PLEASE LOGIN TO KANNADANET.COM FOR REGULAR NEWS-UPDATES

 ದಿ. ೧-೧೦-೨೦೧೪ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ನಿವೃತ ಅಸಂಘಟಿತ ಕಾರ್ಮಿಕರ ಯುನಿಯೂನ್ ಕೊಪ್ಪಳ ಜಿಲ್ಲಾ ಘಟಕ ಹಾಗೂ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ತಹಶೀಲ ಕಾರ್ಯಾಲಯ ಎದುರುಗಡೆ ಧರಣಿ ನಡೆಸಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ  ಅಲ್ಲಮಪ್ರಭು ಬೆಟ್ಟದೂರು, ಡಾ| ಮಹಾಂತೇಶ ಮಲ್ಲನಗೌಡ್ರ, ಮೈಲಪ್ಪ ಬಿಸರಳ್ಳಿ, ಎಸ್.ಎ.ಗಫಾರ್,  ರಾಜಾಬಕ್ಷಿ ಹೆಚ್.ವಿ., ವಜೀರ್‌ಸಾಬ ತಳಕಲ, ಶಿವಾನಂದ ಹೊದ್ಲೂರು, ಗಾಳೆಪ್ಪ ಮುಂಗೋಲಿ, ಗೌಸ್ ನೀಲಿ, ಶಿವಪ್ಪ ಹಡಪದ, ಶಂಕ್ರಪ್ಪ ಕುಂಬಾರ, ರಮ್‌ಜಾನ್ ಎಲಿಗಾರ, ಬಸವರಾಹ ಹಳ್ಳಿ, ಹನುಮಂತ ಕಳ್ಳಿ, ಬಸವರಾಜ ಕ್ಯಾದಗುಂಪಿ, ನಿಂಗಪ್ಪ ಟಣಕನಕಲ್ಲ, ಮಂಜುನಾಥ ಕೊಳೂರು ಮತ್ತಿತರರು ಭಾಗವಹಿಸಿದ್ದರು.

೧೫ ವಯಸ್ಸಿನಿಂದ, ದಿನಕ್ಕೆ ೧೨ ಗಂಟೆ, ವಾರದ ೭ ದಿನಗಳೂ ೪೦ ವರ್ಷಕ್ಕು ಹೆಚ್ಚಿನ ಅವಧಿಯ ಉತ್ಪಾದಕ ದುಡಿಮೆ ನೀಡಿ, ನಿವೃತ್ತರಾದ ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ಯೋಗ್ಯ ಪಿಂಚಣಿ ರೂ.೫೦೦೦/- ನಿಗದಿಪಡಿಸುವ ಮತ್ತು ಇತರ ಹಕ್ಕೋತ್ತಾಯಗಳು 

ಅಸಂಘಟಿತ ವಲಯದ ಕಾರ್ಮಿಕರು, ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿ.ಡಿ.ಪಿ) ೬೨ % ಕೊಡುಗೆ ನೀಡುತ್ತಾರೆಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ಅಸಂಘಟಿತ ವಲಯದ ಕಾರ್ಮಿಕರು ಸುಮಾರು ೧೫ ವಯಸ್ಸಿನಿಂದಲೆ ಕೆಲಸ ಮಾಡಲು ಪ್ರಾರಂಬಿಸಿ, ಕನಿಷ್ಟ ೫೫ ರಿಂದ ೬೦ ವಯಸ್ಸಿನವರೆಗೆ ದುಡಿಯುತ್ತಾರೆ. ಹೀಗಾಗಿ ಅವರು ಕನಿಷ್ಟ ೪೦ ವರ್ಷಗಳ ಉತ್ಪಾದಕ ಅಮೂಲ್ಯ ಕೊಡುಗೆಯನ್ನು ಆರ್ಥಿಕ ವ್ಯವಸ್ಥೆಗೆ ನೀಡಿರುತ್ತಾರೆ. ಆದಾಗ್ಯೂ, ಈ ಕೊಡುಗೆಯನ್ನು ಲೆಕ್ಕಿಸದೆ, ಅವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎರಡೂ ಸೇರಿ, ಆಧಾರ ರಹಿತ ಅತಿಅಲ್ಪ ಪಿಂಚಣಿ ನೀಡುತ್ತಿದ್ದಾರೆ. ಇದರಿಂದಾಗಿ, ನಿವೃತ್ತ ಅಸಂಘಟಿತ ಕಾರ್ಮಿಕರು ಸಾಯಿಯುವವರೆಗೂ ಅಲ್ಲಿ ಇಲ್ಲಿ ಕೂಲಿಗಾಗಿ ಅಲೆದಾಡಿ ದುಡಿಯುತ್ತಲೇ ಇರಬೇಕಾದ ಅನಿವಾರ್ಯ ಪರಿಸ್ಥಿತಿಯಾಗಿದೆ. ಅಸಂಘಟಿತ ಕಾರ್ಮಿಕರು ಕಠಿಣ, ಅಸುರಕ್ಷಿತ, ಅನಾರೋಗ್ಯಕರವಾದ ಹಾಗೂ ದಬ್ಭಾಳಿಕೆಯ ಕೆಲಸದ ಜೀವನವನ್ನು ಮೀರಿ ಬದುಕುಳಿಯಲು ಸಾಧ್ಯವಾದರೂ ಸಹ, ಅವರ ಉಳಿದ ಜೀವನದ ಅವಧಿ ಅತಿಕಡಿಮೆ. ಈ ಅಲ್ಪಾವಧಿಗೂ, ಎರಡೂ ಸರ್ಕಾರಗಳು ಸೇರಿ ನೀಡುತ್ತಿರುವ ಪಿಂಚಣಿಯ ಪ್ರಮಾಣವು ಆಧಾರ ರಹಿತವಾಗಿರುವುದು ಮಾತ್ರವಲ್ಲದೆ ಒಂದು ಕ್ರೂರ ಹಾಸ್ಯ ಎಂದು ಅನ್ನಿಸುತ್ತದೆ. 
ಅರ್ಥಿಕ ಅಭಿವೃದ್ಧಿಗೆ, ೪೦ ವರ್ಷಕ್ಕೂ ಮೀರಿ ತಮ್ಮ ದುಡಿಮೆಯಿಂದ ನೀಡಿರುವ ಅತ್ಯಮೂಲ್ಯ ಕೊಡುಗೆಯನ್ನು ಗುರುತಿಸಿ ನಿವೃತ್ತ ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಹಕ್ಕಾಗಿ ನೀಡಬೇಕೆ ಹೊರತು, ಬಡವರಿಗೆ ನೀಡುವ ಸಹಾಯವಾಗಿಯೋ ಅಥವಾ ದಾನವಾಗಿ ಅಲ್ಲ. ಪಿಂಚಣಿ ತಮ್ಮ ಉತ್ಪಾದಕ ದುಡಿಮೆಯ ಅವಧಿಯಲ್ಲಿ ನಿವೃತ್ತ ಜೀವನಾವಧಿಯ ಸಾಮಾಜಿಕ ಭದ್ರತೆಗಾಗಿ ಗಳಿಸಿದ ಹಕ್ಕಾಗಿರುತ್ತದೆ. ಅಸಂಘಟಿತ ವಲಯದ ಕಾರ್ಮಿಕರು ತಮ್ಮ ಜೀವನದ ಸಂಧ್ಯಾವಧಿಯಲ್ಲಿ ಘನತೆಯನ್ನು ಹಾಗೂ ಮಕ್ಕಳ ಮೊಮ್ಮಕ್ಕಳ ಮತ್ತು ಸಮುದಾಯದ ಗೌರವವನ್ನು ಆಶಿಸುತ್ತಾರೆ. ಯೋಗ್ಯ ಪಿಂಚಣಿಯ ಹಕ್ಕು ಪಡೆದು ಸ್ವಾವಲಂಬನೆ ಪಡೆಯುವ ಮೂಲಕವೇ ಅವರ ಈ ಆಶಯ ನಿಜವಾಗಲು ಸಾಧ್ಯವಾಗುವುದು. ಆರ್ಥಿಕತೆಗೆ, ಅಭಿವೃದ್ಧಿಗೆ, ಸಮಾಜದ ಸುಖಕ್ಕೆ ಇಷ್ಟು ಅಪಾರ ಕೊಡುಗೆ ನೀಡಿದವರಿಗೆ ಮೆಚ್ಚುಗೆ, ಗೌರವ ಘನತೆ ನೀಡಬೇಕಾದ ಸಮಯದಲ್ಲಿ, ಕೇವಲ ರೂ.೫೦೦/- ಪಿಂಚಣಿ ನೀಡಿ, ಒಪ್ಪೊತ್ತು ಊಟವೂ ಇಲ್ಲದೆ, ಕನಿಷ್ಠ ಮಟ್ಟದ ಆರೋಗ್ಯ ರಕ್ಷಣೆಯೂ ಇಲ್ಲದಂತ್ತಿರುವುದು, ಅವರನ್ನು ಅವಮಾನ ಮಾಡಿದಂತಾಗುವುದು. ಆದುದರಿಂದ, ಈ ಕೆಳಕಂಡ ಪ್ರಮುಖ ಹಕ್ಕೊತ್ತಾಯಗಳನ್ನು ತಾವು ಗಂಭೀರವಾಗಿ ಪರಿಗಣಿಸಿ, ಕೂಡಲೆ ಸಕರಾತ್ಮಕ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ನಿರ್ದೇಶಿಸಬೇಕೆಂದು ಒತ್ತಾಯಿಸುತ್ತೇವೆ:
ನಮ್ಮ ಹಕ್ಕೊತ್ತಾಯಗಳು:
ತಿಂಗಳಿಗೆ ರೂ.೫೦೦೦/- ಮೂಲ ಪಿಂಚಣಿ ನಿಗಧಿಯಾಗಬೇಕು.
೧) (ಕಾರ್ಮಿಕ ವರ್ಗವು ಒತ್ತಾಯಿಸುತ್ತಿರುವ ರಾಷ್ಟ್ರೀಯ ಸಾಮಾನ್ಯ ಕನಿಷ್ಠ ಕೂಲಿಯ  ಅರ್ಧದಷ್ಟು) ಇದರ ಜೊತೆ ಬೆಲೆ ಏರಿಕೆ ಸರಿದೂಗಿಸಲು ಸರ್ಕಾರ ಆಗಿಂದಾಗೆ ನಿಗದಿಪಡಿಸುವ ಕಡ್ಡಾಯ ಡಿ. ಏ. ಆರ್ಹತಾ ವಯೋಮಿತಿ ೫೦/೫೫ ವರ್ಷಕ್ಕೆ ಇಳಿಸುವುದು: ಪೌಷ್ಟಿಕ ಆಹಾರ ತಿಂದು, ಉತ್ತಮ ವಾತವರಣದಲ್ಲಿ ಕೆಲಸ ಮಾಡಿದವರಿಂಗಿತಲೂ ಬಹಳಷ್ಟು ಶ್ರಮಪಟ್ಟು ಕಠಿಣವಾದ ಕೆಲಸ ಮಾಡಿರುವುದರಿಂದ, ಅಸಂಘಟಿತ ಕಾರ್ಮಿಕರು ಕೆಲಸ ಮಾಡುವ ಸಾಮರ್ಥ್ಯವನ್ನು ಬೇಗನೆ ಕಳೆದುಕೊಳ್ಳುತ್ತಾರೆ. ಅವರಿಗೂ ವಿಶ್ರಾಂತಿಯ ಅಗತ್ಯ ಇದೆ. ಆದ್ದರಿಂದ ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಅರ್ಹತೆಗಾಗಿ ವಯೋಮಿತಿಯನ್ನು ಮಹಿಳೆಯಿರಿಗೆ ೫೦ ವರ್ಷ ಮತ್ತು ಪುರಷರಿಗೆ ೫೫ ವರ್ಷಕ್ಕೆ ನಿಗದಿಗೊಳಿಸಬೇಕು.
೨) ಕುಟುಂಬ ಮತ್ತು ಸಮುದಾಯದ ನಿರ್ಲಕ್ಷತೆಗೊಳಪಟ್ಟಿರುವ ನಮಗೆ ಸರ್ಕಾರ ಒಂದು ಹೊತ್ತಾದರು ಬಿಸಿ ಊಟ ನೀಡುವ ವ್ಯವಸ್ಥೆ ಮಾಡಬೇಕು.
೩) ಆರೋಗ್ಯದ ರಕ್ಷಣೆಗಾಗಿ, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಶುಗರ್, ಬಿ.ಪಿ, ಕ್ಯಾಲ್ಶಿಯಂ ಮಾತ್ರೆ ಅವಶ್ಯವಾಗಿ ದೊರೆಯಬೇಕು. ತಾವು ಈ ಬಗ್ಗೆ ಕುಲಂಕುಷವಾಗಿ ಪರಿಶೀಲಿಸಿ ತಮ್ಮ ಸರ್ಕಾರದ ವತಿಯಿಂದ ಸೂಕ್ತ ಕ್ರಮ ಜರುಗಿಸುವಿರೆಂದು  ನಂಬಿರುತ್ತೇವೆ. 
: ಸಂಚಾಲಕರು : 


Advertisement

0 comments:

Post a Comment

 
Top