ಕೊಪ್ಪಳ: ನಮ್ಮನ್ನು ಇದೇ ಕಾಲೇಜಿನಲ್ಲಿ ಉಳಿಸಿಕೊಂಡು ಶಿಕ್ಷಣ ಕೊಡಿಸುವಂತೆ, ಹಾಗೂ ವಿವಿಧ ವಿಷಯಗಳ ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ತೆಗೆದುಹಾಕಬಾರದೆಂದು ಇತ್ತೀಚಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇರಕಲ್‌ಗಡ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರಾಚಾರ್ಯರಿಗೂ ಹಾಗೂ ಕಾಲೇಜು ಅಬಿವೃದ್ಧಿ ಸಮಿತಿಯ ಪದಾಧಿಕಾರಿಗಳಿಗೂ ಮನವಿ ಕೊಡುವದರ ಮೂಲಕ ಪ್ರತಿಭಟಿಸಿದರು.
ಈಗ ಕಾಲೇಜು ಶಿಕ್ಷಣ ಇಲಾಖೆ ೧೫ ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇರುವಂತಹ ವಿವಿಧ ವಿಷಯಗಳ ವಿಭಾಗಗಳನ್ನು ಮುಚ್ಚುವ ಪ್ರಯತ್ನ ಮಾಡಲಾಗುತ್ತಿದೆ. ಅಂತಹ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಅಲ್ಲಿ ಸೇವೆಯಲ್ಲಿರುವ ಅತಿಥಿ ಉಪನ್ಯಾಸಕರನ್ನು ಇದ್ದಕ್ಕಿದ್ದಂತೇ ಕೆಲಸದಿಂದ ತಗೆದು ಹಾಕಲಾಗುತ್ತದೆ. ಈಗಾಗಲೇ ಕೊಪ್ಪಳ ಜಿಲ್ಲೆಯ ಕೆಲವು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಇಂತಹ ಅವಘಡಗಳು ನಡೆದಿವೆ.
ಈಗ ಇರಕಲ್‌ಗಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸರದಿ? : ಇಲ್ಲಿ ಬಿ.ಎ ಅಂತಿಮ ( ಎಚ್.ಇ.ಎಸ್) ಹಾಗೂ ಬಿ.ಕಾಂ ಅಂತಿಮ ತರಗತಿಗಳನ್ನು ರದ್ದುಗೊಳಿಸಿ ಇದೇ ವಿಷಯಗಳ ವಿಭಾಗವಿರುವ ಬಳ್ಳಾರಿ ಹಾಗೂ ಗಂಗಾವತಿಗೆ ವಿದ್ಯಾರ್ಥಿಗಳನ್ನು ವರ್ಗಾವಣೆ ಮಾಡುವ ಮುನ್ಸೂಚನೆಗಳು ವಿದ್ಯಾರ್ಥಿಗಳನ್ನು ನಿದ್ದೆಗೆಡಿಸಿವೆ. ಜೊತೆಗೆ ಅತಿಥಿ ಉಪನ್ಯಾಸಕರಿಗೂ ಕೆಲಸ ಹೋಗುವ ಆತಂಕ ಇದೆ. ಇದರಿಂದ ನೊಂದ ವಿದ್ಯಾರ್ಥಿಗಳು ತಮ್ಮ ನೋವಿನ ಅಳಲನ್ನು ಪ್ರತಿಭಟನೆಯ ಮೂಲಕ ಪ್ರಾಚಾರ್ಯ ಡಾ.ಹನುಮಂತರಾಯಪ್ಪ ಅವರಿಗೆ ಮನವಿ ಕೊಡುವರ ಮೂಲಕ ಅಳಲನ್ನು ತೋಡಿಕೊಂಡರು.
ಅತಿಥಿ ಉಪನ್ಯಾಸಕ ಸಂಘ (ರಿ) ಅಧ್ಯಕ್ಷರ ಆಗ್ರಹ : ಕೊಪ್ಪಳ ಜಿಲ್ಲಾ ಅತಿಥಿ /ಅರೆಕಾಲಿಕ ಉಪನ್ಯಾಸಕ ಸಂಘ (ರಿ) ಅಧ್ಯಕ್ಷರಾದ ವೀರಣ್ಣ ಸಜ್ಜನ ಅತಿಥಿ ಉಪನ್ಯಾಸಕರನ್ನು ಯಾವುದೇ ಸಂರ್ಭದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಕೆಲಸದಿಂದ ತಗೆದುಹಾಕಬಾರದು. ಇದಕ್ಕೆ ಸ್ಪಂದಿಸದಿದ್ದರೆ ಸಂಘದಿಂದ ನಿರಂತರ ಹೋರಾಟ ಮಾಡಲಾಗುವದೆಂದು ಎಚ್ಚರಿಸಿದ್ದಾರೆ.


0 comments:
Post a Comment