ಕೊಪ್ಪಳ, ಸೆ. ೨೯. ಅಖಿಲ ಭಾರತ ಕಾರ್ಯನಿರ್ವಾಹಕ ಕನ್ನಡ ಪತ್ರಿಕಾ ಸಂಪಾದಕರ ಒಕ್ಕೂಟ ಹಾಗೂ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ನಾಲ್ಕು ದಿನಗಳ ಅಖಿಲ ಭಾರತ ಕನ್ನಡ ಪತ್ರಿಕಾ ಸಂಪಾದಕರ ಸಮಾವೇಶ ಅದ್ಧೂರಿಯಾಗಿ ಜರುಗಿತು.
ಬೆಂಗಳೂರಿನ ಕನ್ನಡ ಭವನ ನಯನ ಸಭಾಂಗಣದಲ್ಲಿ ಜರುಗಿದ ನಾಲ್ಕು ದಿನಗಳ ಸಮಾವೇಶದ ಉದ್ಘಾಟನೆಯನ್ನು ಸಣ್ಣ ನೀರಾವರಿ ಸಚಿವ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತ,

ಮೊದಲ ದಿನ ಭ್ರಷ್ಟ ವ್ಯವಸ್ಥೆಯ ವಿರುದ್ಧ ಮಾಧ್ಯಮಗಳ ಪಾತ್ರ ಎಂಬ ವಿಚಾರ ಸಂಕಿರಣದಲ್ಲಿ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ, ಮಾಜಿ ಸಚಿವರಾದ ಶ್ರೀಮತಿ ಮೋಟಮ್ಮ, ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಕೆ.ಆರ್. ಸಂಧ್ಯಾರೆಡ್ಡಿಯವರು ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ಬಿ.ಬಿ.ಎಂ.ಪಿ.ಯ ಮಾಜಿ ಮಹಾಪೌರರಾದ ಜೆ. ಹುಚ್ಚಪ್ಪ ಆಗಮಿಸಿದ್ದರು. ಹಿರಿಯ ಪತ್ರಕರ್ತರಾದ ಮುಳ್ಳಹಳ್ಳಿ ಸೂರಿ, ಉಜ್ಜನಿ ರುದ್ರಪ್ಪ, ವೈ. ಜೆ. ಅಶೋಕ ಕುಮಾರ, ಲಿಂಗರಾಜು ನೊಣವಿನಕೆರೆ, ಗ್ರಂಥಾಲಯ ನಿರ್ದೇಶಕ ಡಾ. ಸತೀಶಕುಮಾರ ಹೊಸಮನಿ ಉಪನ್ಯಾಸ ನೀಡಿದರು ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ರಾಮಣ್ಣ ಕೋಡಿಹೊಸಹಳ್ಳಿವಹಿಸಿಕೊಂಡಿದ್ದರು.

ಮೂರನೇ ದಿನ ಹಿಡನ್ ಕ್ಯಾಮರಾ ಎಂಬ ಭಯೋತ್ಪಾದಕ ಎಂಬ ವಿಚಾರ ಸಂಕಿರಣದಲ್ಲಿ ಕೂಡಲಸಂಗಮದ ಪಂಚಮಶಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿದ್ದರು. ಬಾಬು ಕೃಷ್ಣಮೂರ್ತಿ ವಹಿಸುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ವಿ.ಎಸ್. ಉಗ್ರಪ್ಪ, ಚಲನಚಿತ್ರ ಕಲಾವಿದರಾದ ಬ್ಯಾಂಕ್ ಜನಾರ್ಧನ್‌ರವರು ಹಿರಿಯ ಐ.ಎ.ಎಸ್. ಅಧಿಕಾರಿ ಡಿ.ಎಸ್. ಅಶ್ವಥ್, ಕೆ.ಎ.ಎಸ್. ಅಧಿಕಾರಿ ಮಲ್ಲಿನಾಥ್ ಮತ್ತು ಸಂಸ್ಥೆಯ ಅಧ್ಯಕ್ಷ ರಮೇಶ ಸುರ್ವೆ ಉಪಸ್ಥಿತರಿದ್ದರು.

ಸಮಾವೇಶದ ಕೊನೆಯ ದಿನ ಪ್ರಿಂಟ್ ಮೀಡಿಯಾ ಎದುರಿಸುತ್ತಿರುವ ಸವಾಲುಗಳು ಎಂಬ ವಿಚಾರ ಸಂಕಿರಣದಲ್ಲಿ, ಶ್ರೀ ವನಕಲ್ಲು ಮಲ್ಲೇಶ್ವರ ಮಹಾ ಸುಕ್ಷೇತ್ರ ಮಠದ ಹೆಗ್ಗುಂದದ ಶ್ರೀ ಬಸವ ರಮಾನಂದ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಲಿದ್ದು. ಮಾಜಿ ತೋಟಗಾರಿಕೆ ಸಚಿವರಾದ ಶಶಿಕಾಂತ ಅಕ್ಕಪ್ಪ ನಾಯಕ ಮತ್ತು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷರು ಪ್ರೊ. ಚಂದ್ರಶೇಖರ್ ಪಾಟೀಲ್‌ರವರು ಉಪಸ್ಥಿತರಿರುತ್ತಾರೆ. ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರು ಮತ್ತು ಸಾಹಿತಿಗಳಾದ ಭಾಗ್ಯಕೃಷ್ಣಮೂರ್ತಿಯವರು ವಹಿಸುತ್ತಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಾಜಿ ಶಾಸಕರಾದ ನೆ.ಲ. ನರೇಂದ್ರಬಾಬು, ಮಾಜಿ ಸಚಿವ ಪ್ರಭಾಕರ ರಾಣೆ ಇತರರಿದ್ದರು.
ಇದೇ ಸಂದರ್ಭದಲ್ಲಿ ಕನ್ನಡದ ೫೦ ಸಾಹಿತ್ಯ ಕೃತಿಗಳಿಗೆ, ೧ ಲಕ್ಷ ರೂ. ನಗದು ಬಹುಮಾನದ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಾಲ್ಕು ದಿನಗಳ ಕಾಲ ಲಂಕೇಶ ನಾಟಕೋತ್ಸವದಲ್ಲಿ ವೇಣುಗೋಪಾಲ ನಿರ್ದೇಶನದಲ್ಲಿ ಗಿಳಿಯು ಪಂಜರದೊಳಿಲ್ಲ, ಸಂಪಂಗಿರಾಮು ನಿದೇರ್ಶನದಲ್ಲಿ ಸಿದ್ಧತೆ, ರಾಘವೇಂದ್ರ ನಾಯಕ್ ನಿರ್ದೇಶನದಲ್ಲಿ ತೆರೆಗಳು ಹಾಗೂ ಡಿ.ಕೆ. ಸಿಂಧೆ ನಿರ್ದೇಶನದಲ್ಲಿ ಕ್ರಾಂತಿ ಬಂತು ಕ್ರಾಂತಿ ನಾಟಕಗಳು ಪ್ರೇಕ್ಷಕರ ಮನಸೂರೆಗೊಂಡವು. ಕಾರ್ಯಕ್ರಮದಲ್ಲಿ ಜಾನಪದ ಗಾಯನ, ನೃತ್ಯ, ಚಲನಚಿತ್ರ ಗೀತೆಗಳ ಸಂಗೀತ, ಭರತನಾಟ್ಯ, ಹರಿಕಥಾ ಪ್ರಸಂಗ, ಕಾವ್ಯ ವಾಚನ, ಮಿಮಿಕ್ರಿ ಹೀಗೆ ವಿಭಿನ್ನವಾಗಿ ನಡೆಯಿತು ಜೊತೆಗೆ ಮಂ. ಅ. ವೆಂಕಟೇಶರಿಂದ ೨೦೦೦ ಪತ್ರಿಕೆಗಳ ಪ್ರದರ್ಶನ, ಬದರಿನಾಥ ಪುರೋಹಿತರಿಂದ ವ್ಯಂಗ್ಯಚಿತ್ರ ಪ್ರದರ್ಶನ, ರವಿನಾಯಕ್ ಮಾನ್ವಿಯವರಿಂದ ಏಕವ್ಯಕ್ತಿ ಚಿತ್ರ ಪ್ರದರ್ಶನ ಹಾಗೂ ಸಚಿನ ಸುರ್ವೆರಿಂದ ಪತ್ರಿಕೋದ್ಯಮ ಕುರಿತ ಪುಸ್ತಕ ಪ್ರದರ್ಶನ ಜರುಗಿದವು. ಸುರ್ವೆ ಪತ್ರಿಕೆ ಸಂಪಾದಕ ರಮೇಶ ಸುರ್ವೆ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಸಿ. ವಿ. ಚಂದ್ರಶೇಖರ, ನಿವೃತ್ತ ಐ.ಎ.ಎಸ್. ಅಧಿಕಾರಿ ಡಾ. ಖ. ಎಸ್. ಅಶ್ವಥ್, ಪಾರಿವಾಳ ಸಂಪಾದಕ ಅತ್ತಿಕುಪ್ಪೆ ರವಿಕುಮಾರ, ನಿವತ್ತ ಕೆ.ಎ.ಎಸ್ ಅಧಿಕಾರಿ ಕೆ. ಮಲ್ಲಿನಾಥ ಮತ್ತು ಬದಲಾವಣೆ ಪತ್ರಿಕೆ ಸಂಪಾದಕ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ವಿಶೇಷ ಆಸಕ್ತಿಯಿಂದ ಸಮಾವೇಶ ಅದ್ಧೂರಿಯಾಗಿ ಯಶಸ್ವಿಯಾಯಿತು.
0 comments:
Post a Comment
Click to see the code!
To insert emoticon you must added at least one space before the code.