ಸ್ವತಂತ್ರ ಸಂಗ್ರಾಮದ ಪ್ರಥಮ ಬೆಳ್ಳಿ ಚುಕ್ಕೆ

ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಎ.ಕೆ. ಮಹೇಶಕುಮಾರ್ ಕಿತ್ತೂರು ಸಂಸ್ಥಾನ ಕ್ರಿ.ಶ. ೧೫೮೫ ರಿಂದ ೧೮೨೪ ರವರೆಗೆ ಕಿತ್ತೂರು ಸಂಸ್ಥಾನದ ವೈಭವವನ್ನು ಕುರಿತು ಮಾತನಾಡುತ್ತಾ, ೧೮೨೪ ಅಕ್ಟೋಬರ್ ೨೩ ರಂದು ಬ್ರಿಟಿಷರ ವಿರುದ್ಧ ನಡೆದ ಯುದ್ಧದಲ್ಲಿ ಕಿತ್ತೂರಿನ ಕಲಿಗಳು ವೀರಾವೇಶದಿಂದ ಬ್ರಿಟಿಷರ ರುಂಡ-ಮುಂಡಗಳನ್ನು ಚೆಂಡಾಡಿದರು. ಯುದ್ಧ ಭೀಕರವಾಗಿತ್ತು, ಚೆನ್ನಮ್ಮ ತನ್ನ ಸೈನ್ಯವನ್ನು ಹರ ಹರ ಮಹಾದೇವ ಉಳಿದರೆ ನಾಡು, ಮಡಿದರೆ ವೀರಸ್ವರ್ಗ ಎಂದು ಹುರಿದುಂಬಿಸುತ್ತಿದ್ದಳು. ಗುಂಡು ಹಾರಿಸುವದರಲ್ಲಿ ಪ್ರವೀಣನಾಗಿರುವ ಅಮಟೂರ ಬಾಳಪ್ಪ ಗುರಿಯಿಟ್ಟು ಥ್ಯಾಕರೆಗೆ ಹಾರಿಸಿದಾಗ ಗುಂಡು ಥ್ಯಾಕರೆಯ ಶರೀರವನ್ನು ಭೇದಿಸಿತ್ತು, ಕ್ಷಣಾರ್ಧದಲ್ಲಿ ಆತನು ನೆಲಕ್ಕುರುಳಿದನು. ಒಬ್ಬ ಸೈನಿಕ ಅವನ ರುಂಡವನ್ನು ಕತ್ತರಿಸಿ ಭರ್ಚಿಗೆ ಸಿಕ್ಕಿಸಿಕೊಂಡು ಕೇಕೆ ಹಾಕುತ್ತಾ, ಥ್ಯಾಕರೆ ಸತ್ತ ಎಂದು ಕುಣಿದಾಡಿದ, ಕಿತ್ತೂರಿನ ಈ ವಿಜಯ ಭಾರತ ಸ್ವತಂತ್ರ ಸಂಗ್ರಾಮಕ್ಕೆ ಮುನ್ನುಡಿಯಾಯಿತು. ಮೊಟ್ಟಮೊದಲ ಬಾರಿಗೆ ಭಾರತದ ಓರ್ವ ಸ್ತ್ರೀಯಿಂದ ಸೋತು ಹಿಮ್ಮೆಟಿದ ಬ್ರಿಟಿಷರ ಸೈನ್ಯ ಅಪಹಾಸ್ಯಕ್ಕೆ ಗುರಿಯಾಯಿತು. ೧೮೨೪ ರ ಅಕ್ಟೋಬರ್ ೨೩ ರಂದು ಇಡೀ ಭಾರತದಲ್ಲಿಯೇ ಚೆನ್ನಮ್ಮನ ವೀರ ಸಾಹಸಗಾಥೆ ಮೊಳಗಿತು ಎಂದು ತಿಳಿಸಿದರು.
ಮಾಜಿ ಸಂಸದರಾದ ಶಿವರಾಮಗೌಡರು ಮಾತನಾಡಿ ರಾಜ್ಯ ಸರಕಾರ ಅಕ್ಟೋಬರ್ ೨೩ ರಿಂದ ೨೫ ರವರೆಗೆ ಕಿತ್ತೂರು ಉತ್ಸವ ಮಾಡುವುದರ ಮೂಲಕ ಗೌರವವನ್ನು ಸಲ್ಲಿಸುತ್ತದೆ. ಆದರೆ ಭಾರತದಾದ್ಯಂತ ಈ ವಿಜಯೋತ್ಸವ ಆಚರಿಸುವಂತಾಗಬೇಕೆಂದು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕಳಕನಗೌಡರು ಮಾತನಾಡಿ ಸಮಾಜ ಸಂಘಟನೆ ಬಗ್ಗೆ ಮತ್ತು ವಿಜಯೋತ್ಸವವನ್ನು ವಿಜೃಂಬಣೆಯಿಂದ ಆಚರಿಸುವ ಬಗ್ಗೆ ಮಾತನಾಡಿದರು. ವಿನಯ ಪಾಟೀಲ್ ವಂದಿಸಿದರು.
ಈ ಸಂದರ್ಭದಲ್ಲಿ ಸಮಾಜದ ತಾಲೂಕ ಅಧ್ಯಕ್ಷರಾದ ಕಂಪ್ಲಿ ಬಸಪ್ಪ, ಹಿರಿಯರಾದ ದಾಸನಾಳ ವೀರಭದ್ರಗೌಡ, ಆರ‍್ಹಾಳ ವೀರೇಶಪ್ಪ, ಗವಿಸಿದ್ದಪ್ಪ ಹೊಸಬಾವಿ, ಟಿ. ರುದ್ರಪ್ಪ ಮತ್ತು ಯುವಕರುಗಳಾದ ಚಂದ್ರಶೇಖರ ಹೀರೂರು, ಬಸವರಾಜ ಪಾಟೀಲ್ ಮುದೇನೂರು, ಎ.ಕೆ.ರವೀಂದ್ರನಾಥ, ಮಹಾಲಿಂಗಪ್ಪ ಬನ್ನಿಕೊಪ್ಪ, ಮಂಜುನಾಥ ಹೊಸ್ಕೇರಿ, ನವೀನ್ ಪೊಲೀಸ್ ಪಾಟೀಲ್, ಚನ್ನವೀರನಗೌಡ ಕೋರಿ, ಜಗದೀಶ ಬೀಳಗಿ, ಬಸವರಾಜ ಕಟಾಂಬ್ಲಿ, ವೀರೇಶ ಸುಳೇಕಲ್, ಬಸವರಾಜ ತೋಟದ್, ಚಂದ್ರಶೇಖರ ಹೆಚ್., ಮಲ್ಲಿಕಾರ್ಜುನ ಜೀವನಶ್ರೀ, ಅಮರೇಶ ಚಪಾತಿ, ಚನ್ನಬಸವ ಹೆಚ್., ಸಿ.ಕೆ.ರಾಜಶೇಖರ್ ಉಪಸ್ಥಿತರಿದ್ದರು.
0 comments:
Post a Comment
Click to see the code!
To insert emoticon you must added at least one space before the code.