ಕೊಪ್ಪಳ:೦೪, ಹಿರೇಸಿಂದೋಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ಹಿರೇಸಿಂದೋಗಿ, ದದೇಗಲ್, ಹಲಗೇರಿ, ಕೋಳೂರು, ಕಾಟ್ರಳ್ಳಿ, ಚಿಕ್ಕಸಿಂದೋಗಿ, ಗುನ್ನಳ್ಳಿ ಹಾಗೂ ಮಂಗಳಾಪುರ ಗ್ರಾಮಗಳಲ್ಲಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಪ್ಪಳದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ವಾಡಿಕೆಯಂತೆ ಈಬಾರಿ ಕ್ಷೇತ್ರದಲ್ಲಿ ಶೇ-೭೦ರಷ್ಟು ಮಳೆಪ್ರಮಾಣ ಕಡಿಮೆಯಾಗಿದೆ ಆದ್ದರಿಂದ ಮಳೆಆಶ್ರಿತ ಪ್ರದೇಶದಲ್ಲಿ ತೀರ್ವ ಬರಗಾಲ ಉಂಟಾಗಿದ್ದು, ದನಕರುಗಳಿಗೆ ನೀರುಮೇವು ಒದಗಿಸಲು ಅಳವಂಡಿ-ಹಿರೇಸಿಂದೋಗಿ, ಮೋರನಾಳ ಗ್ರಾಮದಲ್ಲಿ ಇನ್ನೂ ೨-೩ ದಿನಗಳಲ್ಲಿ ಗೋಶಾಲೆ ಪ್ರಾರಂಭಿಸಲು ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಅಧಿಕಾರಿಗಳಿಗೆ ಬರದ ಸಮೀಕ್ಷೆಮಾಡಲು ನಿರ್ದೇಶನ ನೀಡಲಾಗಿದೆ. ೮೩ ಲಕ್ಷ ಬೆಳೆ ಪರಿಹಾರ ಮಂಜೂರಾಗಿದ್ದು, ಆನ್ ಲೈನ್ ಮೂಲಕ ರೈತರ ಖಾತೆಗೆ ಜಮಾ ಮಾಡಲು ಪ್ರಾರಂಭಿಸಲಾಗಿದೆ. ನವಲಕಲ್ ಏತ ನೀರಾವರಿ ಯೋಜನೆ ಹಾಗೂ ಬೆಟಗೇರಿ ಮತ್ತು ಅಳವಂಡಿ ಏತ ನೀರಾವರಿ ಯೋಜನೆಗಳನ್ನು ಶೀಘ್ರವೇ ಪೂರ್ಣಗೊಳಿಸಿ ಈ ಭಾಗದ ಜನತೆ ನೀರಿನ ಭವಣೆ ತಪ್ಪಿಸಲು ಕೃಷಿ ಆಧಾರಿತ ಭೂಮಿಗೆ ನೀರು ಒದಗಿಸಲು ಶ್ರಮಿಸುತ್ತೇನೆ ಪ್ರತಿ ಗ್ರಾಮಗಳಿಗೂ ಗುಣಮಟ್ಟದ ಸಿಸಿ ರಸ್ತೆ ಚರಂಡಿ, ಶುದ್ಧ ಕುಡಿಯುವ ನೀರಿನ ಘಟಕಗಳು, ಶಾಲಾಕೊಠಡಿಗಳ ಕಾಮಗಾರಿಗಳು ತ್ವರಿತ ಗತಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿ.ಪಂ. ಅದ್ಯಕ್ಷರಾದ ಅಮರೇಶ ಕುಳಗಿ, ತಾ.ಪಂ. ಅಧ್ಯಕ್ಷರಾದ ಶ್ರೀಮತಿ ಭಾನುಬೇಗಂ, ಗ್ರಾಮ.ಪಂ. ಅದ್ಯಕ್ಷರಾದ ಶ್ರೀಮತಿ ಮಂಜಮ್ಮ ಹೂಗಾರ, ಹೆಚ್.ಎಲ್. ಹಿರೇಗೌಡ್ರು, ಗುರುಮೂರ್ತಿಸ್ವಾಮಿ ಅಳವಂಡಿ, ಎ.ಪಿ.ಎಮ್.ಸಿ ಅಧ್ಯಕ್ಷರಾದ ಶಿವಲಿಂಗಪ್ಪ ಹಿಟ್ನಾಳ, ಈಶಪ್ಪ ಮಾದಿನೂರು, ಪ್ರಸನ್ನ ಗಡಾದ, ಕೇಶವರೆಡ್ಡಿ, ಗಾಳೆಪ್ಪ ಪೂಜಾರ, ಮಾಹಂತೇಶ ಮೈನಹಳ್ಳಿ, ಮುತ್ತುರಾಜ ಕುಷ್ಟಗಿ, ನಾಗರಾಜ ಚಳ್ಳೂಳ್ಳಿ, ಯಂಕಣ್ಣ ಕೊಳ್ಳಿ, ಶಿವಾನಂದ ಹೂದ್ಲೂರು, ವಿವಿಧ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರು, ಕೃಷ್ಣ ಗಲಿಬಿ ಕಾರ್ಯಕ್ರಮ ನಿರೂಪಿಸಿ ಕೊನೆಗೆ ವಂದಿಸಿದರೆಂದು ವಕ್ತಾರ ಅಕ್ಬರ ಪಾಷಾ ಪಲ್ಟನ ತಿಳಿಸಿದರು.
Home
»
Koppal News
»
koppal organisations
»
news
» ಶೀಘ್ರವೇ ವಿವಿಧ ಗ್ರಾಮಗಳಲ್ಲಿ ಗೋಶಾಲೆ ಪ್ರಾರಂಭ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ.
Subscribe to:
Post Comments (Atom)

0 comments:
Post a Comment