PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಸೆ.೧೮ (ಕ ವಾ) ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ, ಕೊಪ್ಪಳ ಇವರಿಂದ ಪ್ರಸಕ್ತ ಸಾಲಿನಲ್ಲಿ ಹಿಂದುಳಿದ ವರ್ಗಗಳ ಜನರು ಸಾಂಪ್ರದಾಯಿಕ ವೃತ್ತಿಗಳನ್ನು ಉನ್ನತೀಕರಿಸಿಕೊಳ್ಳಲು ಸಾಲ ಮತ್ತು ಸಹಾಯಧನ ಯೋಜನೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
       ಧೋಬಿ, ಸವಿತ ಸಮಾಜ ಮತ್ತು ತಿಗಳ ಸಮುದಾಯಗಳಿಗೆ ಸೇರಿದ ಜನರು ವೃತ್ತಿ ಕೌಶಲ್ಯಗಳನ್ನು ಉನ್ನತೀಕರಿಸಲು ಹಾಗೂ ಆಧುನಿಕ ಉಪಕರಣಗಳನ್ನು ಕೊಳ್ಳಲು ಸಾಲ ಮತ್ತು ಸಹಾಯಧನ ಸೌಲಭ್ಯ ಒದಗಿಸುವ ಯೋಜನೆಯಡಿಯಲ್ಲಿ ಮಡಿವಾಳ ಸಮುದಾಯದವರು ಧೋಬಿ ಘಟಕ, ಡ್ರೈ ಕ್ರೀನಿಂಗ್ ಶಾಪ್. ಸವಿತಾ ಸಮಜದವರು ಕ್ಷೌರಿಕ ವೃತ್ತಿ, ಹೇರ್ ಕಟಿಂಗ್ ಸಲೂನ್ ಮತ್ತು ತಿಗಳ ಸಮುದಾಯದವರು ಹೂವು ಅಥವಾ ತರಕಾರಿ ಬೆಳೆಯುವುದುಹಾಗೂ ಮಾರಾಟ ಮಾಡಲು ಅಗತ್ಯ ಸಾಲ ಮತ್ತು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
       ಅರ್ಜಿ ಸಲ್ಲಿಸಲಿಚ್ಛಿಸುವವರು ಪ್ರವರ್ಗ ೨ಎ ನಲ್ಲಿ ಬರುವ ದೋಬಿ, ಸವಿತ ಮತ್ತು ತಿಗಳ ಹಾಗೂ ಅದರ ಉಪ ಜಾತಿಗಳಿಗೆ ಸೇರಿದವರಾಗಿರಬೇಕು ಮತ್ತು ಸಾಂಪ್ರದಾಯಿಕ ವೃತ್ತಿ ನಿರ್ವಹಿಸುತ್ತಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಿಗೆ ರೂ.೪೦,೦೦೦, ಮತ್ತು ನಗರ ಪ್ರದೇಶದವರಿಗೆ ರೂ.೫೫,೦೦೦ ಗಳ ಮಿತಿಯೊಳಗಿರಬೇಕು. ಅಭ್ಯರ್ಥಿಗಳು ೧೮ ರಿಂದ ೫೫ ವರ್ಷದೊಳಗಿನ ವಯೋಮಿತಿಯಲ್ಲಿರಬೇಕು. ಅರ್ಜಿದಾರರು ಕೈಗೊಳ್ಳುವ ವೃತ್ತಿಗೆ ಅನುಗುಣವಾಗಿ ಗರಿಷ್ಠ ೨.೦೦ ಲಕ್ಷ.ರೂಗಳ ಸೌಲಭ್ಯ ಒದಗಿಸಲಾಗುವುದು. ಇದರಲ್ಲಿ ಶೇಕಡಾ ೩೦ ರಷ್ಟು ಗರಿಷ್ಠ ೧೦,೦೦೦ ದವರೆಗೆ ಸಹಾಐಧನ ಹಾಗೂ ಉಳಿಕೆ ೧,೯೦,೦೦೦ ವರೆಗೆ ವಾರ್ಷಿಕ ಶೇ.೨ ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಲಾಗುವುದು. ಸಾಲದ ಭದ್ರತೆಗಾಗಿ ೫೦,೦೦೦ ರೂ.ಗಳಿಗಿಂತ ಹೆಚ್ಚಿನ ಮೊತ್ತದ ಸಾಲದ ಭದ್ರತೆಗೆ ಒದಗಿಸುವ ಸ್ಥರಾಸ್ತಿಯ ಮೇಲೆ ಸಾಲ ತೀರುವಳಿಯಾಗುವವರೆಗೂ ನಿಗಮದ ಹಕ್ಕು ದಾಖಲಿಸಬೇಕು.
     ಆಸಕ್ತರು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ, ಜಿಲ್ಲಾಡಳಿತ ಭವನ, ಕೊಪ್ಪಳ ಕಛೇರಿಯಲ್ಲಿ ಚೈತನ್ಯ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಅರ್ಜಿ ನಮೂನೆಯನ್ನು ಉಚಿತವಾಗಿ ಪಡೆದು, ಭರ್ತಿ ಮಾಡಿ, ಅಕ್ಟೋಬರ್.೦೯ ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಮರಳಿ ಸಲ್ಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿ-೦೮೫೩೯-೨೨೧೮೪೫, ಸಹಾಯಕ ಪ್ರಧಾನ ವ್ಯವಸ್ಥಾಪಕರ ಕಛೇರಿ, ಕಲಬುರಗಿ ವಿಭಾಗ, ಕಲಬುರಗಿ ಹಾಗೂ ನಿಗಮದ ಕೇಂದ್ರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.

Advertisement

0 comments:

Post a Comment

 
Top