರ್ಜುನ, ನಾಗರಾಜ ಪಟುವಾರಿ, ಲಿಂಗರಾಜ ಚಳಗೇರಿ, ಮಹಮ್ಮದಸಾಬ್,  ಇನ್ನೂ ಅನೇಕ ಗ್ರಾಮಸ್ಥರು ಹಾಗೂ ಗುರುಹಿರಿಯರು, ಪಕ್ಷದ ಮುಖಂಡರು, ವಕ್ತಾರ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.

27 Aug 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top