PLEASE LOGIN TO KANNADANET.COM FOR REGULAR NEWS-UPDATES



ಹೊಸಪೇಟೆ: ಸಿದ್ಧರಾಮಯ್ಯ ಅವರ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಗ್ರಾಮ ಪಂಚಾಯ್ತಿ ಚುನಾವಣೆ ಎದುರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ನಗರದಲ್ಲಿ ಸೋಮವಾರ  ಕಾಂಗ್ರೆಸ್ ಪಕ್ಷದ ಸಾಧನಾ ಸಮಾವೇಶ ಹಾಗೂ ಗ್ರಾಮ ಪಂಚಾಯ್ತಿ ಚುನಾವಣೆಯ ಬಗ್ಗೆ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ಅಭಿವೃದ್ಧಿಯ ಸಾಧನೆಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಬೇಕೆಂದರು. ಇದು ಪಕ್ಷದ ವೇದಿಕೆಯಲ್ಲ, ಇಲ್ಲಿ ಭಿನ್ನಾಭಿಪ್ರಾಯ ವ್ಯಕ್ತ ಪಡಿಸುವುದು ಸರಿಯಾದ ಕ್ರಮವಲ್ಲ ಎಂದ ಸಚಿವರು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರಕ್ಕೆ ೨ ವರ್ಷಗಳು ಪೂರ್ಣಗೊಂಡಿದ್ದು, ಸರ್ಕಾರದ ಸಾಧನೆಯನ್ನು ಜನಸಾಮಾನ್ಯರಿಗೆ ತಿಳಿಸುವ ಹಿನ್ನಲೆಯಲ್ಲಿ ಇದೇ ಮೇ.೧೬ರಂದು ದಾವಣಗೆರೆಯಲ್ಲಿ ರಾಜ್ಯಮಟ್ಟದ ಸಮಾವೇಶವನ್ನು ಯಶಸ್ವಿಗೊಳಿಸುವತ್ತ ಎಲ್ಲರೂ ಶ್ರಮ ವಹಿಸಬೇಕೆಂದರು. ಮಾಜಿ ಸಚಿವ ಎಂ.ದಿವಾಕರ್ ಬಾಬು ಮಾತನಾಡಿ ಯಾರು ಪಕ್ಷಕ್ಕಿಂತ ದೊಡ್ಡವರಲ್ಲ, ಪಕ್ಷದ ಸಾಧನೆಯನ್ನು ಜನರ ಮುಂದೆ ಕೊಂಡೊಯ್ಯುದು, ಪಕ್ಷವನ್ನು ಬಲಪಡಿಸಿ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಸಬೇಕಾಗಿದೆ ಎಂದರು.ಬಳ್ಳಾರಿ ಶಾಸಕ ಅನೀಲ್ ಹೆಚ್. ಲಾಡ್ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಲು ಸಾಕಷ್ಟು ಶ್ರಮಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾದಯಾತ್ರೆ ಮೂಲಕ ಜಿಲ್ಲೆಯ ವಾತಾವರಣವನ್ನು ಬದಲಾವಣೆ ಮಾಡಿದ್ದು, ಆದರೆ ಇಂದು ಸರ್ಕಾರದ ಸಾಧನೆಗಳು ತಿಳಿಸುವಂತಹ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆಯುತ್ತಿಲ್ಲ,ಇದಕ್ಕೆ ಉದಾಹರಣೆ ಎಂದರೆ, ಇಂದಿನ ಸಭೆಗೆ ನನ್ನನ್ನೂ ಕೂಡ ಆಹ್ವಾನಿಸಿಲ್ಲ ಎಂದು ಟೀಕಿಸಿದರು. ಸಂಡೂರು ಶಾಸಕ ಇ. ತುಕಾರಾಂ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುಜರಾತಿನ ಅಭಿವೃದ್ದಿಯ ಮಾದರಿಯನ್ನು ಇಟ್ಟುಕೊಂಡು ಚುನಾವಣೆ ನಡೆಸಿದಂತೆ ಮುಂದಿನ ಚುನಾವಣೆಗಳಲ್ಲಿ ಕರ್ನಾಟಕದ  ಅಭಿವೃದ್ದಿಯ ಸಾಧನೆಯ ಮಾದರಿಯನ್ನು ಇಟ್ಟುಕೊಂಡು ನಡೆಸುವಂತೆ ಕಾರ್ಯಕ್ರಮವನ್ನು ಸಿದ್ದರಾಮಯ್ಯನವರು ರಾಜ್ಯಕ್ಕೆ ನೀಡುತ್ತಿದ್ದಾರೆ ಎಂದರು. 
ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ ವಂದಿಸಿದರು. ಗುಜ್ಜಲ್ ರಘು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.  ವೇದಿಕೆಯಲ್ಲಿ ಶಾಸಕ ಬಿ.ನಾಗರಾಜ್, ಮಾಜಿ ಶಾಸಕರಾದ ಗುಜ್ಜಲ್ ಜಯಲಕ್ಷ್ಮೀ, ರತನ್ ಸಿಂಗ್, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಎನ್.ಎಂ.ನಭಿ, ಬಳ್ಳಾರಿ ಮೇಯರ್ ನಾಗಮ್ಮ, ನಗರಸಭೆ ಅಧಕ್ಷೆ ಶ್ರೀಮತಿ ಕಣ್ಣಿ ಉಮಾದೇವಿ  ಮುಖಂಡರಾದ ಜಿ.ಕೆ.ಹನುಮಂತಪ್ಪ, ಹೆಗ್ಡಾಳ್ ರಾಮಣ್ಣ, ಯು.ಭೂಪತಿ, ಕೆ.ಎಂ. ಹಾಲಪ್ಪ, ತಾರಿಹಳ್ಳಿ ಶಿವಮೂರ್ತಿ, ಡಿ.ವೆಂಕಟರಮಣ, ದೀಪಕ್ ಕುಮಾರ್ ಸಿಂಗ್, ಸೇರಿದಂತೆ ಇತರರು ಹಾಜರಿದ್ದರು. 

13 May 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top