PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ಸರ್ಕಾರಿ ಅಂಗವಿಕಕಲ ನೌಕರರ ಬೇಡಿಕೆ ಈಡೇರಿಕೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಹುದ್ದೆಗಳ ಲೋಪವನ್ನು ಸರಿಪಡಿಸುವಂತೆ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಸಮಾಜ ಕಲ್ಯಾಣ ಸಚಿವರಾದ ಹೆಚ್.ಆಂಜನೇಯನವರಿಗೆ ನಗರದ ಪ್ರವಾಸಿ ಮಂದಿರದಲ್ಲಿ ಮನವಿ ಸಲ್ಲಿಸಲಾಯಿತು.
   ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತ,ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಖಾಲಿರುವ ಸಹ ಶಿಕ್ಷಕರ ಹುದ್ದೆಗಳ ವರ್ಗಕರಣದಲ್ಲಿ ಕೇವಲ ದೃಷ್ಟಿಮಾಂದ್ಯತೆಯನ್ನು ಹೊಂದಿದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.ಇದರಿಂದ ಉಳಿದ ವಿವಿಧ ರೀತಿಯ ಅಂಗವೈಕಲ್ಯತೆಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದ್ದು,ಆಗಿರುವ ಲೋಪವನ್ನು ಸರಿಪಡಿಸಬೇಕು ಜೊತೆಗೆ ಚಿತ್ರದುರ್ಗ ಚಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅಂಗವಿಕಲ ನೌಕರರಿಗೆ ನೀಡಲಾಗುವ ಮೂಲ ವೇತನ ಶೇಕಡಾ ೬ ರಷ್ಟು ವಾಹನ ಭತ್ಯೆಯನ್ನು ಭಾಗಶಃ ಅಂದತ್ವವನ್ನು ಹೊಂದಿರುವ ಶಿಕ್ಷಕರಿಗೆ ನೀಡದೇ,ಅವರು ಹಿಂದೆ ಪಡೆಯಲಾಗಿರುವ ಭತ್ಯೆಯನ್ನು ವಸೂಲಿ ಮಾಡುವಂತೆ ಆದೇಶ  ನೀಡಿದ್ದಾರೆ.ಇದರಿಂದ ಅಂಗವಿಕಲ ಭಾಗಶಃ ಅಂಧತ್ವವನ್ನು ಹೊಂದಿರುವ ಶಿಕ್ಷಕರಿಗೆ ಅನ್ಯಾಯವಾಗುತ್ತದೆ.ಕೂಡಲೆ ಇದನ್ನು ಪರಿಪಡಿಸುವಂತೆ ಮನವಿ ಮಾಡಲಾಯಿತು.
ಇದಕ್ಕೆ ಪ್ರತಿಕ್ರೀಯಿಸಿದ ಸಚಿವರು ನೇಮಕಾತಿಯ ಅಧಿಸೂಚನೆಯಲ್ಲಿ ಆಗಿರುವ ಲೋಪವನ್ನು ಸರಿಪಡಿಸುವುದರ ಜೊತೆಯಲ್ಲಿ ಚಿತ್ರದುರ್ಗ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಂಗವಿಕಲ ಶಿಕ್ಷಕರ ಸಮಸ್ಯೆಯ ಬಗ್ಗೆ ಚರ್ಚಿಸುವುದಾಗಿ ಹೇಳಿದರು.
  ಈ ಸಂದರ್ಭದಲ್ಲಿ ಶಾಸಕರಾದ ರಾಘವೇಂದ್ರ ಹಿಟ್ನಾಳ,ಜಿಲ್ಲಾಧಿಕಾರಿಗಳಾದ ಆರ್.ಆರ್.ಜನ್ನು,ಜಿಲ್ಲಾ ಪಂಚಾಯತ ಸ.ಇ.ಓ.ಕೃಷ್ಣ ಉದಪುಡಿ,ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮನ್ನವರ್,ನಗರಸಭೆಯ ಸದಸ್ಯೆರಾದ ಮುತ್ತುರಾಜ ಕುಷ್ಟಗಿ ಮುಂತಾದವರು ಹಾಜರಿದ್ದರು.

20 Oct 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top