ಕೊಪ್ಪಳ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಗಳು ಮೇ.೧೫ ರಿಂದ ಆರಂಭಗೊಂಡಿದ್ದು, ಜಿಲ್ಲಾದ್ಯಂತ ಮೇ.೧೫ ರಂದು ನಡೆದ ಗಣಿತ ಪರೀಕ್ಷೆಗೆ ದಾಖಲಾಗಿದ್ದ ಒಟ್ಟು ೩೪೫೩ ವಿದ್ಯಾರ್ಥಿಗಳ ಪೈಕಿ, ೩೨೩೧ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಒಟ್ಟು ೨೨೨ ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ ಮತ್ತು ಯಾವುದೇ ಡಿಬಾರ್ ಪ್ರಕರಣಗಳು ದಾಖಲಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಮಸುಂದರ ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಗಣಿತ ವಿಷಯಕ್ಕೆ ಬಾಲಕರು-೨೦೯೯, ಬಾಲಕಿಯರು- ೧೩೫೪, ಸೇರಿದಂತೆ ಒಟ್ಟು ೩೪೫೩ ವಿದ್ಯಾರ್ಥಿಗಳು ದಾಖಲಾಗಿದ್ದರು. ಈ ಪೈಕಿ ಬಾಲಕರು- ೧೯೬೪, ಬಾಲಕಿಯರು- ೧೨೬೭ ಸೇರಿದಂತೆ ಒಟ್ಟು ೩೨೩೧ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೧೩೫-ಬಾಲಕರು, ೮೭- ಬಾಲಕಿಯರು ಗೈರು ಹಾಜರಾಗಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ ೮೧, ಗಂಗಾವತಿ- ೮೦, ಕುಷ್ಟಗಿ-೨೫ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೩೬, ಒಟ್ಟು ೨೨೨ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ .
0 comments:
Post a Comment
Click to see the code!
To insert emoticon you must added at least one space before the code.