ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಎನ್.ಜಡೆಯಪ್ಪ- ದೀಪ,ಶಾಂತಾದೇವಿ ಹಿರೇಮಠ- ದೀಪಾವಳಿಗೆ ಸ್ವಾಗತ, ವೀರಣ್ಣ ಹುರಕಡ್ಡಿ- ಈ ದೀಪಾವಳಿ, ಮಾನಪ್ಪ ಬೆಲ್ಲದ- ಇಲ್ಲವಾದರೆ, ಮಹೇಶ್ ಬಳ್ಳಾರಿ- ಗಜಲ್, ಅನುಸೂಯಾ ಜಾಗೀರದಾರ- ದೀಪಾವಳಿ ಎಂದರೆ, ಅರುಣಾ ನರೇಂದ್ರ- ಗಜಲ್, ಪುಷ್ಪಲತಾ ಏಳುಬಾವಿ- ಬೆಳಕು, ಬಸವರಾಜ್ ಚೌಡ್ಕಿ- ಚುಟುಕು,ಎ.ಪಿ.ಅಂಗಡಿ- ನೀಲಿಕೆಟ್ಟ ಸುದ್ದಿ,ಶ್ರೀಮತಿ ಕಲಾವತಿ ಕುಲಕರ್ಣಿ- ಹಸನ್ಮುಖಿ, ವಿಜಯಲಕ್ಷ್ಮಿ ಕೊmಗಿ- ಕವಿತೆ ಎಣ್ಣೆಗುಂಡಿ, ಸಿರಾಜ್ ಬಿಸರಳ್ಳಿ - ನಾನು ದೇವರಿಗೆ ಎಲ್ಲಾ ಹೇಳ್ತೀನಿ ಕವನಗಳ ವಾಚನ ಮಾಡಿದರು.
ಈಶ್ವರ ಹತ್ತಿಯವರ ಕೃತಿಗಳ ಕುರಿತು ಗೋಷ್ಠಿಯಲ್ಲಿ ಭಾಗವಹಿಸಿದವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಡಿಸಿದರು. ನಂತರ ಮಾತನಾಡಿದ ಈಶ್ವರ ಹತ್ತಿ - ವಿಮರ್ಶೆಗೊಳಪಡಿಸಬೇಕಾದ ಕೃತಿಯ ಪರಿಪೂರ್ಣ ಓದು ಮತ್ತು ಸಂಬಂಧಗಳನ್ನು ಮರೆತು ವಿಮರ್ಶೆ ಮಾಡಬೇಕಾದ ಅವಶ್ಯಕತೆ ಇದೆ. ಕೃತಿಯ ಹಿನ್ನೆಲೆ, ಕಾವ್ಯ & ಪರಿಸರದ ಹಿನ್ನೆಲೆಯನ್ನು ಪರಿಗಣಿಸಬೇಕು. ಅನುವಾದಕನಿಗೆ ಸ್ವಾತಂತ್ರ್ಯ ಇರುವುದಿಲ್ಲ. ಮೂಲ ಲೇಖಕನ ಆಶಯಕ್ಕೆ ದಕ್ಕೆಯಾಗದಂತೆ ನೋಡಬೇಕಾದ ಜವಾಬ್ದಾರಿಯಿರುತ್ತೆ. ವಚನಗಳ ಮೂಲಕ ನನ್ನ ತಲ್ಲಣಗಳನ್ನು ವ್ಯಕ್ತಪಡಿಸಿದ್ದೇನೆ ಎಂದು ಹೇಳಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಡಾ.ಮಹಾಂತೇಶ ಮಲ್ಲನಗೌಡರ ವಹಿಸಿದ್ದರು.
ಈ ಸಂದರ್ಭದಲ್ಲಿ ಶಿವಾನಂದ ಹೊದ್ಲೂರ,ವಿರೇಶ ಕೊಪ್ಪಳ, ಕೆ.ಸತ್ಯನಾರಾಯಣರಾವ್, ಅಮರದೀಪ್, ಎಂ.ವಿ.ಪಾಟೀಲ್, ಶ್ರೀನಿವಾಸ ಚಿತ್ರಗಾರ,ರಾಮಣ್ಣ ವೇಮಲಿ, ಬಿ.ಎ.ವಡ್ಡರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ‍್ಯಕ್ರಮಕ್ಕೆ ಸ್ವಾಗತವನ್ನು ಎನ್.ಜಡೆಯಪ್ಪ ಕೋರಿದರೆ ವಂದನಾರ್ಪಣೆಯನ್ನು ಮಹೇಶ ಬಳ್ಳಾರಿ ಮಾಡಿದರು. ಸಿರಾಜ್ ಬಿಸರಳ್ಳಿ ಕಾರ‍್ಯಕ್ರಮ ನಡೆಸಿಕೊಟ್ಟರು.
0 comments:
Post a Comment
Click to see the code!
To insert emoticon you must added at least one space before the code.