PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, - ನಗರದ ರೆಡ ಕ್ರಾಸ್ ಬ್ಲಡ ಬ್ಯಾಂಕ ರಾಜ್ಯದಲ್ಲಿ ಮಾದರಿಯನ್ನಾಗಿಸಲೂ ಅಗತ್ಯ ಅನುದಾನ ಹಾಗೂ ಸೌಕರ್ಯ ಒದಗಿಸಲೂ ಸದಾ ಬದ್ದರಿರುವದಾಗಿ ಶಾಸಕ ರಾಘವೇಂದ್ರ  ಹಿಟ್ನಾಳ ಭರವಸೆ ನೀಡಿದರು.
 ಅವರು ಮಂಗಳವಾರ ಬೆಳಿಗ್ಗೆ  ನಗರದ ಜಿಲ್ಲಾ ಆಸ್ಪತ್ರೆಯಲ್ಲಿರುವ ರೆಡ ಕ್ರಾಸನ ಬ್ಲಡ ಬ್ಯಾಂಕನಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದರು.
ರಕ್ತದಾನ ಶ್ರೇಷ್ಠದಾನವಾಗಿದೆ. ಬಡ - ಶ್ರೀಮಂತನ ಜೀವದಾನ ರಕ್ತದಿಂದ ಮಾತ್ರ ಸಾಧ್ಯ. ಕೊಪ್ಪಳ ಬ್ಯಾಂಕ್ ರಾಜ್ಯದಲ್ಲಿ ನೂತನ ತಂತ್ರಜ್ಞಾನವುಳ್ಳ ಯಂತ್ರಗಳಿದ್ದು ಜಿಲ್ಲೆಯ ಕಟ್ಟ ಕಡೆಯ ವ್ಯಕ್ತಿಗೂ ಸಹ ಇದು ಸಹಕಾರಿಯಾಗಲಿದೆ ಎಂದು ಹೇಳಿದರು.
ಕೊಪ್ಪಳ ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳಿದ್ದು ಅಪಘಾತಗಳ ಸಂಖ್ಯೆ ಹೆಚ್ಚು ಅಲ್ಲದೆ ಹೇರಿಗೆ ಸಂದರ್ಭದಲ್ಲಿಯೂ ಸಹ ರಕ್ತದ ಅವಶ್ಯಕತೆ ಇದ್ದು ರೆಡ್‌ಕ್ರಾಸ್ ಬ್ಲಡ್ ಬ್ಯಾಂಕ್ ಸೇವೆ ನೀಡುವ ಮೂಲಕ ಸಾರ್ಥಕ ಸೇವೆಗೆ ಶ್ರಮಿಸಿದೆ ಎಂದರು.
ಬ್ಲಡ್ ಬ್ಯಾಂಕ್‌ನ್ನು ರಾಜ್ಯದ ಮಟ್ಟದಲ್ಲಿ ಮಾದರಿಯಾಗಿಸಲು ಅಗತ್ಯ ವಿರುವ ಎಷ್ಟೇ ಅನುದಾನವಾದರೂ ತಾವು ಕೊಡಲು ಸಿದ್ದವೆಂದು ಹೇಳಿದ ಇವರು ನಿಸ್ವಾರ್ಥ ಈ ಸೇವೆಗೆ ಎಲ್ಲರೂ ಶ್ರಮಿಸೋಣವೇಂದರು..
ಈ ಸಂದರ್ಭದಲ್ಲಿ ರೆಡ್‌ಕ್ರಾಸ್ ಅಧ್ಯಕ್ಷ ಡಾ|| ಕೆ.ಜಿ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ರೆಡ್‌ಕ್ರಾಸ್ ಉಪಾಧ್ಯಕ್ಷ ಡಾ|| ಕರಮುಡಿ, ಕಾರ್ಯದರ್ಶಿ ಡಾ|| ಶ್ರೀನಿವಾಸ ಹ್ಯಾಟಿ, ನಿರ್ದೇಶಕ ಸೋಮರಡ್ಡಿ ಅಳವಂಡಿ, ಸುಧೀರ, ಸಂತೋಷ ದೇಶಪಾಂಡೆ, ರಾಜೇಶ, ಮಂಜುನಾಥ ಸಜ್ಜನ್, ಬಿ.ಕೆ. ಸಾಲಿ ಇತರರು ಉಪಸ್ಥಿತರಿದ್ದರು.

29 Jul 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top