PLEASE LOGIN TO KANNADANET.COM FOR REGULAR NEWS-UPDATES

 ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ ತಾಲೂಕ ಘಟಕದವತಿಯಿಂದ ಇದೇ ದಿ.೩೦ ರಂದು ತಾಲೂಕ ಶಾಲಾ ಶಿಕ್ಷಕ ಹಾಗೂ ಶಿಕ್ಷಕಿಯರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. 
ಅಂದು ಬೆಳಿಗ್ಗೆ ೯:೩೦ ಗಂಟೆಗೆ ಇಲ್ಲಿನ ಜಿಲ್ಲಾ ಕ್ರೀಡಾಗಂಣದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಶಿಕ್ಷಕರಿಗೆ ಓಓಡಿ ಸೌಲಭ್ಯ ವಿರುತ್ತದೆ. ೪೫ ವರ್ಷ ಮೇಲ್ಪಟ್ಟ ಹಾಗೂ ಕೆಳಗಿನ ಪುರುಷ ಹಾಗೂ ಮಹಿಳೆಯರ ಕ್ರೀಡಾ ಸ್ಪರ್ಧೆಗಳಲ್ಲಿ ೧೦೦ ಮೀ. ೨೦೦ ಮೀ ಮತ್ತು ೪೦೦ ಮೀ. ಓಟದ ಸ್ಪರ್ಧೆ ಹಾಗೂ ಗುಂಡು ಎಸೆತ, ಚಕ್ರ ಎಸೆತ, ಉದ್ದ ಜಿಗಿತ. ಮತ್ತು ಗುಂಪು ಆಟಗಳಲ್ಲಿ ವಾಲಿಬಾಲ್, ಕಬ್ಬಡ್ಡಿ, ಕ್ರಿಕೆಟ್, ಶೆಟಲ್ ಕಾಕ್, ಖೋಖೋ, ಕೇರಮ್ (ಡಬಲ್ಸ್) ಚೆಸ್ ಆಟಗಳನ್ನು ಅಲ್ಲದೇ ೪೫ ವರ್ಷಮೇಲ್ಪಟ್ಟ ಹಾಗೂ ಕೆಳಗಿನ ಮಹಿಳೆ ಹಾಗೂ ಪುರುಷರ  ೧೦೦ ಮೀ. ೨೦೦ ಮೀ ಮತ್ತು ೪೦೦ ಮೀ. ಓಟದ ಸ್ಪರ್ಧೆ ಹಾಗೂ ಗುಂಡು ಎಸೆತ, ಚಕ್ರ ಎಸೆತ, ಉದ್ದ ಜಿಗಿತ ಅಲ್ಲದೇ ಗುಂಪು ಆಟಗಳಲ್ಲಿ ಟ್ರೋಬಾಲ್ ಟೆನಿಕ್ವಾಟ್, ಖೋಖೋ, ಕೇರಮ್ (ಡಬಲ್ಸ್) ಚೆಸ್ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಾದ ಜಾನಪದ ಗೀತೆ, ಭಾವಗೀತೆ ಮತ್ತು ಸಮೂಹ ಗೀತೆ ಏರ್ಪಡಿಸಿದ್ದು ಪ್ರಾಥಮಿಕ ಶಿಕ್ಷಕರ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೊಪ್ಪಳ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ಬಿ., ಪ್ರಧಾನ ಕಾರ್ಯದರ್ಶಿ ಸುಭಾಸರೆಡ್ಡಿ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಹೆಚ್ಚಿನ ಮಾಹಿತಿಗೆ ಇರಕಲ್‌ಗಡಾ ವಲಯದ ಪ್ರಾಣೇಶ ಪೂಜಾರ ಮೊ.೯೯೦೨೮೯೩೬೭೧, ಅಳವಂಡಿ ವಲಯದ ಸಿದ್ದನಗೌಡ ಮಾಲಿ ಪಾಟೀಲ್ ಮೊ.೯೯೦೨೭೫೩೩೯೬, ಕೊಪ್ಪಳ ವಲಯದ ಬಸವರಾಜ ನಾಗರಡ್ಡಿ ೯೪೪೯೬೫೮೦೨೦, ಮುನಿರಾಬಾದ್ ವಲಯ ಪಾಂಡುರಂಗ ಮೊ.೯೯೧೬೬೩೩೨೬೯ ಸಂಪರ್ಕಿಸಲು ಕೋರಿದ್ದಾರೆ.

25 Sep 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top