PLEASE LOGIN TO KANNADANET.COM FOR REGULAR NEWS-UPDATES

.

ಇಂದು ನಗರಕ್ಕೆ ಆಗಮಿಸಿದ್ದ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಕೊಪ್ಪಳ ಜಿಲ್ಲಾ ಸಮಿತಿಯು ಬಿ,ಸಿ,ಎಂ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿರುವು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಗ್ರಂಥಾಲಯ ಸೌಲಭ್ಯ ನೀಡಬೇಕು, ಅದಕ್ಕಾಗಿ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಎಸ್.ಎಫ್.ಐ ನಾಯಕರೊಂದಿಗೆ ಮಾತನಾಡಿದ ಸಚಿವರು ಇದು ಉತ್ತಮ ಸಲಹೆಯಾಗಿದ್ದು ಕೂಡಲೆ ಸಂಪುಟದಲ್ಲಿ ಚರ್ಚಿಸಿ ಅನುದಾನ ಬಿಡುಗಡೆಗೆ ಪ್ರಯತ್ನಿಸುತ್ತೇನೆಂದು ಭರವಸೆ ನೀಡಿದರು.
         ಈಗಾಗಲೆ ಬಿ.ಸಿ.ಎಂ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯಗಳಿಗೆ ೫೦ಸಾವಿರ ರೂ, ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ೧ ಲಕ್ಷ ರೂ ಅನುದಾನ ಬಿಡುಗಡೆ ಮಾಡುವುದಾಗಿ ಕಳೆದ ಬಾರಿ ಹೋರಾಟ ನಡೆಸಿದಾಗ ಒಪ್ಪಿಕೊಂಡಿದ್ದಿರಿ ಈಗ ಅದನ್ನು ಬಿಡುಗಡೆ ಮಾಡಿಲ್ಲವೆಂದು ಪಟ್ಟು ಹಿಡಿದಾಗ ಈ ಬಾರಿ ಖಂಡಿತಾ ಜಾರಿ ಮಾಡುತ್ತೆವೆ ಎಂದು ಸಚಿವರು ಒಪ್ಪಿಕೊಂಡರು. ಈ ಯೋಜನೆಯನ್ನು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೂ ವಿಸ್ತರಿಸುವಂತೆ ಕಾರ್ಯಕರ್ತರು ಪಟ್ಟು ಹಿಡಿದರು. ಬಿ.ಸಿ.ಎಂ. ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿ ಶುಲ್ಕ ವಿನಾಯತಿಯನ್ನು ಇನ್ನು ಬಿಡುಗಡೆ ಮಾಡಿಲ್ಲ ಕೆಲ ಕಾಲೆಜುಗಳು ಹೆಚ್ಚುವರಿಯಾಗಿ ಶುಲ್ಕ ಪಡೆದಿವೆ ಎಂದಾಗ ಪರಿಶೀಲಿಸುವುದಾಗಿ ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಸ್.ಎಫ್.ಐ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ, ಜಿಲ್ಲಾಧ್ಯಕ್ಷ ಅಮರೇಶ್ ಕಡಗದ್, ಜಿಲ್ಲಾಕಾರ್ಯದರ್ಶಿ ಬಾಳಪ್ಪ ಹುಲಿಹೈದರ್, ಮೇಘನಾ ಎಸ್, ಕಾವೇರಿ, ಅಂಬಿಕಾ, ಗಣೇಶ್, ರಮೇಶ್ ನಾಯಕ್, ಪಕೀರಪ್ಪ, ಶಿವಕುಮಾರ್ ಭಾಗವಹಿಸಿದ್ದರು. 

Advertisement

0 comments:

Post a Comment

 
Top