ಬೆಂಗಳೂರು, ಫೆಬ್ರವರಿ : ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ 2012 ರ ಮಾರ್ಚ್ 2 ರಂದು ನಡೆದ ಗಲಭೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನೇಮಿಸಿದ ನ್ಯಾ. ಆರ್. ಜಿ. ವೈದ್ಯನಾಥ ಏಕ ಸದಸ್ಯ ಆಯೋಗವು ಇಂದು ಮುಖ್ಯಮಂತ್ರಿಗಳಿಗೆ ತನ್ನ ವರದಿ ಸಲ್ಲಿಸಿತು ಎಂದು ಆಯೋಗದ ಕಾರ್ಯದರ್ಶಿ ಎಂ.ಜೆ. ಇಂದ್ರಕುಮಾರ್ ಅವರು ತಿಳಿಸಿದ್ದಾರೆ.
ಆಯೋಗದ ಮುಂದೆ ಅಡ್ವೋಕೇಟ್‍ಗಳಿಂದ 130 ಅಫಿಡವಿಟ್, ಪೊಲೀಸ್‍ರಿಂದ 332 ಅಫಿಡವಿಟ್, ಸಾರ್ವಜನಿಕರಿಂದ 139 ಅಫಿಡವಿಟ್‍ಗಳು ಸಲ್ಲಿಕೆಯಾಗಿದ್ದವು, ಮಾಧ್ಯಮದ ಐವರು ಹೇಳಿಕೆಗಳನ್ನಷ್ಟೇ ದಾಖಲಿಸಿದ್ದರು.
ಆಯೋಗದ ಮುಂದೆ 103 ಅಡ್ವೋಕೇಟ್‍ಗಳು, 158 ಪೊಲೀಸರು, 14 ಸಾರ್ವಜನಿಕರು ಮತ್ತು ಓರ್ವ ಅಧಿಕಾರಿ ಸಾಕ್ಷ್ಯ ನುಡಿದರು. ಅಲ್ಲದೆ, ಆಯೋಗದ ಮುಂದೆ ಅಡ್ವೋಕೇಟರ್‍ಗಳು 349 ಸಾಕ್ಷ್ಯಗಳು, ಪೊಲೀಸರು 251 ಸಾಕ್ಷ್ಯಗಳು, ಸರ್ಕಾರದಿಂದ 12 ಸಾಕ್ಷ್ಯಗಳು ಹಾಗೂ ಸಾರ್ವಜನಿಕರಿಂದ 15 ಸಾಕ್ಷ್ಯಗಳು ಆಯೋಗಕ್ಕೆ ಸಲ್ಲಿಸಲಾಗಿತ್ತು ಎಂದು ಆಯೋಗದ ಕಾರ್ಯದರ್ಶಿಗಳು ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.