
ನಂತರ ಲತಾ ವಿ ಸಂಡೂರು ನಗರಸಭೆ ಅಧ್ಯಕ್ಷರು ಈ ಕಾರ್ಯಕ್ರಮದ ಕುರಿತು ಮಾತನಾಡಿದರು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಮತ್ತು ಸರಕಾರದ ಯೋಜನೆಗಳನ್ನು ಪಡೆದುಕೊಂಡು ಸ್ವಾಲಂಬಿಗಳಾಗಿ ಜೀವಿಸಬೇಕೆಂದು ತಿಳಿಸಿದರು. ೨೨.೭೫ರ ಅನುದಾನದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಶೌಚಾಲಯ ಕಟ್ಟಿಸಿಕೊಳ್ಳಲು ಹಾಗೂ ೭.೨೫ರ ಅನುದಾನದಲ್ಲಿ ಕೊಳಚೆ ಪ್ರದೇಶ ಹಾಗೂ ಹಿಂದುಳಿದ ವರ್ಗದವರಿಗೆ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲು ೨೦,೦೦೦ ರೂಗಳನ್ನು ನಗರಸಭೆಯಿಂದ ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದರು.
ಶ್ರೀಮತಿ ಕಾಳಮ್ಮ ಪತ್ತಾರ ಸಂಪನ್ಮೂಲ ವ್ಯಕ್ತಿಗಳು ಮಾತನಾಡಿ ಇಂದಿನ ಸಮಾಜದಲ್ಲಿ ಹಲವಾರು ಸಮಸ್ಯೆಗಳಿಂದ ದ್ವಂದ್ವಕ್ಕೊಳಗಾಗಿ ಹತಾಸೆ ಭಾವನೆಗೆ ಇಡಾಗುತ್ತಿದ್ದಾರೆ ಆದ್ದರಿಂದ ಪುರುಷ ಮತ್ತು ಮಹಿಳೆಯರು ಪರಿಪಕ್ವವಾದ ಮನಸ್ಸು ಹೊಂದುವವರೆಗೂ ವಿವಾಹ ಮಾಡಬಾರದು ಆದ್ದರಿಂದ ಸಂವಿಧಾನದಲ್ಲಿ ಮಹಿಳೆಯರಿಗೆ ೧೮ ವರ್ಷ, ಪುರುಷರಿಗೆ ೨೧ ವರ್ಷ ಎಂದು ನಿಗದಿ ಪಡಿಸಲಾಗಿದೆ ಆದರೂ ಸಹ ಇಂದಿನ ಸಮಾಜದ ಜಂಜಾಟದಿಂದ ವಿವಾಹ ವಿಚ್ಛೇದನಗಳು ಹೆಚ್ಚಾಗುತ್ತಿವೆ. ಆದ್ದರಿಂದ ಮಹಿಳೆಯರು ಆರ್ಥಿಕ ಭದ್ರತೆ ಇಲ್ಲದಂತಾಗಿ ಸಾಕಷ್ಟು ಸಾಮಾಜಿಕ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ ಕಾನೂನಿನಲ್ಲಿ ಮಹಿಳೆಯರಿಗೆ ಉತ್ತಮ ಸಲಹೆ ಮತ್ತು ಪರಿಹಾರಗಳಿದ್ದು ಸಂಬಂಧಿಸಿದ ಪೋಲಿಸ್ ಇಲಾಖೆಗಳು ಮತ್ತು ವಕೀಲರನ್ನು ಭೇಟಿ ಮಾಡಿ ಪರಿಹಾರವನ್ನು ಕಂಡುಕೊಳ್ಳಬೇಕು. ನಂತರ ತನ್ನ ಉದ್ಯೋಗದ ಸ್ಥಳದಲ್ಲಿ ಪುರುಷ ಸಹೋದ್ಯೋಗಿಗಳಿಂದ ಯಾವುದೇ ರೀತಿಯ ಕಿರುಕುಳಕ್ಕೆ ಒಳಗಾಗದೇ ಗೌರವಯುತ ಪರಿಸರದಲ್ಲಿ ತಾನು ಕೆಲಸ ಮಾಡಬೇಕೆನ್ನುವುದು ಪ್ರತಿಯೊಬ್ಬ ದುಡಿಯುವ ಮಹಿಳೆಯ ಮೂಲಭೂತ ಹಕ್ಕು ಎಂಬುದಾಗಿ ನಮ್ಮ ಸರ್ವೋಚ್ಛ ನ್ಯಾಯಾಲಯವು (ಸುಪ್ರೀಂ ಕೋರ್ಟ್) ವಿಶಾಖಾ ಮತ್ತಿತರರು ವಿರುದ್ಧ ರಾಜಸ್ಥಾನ ರಾಜ್ಯ ಮತ್ತಿತರರು ಎನ್ನುವ ಪ್ರಕರಣದಲ್ಲಿಯ ಮಹತ್ವದ ತೀರ್ಪಿನಲ್ಲಿ ಹೇಳಿದ್ದಲ್ಲದೇ ಲೈಂಗಿಕ ಕಿರುಕುಳಕ್ಕೊಳಗಾದ ದುಡಿಯುವ ಮಹಿಳೆಯ ರಕ್ಷಣೆಗೆ ಸೂಕ್ತ ಮಾರ್ಗದರ್ಶನ ಸೂತ್ರಗಳನ್ನು ನೀಡಿದೆ ಎಂದು ತಿಳಿಸಿದರು.
ನಂತರ ಪೋಲಿಸ್ ಇಲಾಖೆಯ ಜಗದೀಶ ಹಿರೇಮಠ ಎಸ್‌ಪಿ ಆಫೀಸ್ ಕೊಪ್ಪಳ ಮಾತನಾಡಿದರು. ಅತ್ಯಾಚಾರ ಮಾಡಿದ ಪುರುಷನಿಗೆ ೭ ವರ್ಷಗಳಿಗೆ ಕಡಿಮೆಯಿಲ್ಲದ ೧೦ ವರ್ಷಗಳವರೆಗೆ ಅಥವಾ ಅಜೀವವಾಗಿ ವಿಸ್ತರಿಸಬಹುದಾದ ಅವಧಿಗೆ ಕಾರಾಗೃಹ ಮತ್ತು ದಂಡದ ಶಿಕ್ಷೆ. (ಸೆಕ್ಶನ್ ೩೭೬ ) ವಿಶೇಷ ಸಂದರ್ಭಗಳಲ್ಲಿ ನ್ಯಾಯಾಲಯಕ್ಕೆ ಸಕಾರಣಗಳು ಕಂಡುಬಂದಲ್ಲಿ ಕನಿಷ್ಠ ಪ್ರಮಾಣದ ಅಂದರೆ ೭ ವರ್ಷಗಳಿಗಿಂತ ಕಡಿಮೆ ಅವಧಿಗೆ ಕಾರಾಗೃಹ ಮತ್ತು ದಂಡದ ಶಿಕ್ಷೆ. ಅತ್ಯಾಚಾರ ಮಾಡಿದ ಪುರುಷನು ಪ್ರಭಾವಿ ವ್ಯಕ್ತಿ, ಪೋಲಿಸ ಅಧಿಕಾರಿ ಅಥವಾ ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಯಾಗಿದ್ದರೆ ಕನಿಷ್ಠ ೧೦ ವರ್ಷಗಳಿಗೆ ಕಡಿಮೆಯಿಲ್ಲದ ಅಥವಾ ಅಜೀವವಾಗಿ ವಿಸ್ತರಿಸಬಹುದಾದ ಅವಧಿಗೆ ಕಾರಾಗೃಹ ಮತ್ತು ದಂಡದ ಶಿಕ್ಷೆಯನ್ನು ವಿಧಿಸಬಹುದಾಗಿದೆ. (ಸೆಕ್ಶನ್ ೩೭೬ಅ) ಮಹಿಳೆಯು ಗರ್ಭಿಣಿಯಾಗಿದ್ದಾಗ, ೧೨ ವರ್ಷಗಳಿಗಿಂತ ಕಡಿಮೆ ವಯಸ್ಸಿನ ಬಾಲಕಿಯಾಗಿದ್ದರೆ ಮತ್ತು ಸಾಮೂಹಿಕವಾಗಿ ಅವಳ ಮೇಲೆ ಅತ್ಯಾಚಾರವೆಸಗಿದಲ್ಲಿ ಪರುಷನು ನ್ಯಾಯಾಲಯ ನೀಡುವ ಅತ್ಯಂತ ಕಠಿಣ ಶಿಕ್ಷೆಗೆ ಗುರಿಯಾಗುತ್ತಾನೆ. (ಸೆಕ್ಶನ್ ೩೭೬ಆ) ಎಂದು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ತಿಳಿಸಿದರು.
ಕೊನೆಯದಾಗಿ ಶಾಂತಕುಮಾರ ಸೊಂಪೂರವರು ವಂದನಾರ್ಪಣೆಯನ್ನು ತಿಳಿಸಿ ಕಾರ್ಯಕ್ರಮವನ್ನು ಮುಕ್ತಾಗೊಳಿಸಿದರು.
0 comments:
Post a Comment
Click to see the code!
To insert emoticon you must added at least one space before the code.