PLEASE LOGIN TO KANNADANET.COM FOR REGULAR NEWS-UPDATES

  ಸಂಸದ ಸಂಗಣ್ಣ ಕರಡಿ ಹರ್ಷ 
ಕೊಪ್ಪಳ ಸೆ,೧೪ : ಜಮ್ಮು ಕಾಶ್ಮೀರದಲ್ಲಿ ಉಂಟಾದ ನೈಸರ್ಗಿಕ ವಿಕೋಪದ ಭೀಕರ ಪ್ರವಾಹದಿಂದಾಗಿ ತತ್ತರಿಸಿ ಹೋಗಿರುವ ಅಲ್ಲಿನ ಸಂತ್ರಸ್ಥರಿಗೆ ಪ್ರಧಾನಮಂತ್ರಿ ಮೂಲಕ ತಲುಪಿಸಲು ಕೊಪ್ಪಳದ ಬಿಎಸ್‌ಎನ್‌ಎಲ್ ನೌಕರರ ಪತ್ತಿನ ಸಹಕಾರ ಸಂಘ ೧೧ ಸಾವಿರ ರೂ ನೆರವಿನ ಚೆಕ್ ನೀಡಿದ್ದಾರೆ ಇದು ಸಂತಸ ತಂದಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ರವಿವಾರದಂದು ಕಲ್ಯಾಣ ನಗರದ ಬಿಎಸ್‌ಎನ್‌ಎಲ್ ನೌಕರರ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನೌಕರರಿಂದ ಚೆಕ್ ಸ್ವೀಕಾರಿಸಿದ ನಂತರ ಮಾತನಾಡಿ ಜಮ್ಮು  ಕಾಶ್ಮೀರ ರಾಜ್ಯ ಪ್ರವಾಹದಿಂದ ಅಲ್ಲಿನ ಗ್ರಾಮಗಳು ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿವೆ, ಬಹಳಷ್ಟು ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ, ನಮ್ಮ ದೇಶದ ಹೆಮ್ಮೆಯ ಯೋಧರು ತಮ್ಮ ಜೀವನದ ಹಂಗನ್ನು ತೊರೆದು ಪ್ರವಾಹ ಪೀಡಿತರ ನೆರವಿಗೆ ಹಗಲಿರುಳೂ ಶ್ರಮಿಸುತ್ತೀದ್ದಾರೆ, ನಮ್ಮ ಕೇಂದ್ರ ಸರಕಾರ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡಿದೆ, ನಿನ್ನೆ ಸಹ ನಗರದಲ್ಲಿ ಬಿಜೆಪಿಯಿಂದ ನೆರೆ ಸಂತ್ರಸ್ಥರಿಗೆ ನಿಧಿ ಸಂಗ್ರಹಿಸಲಾಯಿತು, ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಹೆಚ್ಚಿನ ಪರಿಹಾರ ನಿಧಿ ಸಂಗ್ರಹಿಸಿ ಕಳಿಸಲಾಗುವುದು ಎಂದರು.

Advertisement

0 comments:

Post a Comment

 
Top