ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ಕೊಪ್ಪಳದ ಶ್ರೀ ಧರ್ಮಶ್ರೀ ವಿವಿದ್ದೋಶ ಸೇವಾ ಸಂಸ್ಥೆ ಕೊಪ್ಪಳ ಇವರು ಹ್ಯಾಟಿ ಗ್ರಾಮದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಕಾರ್ಯಕ್ರಮವನ್ನು ಗ್ರಾಮದ ಹಿರಿಯರಾದ ಶ್ರೀ ಮುದೆಗೌಡ ಪೋ ಪಾಟಿಲ ಇವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೆಡ್ಕ್ರಾಸ್ ಸಂಸ್ಥೆಯವತಿಯಿಂದ ಡಾ.ಹಿಮನ್ಸ ವೆಂಕೆಟೇಶ ನಾಯಕ್ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಸುರೇಶ ಬಿಸರಳ್ಳಿ ದೊಡ್ಡಬಸಪ್ಪ ಹಾಲಳ್ಳಿ ಶ್ರೀಮತಿ ಜಯಶ್ರಿ ಬಾರಕೇರ ಶ್ರೀಮತಿ ಶಕುಂತಲಾ ಅಂಬಿಗೇರ ಗಾಳೆಪ್ಪ ಮಳ್ಳಿಕೇರಿ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಸುವರ್ಣಲತಾ ಗೋಂತಕರ ಅಧ್ಯಕ್ಷತೆ ವಹಿಸಿದ್ದರು. ಈಕಾರ್ಯಕ್ರಮದ ಬಗ್ಗೆ ವೆಂಕಟೇಶ ನಾಯಕ ಅವರು ರಕ್ತದಾನ ಮಹತ್ವದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟರು.
ಈ ಕಾರ್ಯಕ್ರಮದ ನಿರೂಪಣೆಯನ್ನು ತೋಟಪ್ಪ ಕಾಮನೂರ ಗೈದೆರೆ ದೇವಿಂದ್ರಪ್ಪ ಹಿಟ್ನಾಳ ವಂದಿಸಿದರು ನಂತರ ನಡೆದ ರಕ್ತದಾನ ಕಾರ್ಯಕ್ರಮದಲ್ಲಿ ಯುವಕ ಯುವತಿಯರು ಅತೀ ಉತ್ಸುಕತೆಯಿಂದ ಭಾಗವಹಿಸಿ ರಕ್ತದಾನ ಮಾಡಿದರು.
0 comments:
Post a Comment
Click to see the code!
To insert emoticon you must added at least one space before the code.