PLEASE LOGIN TO KANNADANET.COM FOR REGULAR NEWS-UPDATES

 ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ದಲಿತ ಕುಟುಂಬಗಳಿಗೆ ಗರಿಷ್ಠ ಪರಿಹಾರ ಮತ್ತು ರಕ್ಷಣೆ, ಅಪರಾಧಿಗಳಿಗೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಮತ್ತು ಹೊಸಗುಡ್ಡದ ಹನುಮಮ್ಮಳ ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ, ದಿನಾಂಕ ೧೨-೦೯-೨೦೧೪ ರಂದು ಗಂಗಾವತಿ ಬಂದ್ ಕರೆಯಲಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಾಧ್ಯಕ್ಷ ಭಾರದ್ವಾಜ್  ತಿಳಿಸಿದ್ದಾರೆ. 
        ದಿನಾಂಕ ೧೦-೦೯-೨೦೧೪ ರಂದು ಗಂಗಾವತಿಯ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಬಂದ್ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲು ದಿನಾಂಕ ೧೨-೦೯-೨೦೧೪ ರಂದು ಗಂಗಾವತಿ ಬಂದ್ ಮಾಡಲು ನಿರ್ಧರಿಸಲಾಗಿದೆ. ನಂತರ ಡಿವೈ.ಎಸ್.ಪಿ. ವಿನ್ಸೆಂಟ್ ಶಾಂತಕುಮಾರ್ ರವರ ಕರೆಯ ಮೇರೆಗೆ ಪೊಲೀಸ್ ಠಾಣೆಯಲ್ಲಿ ಡಿವೈ.ಎಸ್.ಪಿ.ಕಾರ್ಯಾಲಯದಲ್ಲಿ ಪೊಲೀಸ್ ಹಾಗೂ ಪ್ರಗತಿಪರ ಸಂಘಟನೆಯ ಮುಖಂಡರು ಸಭೆ ನಡೆಯಿತು. ಈ ಸಭೆಯಲ್ಲಿ ಬಂದ್ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಮತ್ತು ಶಾಂತಿ ಕಾಪಾಡಲು ಚರ್ಚಿಸಿದ ನಂತರ ಪೊಲೀಸ್ ಅಧಿಕಾರಿಗಳು ಶಾಂತಿಯುತ ಬಂದ್‌ಗೆ ಸಹಕರಿಸುವುದಾಗಿ ಹೇಳಿದರು. 

ಈ ಸಭೆಯಲ್ಲಿ ಸಂಘಟನೆಯ ಗೌರವಾಧ್ಯಕ್ಷ ಯು.ಲಕ್ಷ್ಮಣ, ಅಧ್ಯಕ್ಷರಾದ ಆರತಿ ತಿಪ್ಪಣ್ಣ, ಕಾರ್ಯಾಧ್ಯಕ್ಷರಾದ ಭಾರದ್ವಾಜ್, ಮುಖಂಡರಾದ ಕಂಠೆಪ್ಪ ಹೆಚ್., ಹುಲಿಗೆಪ್ಪ ಮಾದಗಿ, ಎ. ಹುಲಗಪ್ಪ, ನಾಗರಾಜ, ಹುಸೇನ್‌ಭಾಷಾ ತುರ್ವಿಹಾಳ, ಮರಿಯಪ್ಪ ಬರಗೂರು, ಹಂಪೇಶ ಹರಗೋಲು, ರಮೇಶ ಕೋಟಿ ಮತ್ತೀನ್ನಿತರ ಮುಖಂಡರು  ಪಾಲ್ಗೊಂಡಿದ್ದರು.

ಗಂಗಾವತಿ ನಾಗರೀಕರು, ವ್ಯಾಪಾರಸ್ಥರು, ಬೀದಿವ್ಯಾಪಾರಿಗಳು, ವರ್ಕ್ಸಶಾಪ್ ಇನ್ನೀತರ ಕೈ ಕಸುಬಿನ ಕೆಲಸಗಾರರು, ಕಾರ್ಮಿಕರು ಸಹಕರಿಸಿ ಸಾಮಾಜಿಕ ನ್ಯಾಯಕ್ಕಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಗಂಗಾವತಿ ನಾಗರೀಕರಲ್ಲಿ ಮನವಿ ಮಾಡಿದೆ.

Advertisement

0 comments:

Post a Comment

 
Top